ಬದುಕಿದರೆ ನಿನ್ನೊಂದಿಗೆ; ಸತ್ತರೆ ಮಣ್ಣೊಂದಿಗೆ!

ಬದುಕಿದರೆ ನಿನ್ನೊಂದಿಗೆ; ಸತ್ತರೆ ಮಣ್ಣೊಂದಿಗೆ!

ನಾನು ನನ್ನ ಹೃದಯ ಅನಾಥವಾಗಿ ಇವತ್ತಿಗೆ 67ನೇ ದಿನ. ಯಾಕೋ ಬಂಗಾರ ಇಷ್ಟು ಹಠ ಮಾಡ್ತೀಯ? ನಿಂಗೆ ನನ್ನ ಬಗ್ಗೆ ಏನೂ ಅನ್ನಿಸ್ತಿಲ್ವ? ಒಂದು ದಿನ ನಿನ್ನ ಎಸ್ಸೆಮ್ಮೆಸ್ ಬರದಿದ್ರೆ ವಿಲವಿಲ ಒದ್ದಾಡಿ ಚಡಪಡಿಸ್ತಿದ್ದವನು 67 ದಿನದಿಂದ ಹೇಗಿರಬಹುದು ಅಂತ ಒಂದೇ ಒಂದು ಸಲ ಯೋಚ್ನೆ ಮಾಡು. ಬರೀ 67 ದಿನ ಅಲ್ಲ, 6-7 ವರ್ಷ ಆದ್ರೂ ನಾನ್ ನನ್ನ ಪ್ರೀತಿ ಸಾಯೋಕ್ ಬಿಡಲ್ಲ. ಮನಸ್ಸೊಳಗೊಂದು ಗಟ್ಟಿ ನಿರ್ಧಾರ ಮಾಡ್ಕೊಂಡಿದೀನಿ, ಬದುಕಿದರೆ ನಿನ್ನೊಂದಿಗೆ, ಸತ್ತರೆ ಮಣ್ಣೊಂದಿಗೆ…

ಪುಟ್ಟಾ, ಒಂದು ವಿಷಯ ನನ್ನ ಕಿವಿಗೆ ಬಿತ್ತು. ನಿಮ್ಮಪ್ಪ ಈ ಸಂಬಂಧ ಕೆಲವರಿಗೆ ಹೇಳಿದಾರೆ. ಅವರಲ್ಲೊಬ್ಬರು ಮಾತಾಡ್ತಾ ಮಾತಾಡ್ತಾ ನಂಗೆ ಈ ವಿಷ್ಯ ಹೇಳಿದ್ರು. ಯಾರಾದ್ರೂ ಗೊತ್ತಿದ್ರೆ ಅವರಿಗೆ ಹೇಳು ಅಂತ ನಂಗೇ ಸಲಹೆ ಕೊಟ್ರು! ಏನಾಗಿರಬೇಡ ನಾನು? ಕಣ್ಣು ತುಂಬಿ ಹೋಯ್ತು ಕಣ್ಣೀರಿಂದ… ಒಲ್ಲದ ಮನಸ್ಸಿನಲ್ಲೇ ಹ್ಹಾ.. ಆಯ್ತು ಅಂದೆ. ಆ ವಿಷಯ ನಿಜಾನೋ, ಸುಳ್ಳೋ ನಂಗೊತ್ತಿಲ್ಲ… ಆದ್ರೆ ನೀನು ನಂಗ್ ಮಾತ್ರ ಸ್ವಂತ, ನೆನಪಿಟ್ಕೊ…

ಕಳೆದ ಒಂದು ವಾರದಿಂದ ಹಠಕ್ಕೆ ಬಿದ್ದು ಕೆಲಸ ಮಾಟ್ತಿದೀನಿ. ಬೆಳಿಗ್ಗೆ 7 ಗಂಟೆಗೆ ಆಫೀಸ್, ಹತ್ತಾದ್ರೂ ವಾಪಸ್ ಬರಲ್ಲ. ಏನಾದ್ರೂ ಸಾಧಿಸಬೇಕು ಅನ್ನೋ ಹಠ ಬಂದಿದೆ. ನೀನು ಅಷ್ಟು ಸುಲಭದ ತುತ್ತಲ್ಲ. ನಿಂಗೋಸ್ಕರ ಏನ್ ಬೇಕಾದ್ರು ಮಾಡ್ತೀನಿ. ನಂಗೆ ನೀನ್ ಬೇಕು ಅಷ್ಟೆ. ಒಂದಿನ ನೀನ್ ಹೇಳಿದ ಹಾಗೆ ನಾನು ಎಲ್ಲವನ್ನು ಸಾಧಿಸ್ತೀನಿ. ಅವತ್ತು ನಿನ್ನನ್ನ ನನ್ನವಳನ್ನಾಗಿ ಮಾಡ್ಕೋತೀನಿ. ಈಗಿದು ಬರೀ ದೇಹ, ನೀನು ನನ್ನ ಜತೆಯಾದಾಗ್ಲೇ ಇದಕ್ಕೆ ಜೀವ ಬರೋದು. ಬರ್ತೀಯ ಅಲ್ವಾ? ಪ್ಲೀಸ್, ಇಲ್ಲ ಅನ್ಬೇಡ ಪುಟ್ಟಾ.. ನೀನು ‘ನೋ’ ಅಂದ್ರೆ ಅದನ್ನು ಸಹಿಸ್ಕೊಳೋ ಶಕ್ತಿ ಇಲ್ಲ ನಂಗೆ…

ಅವಾಗೆಲ್ಲಾ ಮೆಸೇಜ್ ಕಳಿಸ್ತಿದ್ದೆ ನಾನು, ಐ ಮಿಸ್ ಯೂ ಅಂತ. ಈಗ ಗೊತ್ತಾಗ್ತಿದೆ. ನಿಜವಾಗ್ಲೂ ಮಿಸ್ ಮಾಡ್ಕೊಳೋದು ಅಂದ್ರೆ ಏನು ಅಂತ… ಅಷ್ಟು ಪ್ರೀತಿಸಿದ ಹುಡುಗಿ ನೀನು, ಇಷ್ಟೇನಾ ಪ್ರೀತಿ ಅಂದ್ರೆ ಅನ್ನೋ ಥರಾ ಹೋಗ್ಬಿಟ್ಯಲ್ಲಾ ಬಂಗಾರ… ಕ್ಷಮಿಸಿ ನನ್ನ ಕಣ್ಣೊರೆಸೋ ಪ್ಲೀಸ್… ಈ 67 ದಿನದಲ್ಲಿ ನಾನು ಅತ್ತರೋದಿದ್ಯಲ್ಲ…? ಅಷ್ಟು ನನ್ನ ಇಷ್ಟು ವರ್ಷದ ಜೀವನದಲ್ಲಿ ಅತ್ತಿರಲಿಲ್ಲ. ಎಲ್ಲಿ ಹೋದ್ರೂ ನೀನೇ, ನೀನೇ, ನೀನೇ ನೆನಪಾಗ್ತಿಯ.. ಎಂಪೈರ್‍, ಟೋಟಲ್, ಮಲ್ಲೇಶ್ವರಂ, ಮ್ಯಾಕ್ ಡೊನಾಲ್ಡ್, ಕಾಫೀ ಡೇ, ಫ್ಲೈ ಓವರ್‍, ನನ್ ಬೈಕ್, ವಂಡರ್‍ ಲಾ, ಎಲ್ಲೆಲ್ಲೂ… ಅದೆಲ್ಲಾ ಜಾಗಕ್ಕೂ ಮತ್ತೆ ನಾವು ಒಟ್ಟಿಗೇ ಹೊಗ್ಬೇಕು… ಹೋಗ್ತೀವಿ ಅಲ್ವಾ ಪುಟ್ಟಾ…?

ದಿನಕ್ಕೆ 150 ಮೆಸೇಜ್ ಓದ್ತಿದ್ದ ಕಣ್ಣು, ದಿನಕ್ಕೆ 3-4 ಗಂಟೆ ನಿನ್ನ ವಾಯ್ಸ್ ಕೇಳ್ತಿದ್ದ ಕಿವಿ, ಎರಡೂ ಇದ್ದೂ ವೇಸ್ಟ್ ಅನ್ನೋ ಹಾಗಾಗಿದೆ. ಆದ್ರೂ ಪರ್ವಾಗಿಲ್ಲ. ನೀನು ಮತ್ತೆ ಜತೆಯಾಗ್ತೀಯ ಅನ್ನೋ ನಂಬಿಕೇಲಿ ನಾನು ಕಾಯ್ತೇನೆ. ಆದರೆ ನನ್ನ ಬಿಟ್ಟು ಬೇರೆ ಮದುವೆ ಆಗೋ ಆಲೋಚನೆಯನ್ನು ಪ್ಲೀಸ್ ಮಾಡ್ಬೇಡ ಪುಟ್ಟ. ಕೈ ಮುಗುದು ಬೇಡ್ಕೋತೀನಿ. ಅವತ್ತು ನಾನೇ ತೆಗೆದ ಚೆಂದದ ಫೋಟೋಗಳನ್ನ ಹುಡುಗನ ಮನೆಗೆ ಕಳಿಸಿಬಿಡ್ಬೇಡ… ನೀನು ನಂಗೆ ಮಾತ್ರ. ಹಂಗೇ, ನಾನು ನಿಂಗೆ ಮಾತ್ರ. we are Mr. and Mrs. Stupid ನೆನಪಿರಲಿ…

ಇಷ್ಟೆಲ್ಲ ಓದಿದ ನಂತರವಾದ್ರೂ i will be with yo. Dont worry ಅಂತ ಒಂದು ಎಸ್ಸೆಮ್ಮೆಸ್ ಕಳಿಸು. ಇಲ್ಲಾಂದ್ರೆ ನನ್ನಾಣೆ…

ಈ ಬದುಕಿಡೀ ನಿನ್ನ - ಸ್ಟುಪಿಡ್

ನಿಂಗೆ ನನ್ನ ಭಾವನೆಗಳೂ ಇನ್ನೂ ಅರ್ಥ ಆಗದಿದ್ರೆ ಈ ಬ್ಲಾಗ್ ಓದು.. ನಿನ್ನ ಮನಸ್ಸು ಕರಗಬಹುದೇನೋ... www.neenillade.wordpress.com

Rating
No votes yet

Comments