ಆತ್ಮ ಕಥೆ - ಭಾಗ ೧

ಆತ್ಮ ಕಥೆ - ಭಾಗ ೧

ನನ್ನ ಹಿಂದಿನ ಬರಹದ ಪ್ರತಿಕ್ರಿಯೆಗಳಲ್ಲಿ ಕೆಲವು ನನ್ನನ್ನು ಚಿಂತನೆಗೆ ಹಚ್ಚಿದವು. ಅದರ ಫಲವೇ ಈ ಬರಹ. ದೇಹ ಮತ್ತು ಆತ್ಮಗಳ ವಿಷಯದಲ್ಲಿ ಇದು ಕೇವಲ ನನ್ನ ಥಿಯರಿ. ತಪ್ಪೆನಿಸಿದರೆ ಹೆಚ್ಚು ತಿಳಿದವರು ಬೇಕಾದರೆ ಸಂವಾದಿಸಿ, ಸರಿಪಡಿಸಿ.

ಎಲ್ಲರಿಗೂ ತಿಳಿದಿರುವ ಹಾಗೆ, ಈ ದೇಹದಲ್ಲಿರುವ ಡಿ.ಎನ್.ಎ. ನಾವು ಹೇಗೆ ಕಾಣುತ್ತೇವೆಂಬುದನ್ನು ನಿರ್ಧರಿಸುತ್ತದೆ. ಜೊತೆಗೆ ಕೆಲವು ಖಾಯಿಲೆಗಳನ್ನು ಸಹ ನಮ್ಮ ತಂದೆತಾಯಿಯರಿಂದ ಬಳುವಳಿಯಾಗಿ ಕೊಡುತ್ತೆ. ಈಗ, ವೈದ್ಯರಲ್ಲಿಗೆ ಹೋದರೆ, ಅವರು ನಮ್ಮ ತಂದೆ/ತಾಯಿಗೆ ಡಯಾಬಿಟಿಸ್ ಇದ್ದರೆ, ನಮಗೂ ಬರಬಹುದು ಅಂತ ಹೇಳ್ತಾರೆ. ನಾವು ವ್ಯಾಯಾಮ, ಇತ್ಯಾದಿ ಮಾಡಿ ನಮ್ಮ ಶರೀರಕ್ಕೆ ಡಯಾಬಿಟಿಸ್ ಬರದಂತೆ ಕಾಪಾಡಬೇಕಾಗುತ್ತೆ. ಇದೆಲ್ಲ ಯಾಕೆ ಪ್ರಸ್ತಾಪಿಸುತ್ತಿದ್ದೇನೆಂಬುದು ನಾನು ಆತ್ಮದ ಬಗ್ಗೆ ಹೇಳಿದಾಗ ತಿಳಿಯುತ್ತೆ.

ದೇಹದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ. ಏಕೆಂದರೆ ಅದು ಎಲ್ಲರಿಗೂ ಕಾಣುವುದು. ಆದರೆ, ಈ ದೇಹಕ್ಕೂ ಮೀರಿದ ಒಂದು entity ನಮ್ಮಲ್ಲಿ ಇದೆಯೆಂದು ನಮಗೇ ಕೆಲವು ಸರ್ತಿ ಅರಿವಾಗುತ್ತೆ. ಇದನ್ನು ಒಂದು ಶಕ್ತಿ(energy) ಅಥವ ಆತ್ಮ ಎಂದು ಕರೆಯಬಹುದೇನೋ. ದೇಹ ಹೇಗೆ ತಂದೆತಾಯಿಯರಿಂದ ಬಂದಿದೆಯೋ, ಹಾಗೆ ಆತ್ಮ ಹಿಂದಿನ ಜನ್ಮದ ಆತ್ಮದಿಂದ transform ಆಗಿ ಬಂದಿರುತ್ತೆ. ಶಕ್ತಿ ಸೃಷ್ಟಿಯಾಗುವುದಿಲ್ಲ, ಮತ್ತು ಸಾಯುವುದಿಲ್ಲ, transform ಮಾತ್ರ ಆಗುತ್ತೆ(thermodynamics law ಪ್ರಕಾರ). ಹೀಗಾಗಿ ಆತ್ಮ ದೇಹದೊಡನೆ ಸಾಯುವುದಿಲ್ಲ, ಬದಲಾಗಿ ಇನ್ನೊಂದು ದೇಹ ಸೇರುತ್ತೆ, ಅಷ್ಟೆ.

ಈಗ ಆತ್ಮಕ್ಕೂ ದೇಹದ ಹಾಗೆ ಡಿ.ಎನ್.ಎ. ಇದೆ ಎಂದುಕೊಳ್ಳೋಣ. ಕೆಲವು ಮಕ್ಕಳು ಹುಟ್ಟಿನಿಂದಲೆ ಕಲಾನೈಪುಣ್ಯ ಹೊಂದಿರುತ್ತಾರೆ ಅಥವ ಸಿಕ್ಕಾಪಟ್ಟೆ ಬುದ್ಧಿವಂತರಾಗಿರುತ್ತಾರೆ. ಇದು ಈ ಆತ್ಮದ ಡಿ.ಎನ್.ಎ. ಪ್ರಭಾವ. ಜೊತೆಗೆ ಖಾಯಿಲೆಗಳ ತರಹದ ಕೆಟ್ಟ ಗುಣಗಳು ಸಹ. ಕೆಲವರು ಹುಟ್ಟಾ ಲೋಭಿಗಳಾಗಿರುತ್ತಾರೆ. ಈ ಲೋಭದ ಖಾಯಿಲೆ ಜಾಸ್ತಿಯಾಗದಂತೆ ತಡೆಗಟ್ಟಲು ಮನಸ್ಸಿನ ಮೇಲೆ ನಿಗಾ ಇಟ್ಟು ಕಾಪಾಡಬೇಕು. ಇಲ್ಲದಿದ್ದರೆ, ಡಯಾಬಿಟಿಸ್ ಹೇಗೆ ದೇಹವನ್ನು ಅವನತಿಗೆ ತಳ್ಳುತ್ತೋ, ಹಾಗೆ ಲೋಭ ಆತ್ಮ+ದೇಹದ ಟೋಟಲ್ ಪ್ಯಾಕೇಜನ್ನು ಅಧೋಗತಿಗೆ ತಳ್ಳುತ್ತೆ. ಮತ್ತೆ ವ್ಯಾಯಾಮ ಹೇಗೆ ದೇಹವನ್ನು ಗಟ್ಟಿ ಮಾಡುತ್ತೋ, ಹಾಗೆ ಧ್ಯಾನ(ಶಕ್ತಿಯನ್ನು ಒಂದು ಕಡೆ ಕೇಂದ್ರೀಕರಿಸುವ ಕ್ರಿಯೆ) ಆತ್ಮವನ್ನು ಗಟ್ಟಿ ಮಾಡುತ್ತೆ.

ಸರಿ, ಇದುವರೆವಿಗೂ ನಾನು ಹೇಳಿದ್ದು ಸರಿತೋರಿದ್ದರೆ, ಮುಂದಿನ ಪ್ರಶ್ನೆಯನ್ನು ಉತ್ತರಿಸಿ ನೋಡೋಣ.
ಈ ಆತ್ಮ ಅಥವ ಶಕ್ತಿ, ದೇಹದೊಳಗೆ ಯಾಕೆ ಸೇರುತ್ತದೆ? ತಾನೆ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲವೆ?

Rating
No votes yet

Comments