ನಾನು ಇತ್ತೀಚೆಗೆ ಓದಿದ ಪುಸ್ತಕಗಳು

ನಾನು ಇತ್ತೀಚೆಗೆ ಓದಿದ ಪುಸ್ತಕಗಳು

ನಾನು ದಿನಕ್ಕೊಂದು ಪುಸ್ತಕ ಓದಬೇಕೆಂದುಕೊಂಡಿದ್ದೇನಷ್ಟೆ?
ಆ ಪ್ರಕಾರ ಒಂದು ವಾರ ಕಳೆದುದು .
ಈ ಅವಧಿಯಲ್ಲಿ ನಾನು ಓದಿದ ಪುಸ್ತಕಗಳು ಹೀಗಿವೆ.

೧) ರಾಕೇಶ್ ಮೋಹನರ ಹಿಂದೀ ನಾಟಕದ ಅನುವಾದ - ಅಧೇ ಅಧೂರೆ
೨) ಅರಕ್ಷಣೀಯರು - ಬಂಗಾಲಿಯ ಶರತ್ ಚಂದ್ರರ ಸಾಮಾಜಿಕ ಕಾದಂಬರಿ
೩) ಅರವಿಂದರು . ಇದು ಅವರಿನ್ನೂ ಮಹಾತ್ಮರಾಗುತ್ತಿರುವಾಗಲೇ ಶಂ.ಬಾ,ಜೋಷಿಯವರು ಬರೆದ ಪುಸ್ತಕ . ಭಾರತದ ಜನರ ಕಳೆದ ಸಾವಿರವರ್ಷದ ಅವನತಿಯ ಕಾರಣ , ಮಾನಸಿಕವಾಗಿ ಬ್ರಿಟಿಷರ ದಾಸ್ಯ , ಮನಸ್ಸು ಕುರಿತು ಶಂಬಾ ವಿಚಾರ ಓದತಕ್ಕುದು ... ಮೊದಲ ಪುಟಗಳಲ್ಲಿ
೪) ಭಾಷೆಯ ಕುರಿತು ನೀವೇನು ಬಲ್ಲಿರಿ - ಶಂಕರಭಟ್ಟರ ಹಳೆಯ ಪುಸ್ತಕ . ಭಾಷೆಯ ಕುರಿತು ಆಸಕ್ತಿ ಇರುವವರು ಓದಬೇಕಾದ ಪುಸ್ತಕ . ( ಇದು ಇರೋದು http://dli.iiit.ac.in ತಾಣದಲ್ಲಿ )
೫) ಗಾಳಿಗೋಪುರ - ನಾ. ಕಸ್ತೂರಿ ಅವರ , ಗಾಳಿಯಂತೇ ಹಗುರವಾದ ಕಾದಂಬರಿ !

೬) ಚಹಾ ಕುರಿತ ಒಂದು ಕತೆ - ಪತ್ತೇದಾರಿ ಮತ್ತು ಚಹಾ ಕುರಿತ ಮಾಹಿತಿ ಕೂಡ ಇದೆ .
೭) ಸಾರ್ವಕಾಲಿಕ ಪುಸ್ತಕಗಳು - ಪುಸ್ತಕಗಳ ಕುರಿತು ಮತ್ತು ನಮ್ಮ ದೇಶದ ಪ್ರಮುಖ ಸಾಹಿತ್ಯದ ಕುರಿತು ಹಿತಮಿತವಾಗಿ ಪರಿಚಯ ಇಲ್ಲಿದೆ
೮) ಸ್ವರ್ಗಕ್ಕೆ ಸವಾರಿ ಮತ್ತು ಇತರ ಕತೆಗಳು

ಮೇಲಿನ ಮೂರು ಪುಸ್ತಕ ಮಕ್ಕಳಿಗಾಗಿ ನ್ಯಾಶನಲ್ ಬುಕ್ ಟ್ರಸ್ಟ್ ನ ಪುಸ್ತಕಗಳು .

ಇವಲ್ಲದೇ ಪಾ.ವೆಂ ಅವರ ಪದಾರ್ಥ ಚಿಂತಾಮಣಿಯ ಎರಡನೇ ಭಾಗ
ಮತ್ತು
ಕನ್ನಡ-ಸಂಸ್ಕ್ರುತ ಕೋಶ
ಇವನ್ನು ಇಳಿಸಿಕೊಂಡಿದ್ದು ಅರ್ಧ ಓದಿರುವೆ .

ಇವೆಲ್ಲ ಇಳಿಸಿಕೊಂಡ ಪುಸ್ತಕಗಳಾದರೆ ,
ಕೊಂಡುಕೊಂಡಿದ್ದ ’ದಕ್ಷಿಣ ಕರ್ನಾಟಕದ ಜನಪದ ಕತೆಗಳು ’ ಮತ್ತು ರಸ್ಕಿನ್ ಬಾಂಡ್ ನ ಸರಸಮಯ ಸಾಹಿತ್ಯವಾದ ’ The India I love' ಗಳನ್ನು ಕೂಡ ಓದಿ ಮುಗಿಸಿದ್ದೀನಿ .

Rating
No votes yet

Comments