ಆತ್ಮಾವಲೋಕನದ ಮಧ್ಯೆ..
ನಾನೊಬ್ಬ...ಕವಿ
ಕಣ್ಮುಚ್ಚಿದರೆ ಕಲ್ಪನಾ ವಿಲಾಸ ; ಕಣ್ತೆರೆದು ಬರಿಯಲೇ ಪ್ರಯಾಸ
ನೋಡ್ಲಿಲ್ಲವೇನೇ?
ತಳ ಹತ್ತಿದೆ ಹುಳಿ ಉಕ್ಕಿದೆ ಹಾಲು ಮರಳಿ
ನಾನೊಂದು...ಎನಿಗ್ಮಾ
ಸಿಹಿಯಾದ ಗುಟ್ಟು ; ಬಿಡಿಸಲಾರದ ಒಗಟು
ಎಲ್ಲಿರುವೆಯಮ್ಮ?
ಮೈಯೆಲ್ಲ ಅಂಟು ಸಿಗದೊಂದು ಶರಟು
ನಾನೋರ್ವ...ಗಾಯಕಿ
ಶ್ರುತಿ ಲಯ ಉಂಟು ; ಧ್ವನಿ ಸ್ವಲ್ಪ ಉರುಟು
ಕೇಳಿಲ್ಲಿ ಬಾರೇ..
ನಿನ್ನ ಕ್ಯಾರಿಯೋಕಿಯ ಜೋಕು ಮೆಚ್ಚಿ ಹೇಳಿದ್ದಾರೆ ಲಾಯಕ್ಕು
ನಾನೊಬ್ಬ...ಜಿಜ್ಞಾಸು
ಹೊಸತನ್ನು ಅರಿಯುವೆ ; ಬಹುಬೇಗ ಮರೆಯುವೆ
ತಿಳಿಯಲಿಲ್ಲವೇನೇ?
ಸರಕಾಯ್ತು ಹಳತು ತಂದಿಲ್ಲ ಹೊಸತು
ನಾನೊಂದು...*#$%^&* }:)
Rating
Comments
ಉ: ಆತ್ಮಾವಲೋಕನದ ಮಧ್ಯೆ..