ಆತ್ಮ ಕಥೆ - ಭಾಗ ೨

ಆತ್ಮ ಕಥೆ - ಭಾಗ ೨

ಇದು ಶಾಮಲರ ಪ್ರತಿಕ್ರಿಯೆಯನ್ನು ಕುರಿತ ಬರಹ. ಅವರ ಅನಿಸಿಕೆ ಹೀಗಿತ್ತು :
"ಹುಟ್ಟು ಆಕಸ್ಮಿಕ ಮತ್ತು ಹುಟ್ಟು ಆಕಸ್ಮಿಕ ಎನ್ನಲು ಒಂದು ಸರಳ ಆಧಾರ - ಸಾವಿರಾರು ವೀರ್ಯಕಣಗಳು ಅಂಡಾಶಯದತ್ತ ನುಗ್ಗಿದಾಗ ಯಾವುದೋ ಒಂದು ಫಲಿತವಾಗುವುದು. ಪ್ರಪಂಚದಲ್ಲಿ ಹೆಚ್ಚು ಮಂದಿ unplanned pregnancy ಫಲಿತಾಂಶ ತಾನೆ (ಕೊನೇ ಪಕ್ಷ ನಮ್ಮ ಪೀಳಿಗೆಗೆ ಸೇರಿದವರಲ್ಲಿ)? "

ನನ್ನ ಉತ್ತರ : "ಹೌದು, ಫಲಿತವಾಗುವುದು ಯಾವುದೋ ಒಂದೆ. ಆದ್ರೆ, ಆ ಫಲಿತ ಭ್ರೂಣದ ಆತ್ಮದ ವಿಷಯ ತೆಗೆದುಕೊಂಡರೆ, ಅದು ಯಾವುದೋ ಒಂದು ದೇಹ ಸೇರುತ್ತದೆಯೇ? ಅಥವ, ತನ್ನ ಕರ್ಮ ಮೂಟೆಯಾನುಸಾರ ಒಂದು specific ದೇಹ ಸೇರುತ್ತದೆಯೋ? ನಾವು unplanned ಅಂದುಕೊಳ್ಳುತ್ತೀವಿ. ಆದರೆ, ಆತ್ಮದ plan ನಮಗೆ ಗೊತ್ತೆ?"

ಶಾಮಲರ ಪ್ರತ್ಯುತ್ತರ : "ಆತ್ಮಕ್ಕೆ ಕರ್ಮದ ಹೊರೆ ಇದ್ದರೂ ಆ ಕರ್ಮದ ಪರಿಣಾಮ ಆ ಹೊಸ ದೇಹದ ಮೆಲಾಗಬಹುದೇನೋ? ಯಾವುದೋ ಒಂದು ಆತ್ಮಕ್ಕೆ, ಅದರ ಕರ್ಮದ ಹೊರೆಗೆ ಮ್ಯಾಚ್ ಆಗುವಂತೆ ದೇಹದ custom made ನಿರ್ಮಾಣ ಆಗುತ್ತದೆಯೇ?"

ಶಾಮಲ ಹೇಳಿದಂತೆ ಯಾವುದೋ ಒಂದು random ಭ್ರೂಣದೊಳಗೆ ಒಂದು ಆತ್ಮ ಸೇರಿಕೊಳ್ಳುತ್ತೆ ಅಂದುಕೊಳ್ಳೊಣ. ಮುಂದೆ ಆಗುವುದೆಲ್ಲವೂ ಸಹ random ಅಂದುಕೊಳ್ಳಬೇಕಾಗುತ್ತೆ. ಉದಾಹರಣೆಗೆ, ತಾಯಿ ತನ್ನ ಭ್ರೂಣದ ಹತ್ಯೆ ಮಾಡಬಹುದು. ಆಗ ಆತ್ಮ ಯಾವುದೇ ಕರ್ಮ ಮಾಡಲಾಗದೆ ಮತ್ತೆ ಆತ್ಮವಾಗುತ್ತೆ. ಅಥವ, ಆ ತಾಯಿ ಮಾದಕದ್ರವ್ಯ ಸೇವಿಸಿ, ಹೊರಬರುವ ಮಗು ವಿಕಲಚೇತನವಾಗಿರುವಂತೆ ಮಾಡಬಹುದು. ಈ random theory ಯಲ್ಲಿ, ಆತ್ಮ ತನ್ನ ಕರ್ಮದ ಮೂಟೆಗೆ ಮ್ಯಾಚ್ ಆಗುವಂತಹ custom made ದೇಹದ ರಚನೆಯಲ್ಲಿ ತೊಡಗಿಕೊಂಡರೂ ಅದು ಸಫಲವಾಗುವುದು random ಆಗುತ್ತೆ!

ಅಥವ, ಹುಟ್ಟು ಆಕಸ್ಮಿಕವಲ್ಲವೆಂದು ನಂಬಿದರೆ, ಆಗ ನನ್ನ ಯಾಚನಾಲಹರಿ ಹೀಗೆ ಸಾಗುತ್ತೆ. ಆತ್ಮ ತನ್ನ "ಡಿ.ಎನ್.ಎ."ಗೆ ಸರಿಹೊಂದುವಂತಹ ತಂದೆತಾಯಿ, ಮನೆ, ಪರಿಸರ ನೋಡಿಕೊಂಡು ಅಲ್ಲಿನ ಭ್ರೂಣದ ಒಳಗೆ ಸೇರುತ್ತೆ. ಇದು ಆ ಭ್ರೂಣದ ಆತ್ಮ ಮತ್ತು ಮುಂದೆ ಜೀವನದಲ್ಲಿ ಅದು interact ಮಾಡುವ ಎಲ್ಲ ಆತ್ಮಗಳ ಪೂರ್ವಯೋಜಿತ ಪ್ಲಾನ್ ಅನ್ನಬಹುದೇನೋ. ಉದಾಹರಣೆಗೆ : ಒಂದು ಆತ್ಮದ ಡಿ.ಎನ್.ಎ.ಯಲ್ಲಿ ಹಿಂದೂಸ್ತಾನಿ ಸಂಗೀತ ಕಲೆ ಬಹಳ ಪ್ರಮುಖವಾಗಿರುತ್ತೆ. ಅದು ಭೀಮಸೇನ್ ಜೋಷಿಯವರ ಆತ್ಮ ಅಂದುಕೊಳ್ಳೋಣ. ಅವರು ದೂರದ ಬೆಲ್ಜಿಯಮ್ನಲ್ಲಿ ಹುಟ್ಟದೆ ಭಾರತದಲ್ಲಿ, ಅದೂ ಹಿಂದೂಸ್ತಾನಿ ಸಂಗೀತ ಕೇಳುವ ಕಡೆ ಹುಟ್ಟಿದರು. ಹಿಂದುಸ್ತಾನಿ ಸಂಗೀತ ಕಲಿಯಲೇ ಬೇಕೆಂದು ಗುರುಗಳನ್ನು ಹುಡುಕಿ, ಪಟ್ಟು ಹಿಡಿದು ಕಲಿತರು.

ಮೇಲಿನಂತೆ ಯೋಚಿಸಿದರೆ, ಹುಟ್ಟು, ಸಾವು, ಮತ್ತು ಜೀವನದ ಮಹತ್ತರ ಘಟನೆಗಳು ಆತ್ಮದ ಹಳೆಯ ಕರ್ಮಾನುಸಾರ preplanned ಇರಬಹುದು. ಮಿಕ್ಕಿದ್ದು, ಆತ್ಮಕ್ಕೆ ಹೊಸ ಕರ್ಮದ effect ಸೇರಿಸಲು ಈ ದೇಹ ಮಾಡುವ random ಕ್ರಿಯೆ ಇರಬಹುದು.

Rating
No votes yet

Comments