ಖಗೋಳ ವಿಜ್ಞಾನ ವರ್ಷ - ೨೦೦೯

ಖಗೋಳ ವಿಜ್ಞಾನ ವರ್ಷ - ೨೦೦೯

ಈ ೨೦೦೯ ರ ವರ್ಷವನ್ನ ಖಗೋಳ ವಿಜ್ಞಾನವರ್ಷ ಎಂದು ಘೋಷಿಸಲಾಗಿದೆ!

ಮಾನವನ ಇತಿಹಾಸದ ಸಾವಿರಾರು ವರ್ಷಗಳಲ್ಲಾಗದಷ್ಟು ಬದಲಾವಣೆಗಳು ಕಳೆದ ಐವತ್ತು ವರ್ಷಗಳಲ್ಲಾಗಿವೆ.
ಅದರಲ್ಲಿ ಒಂದು ಬೆಳಕು ತರುವ ಕೊಳಕು. ಅಂದ್ರೆ ಲೈಟ್ ಪಲ್ಯೂಶನ್.
ಅದರ ದೆಸೆಯಿಂದಾಗಿ, ಬಹಳ ಜನಕ್ಕೆ ಆಕಾಶದಲ್ಲಿ ಏನಿರಬಹುದೆಂಬ ಹೊಳಹೂ ಇರದೇ‌ ಹೋಗಿದೆ.

ಅದಕ್ಕೊಂದು ತಡೆ ಹಾಕೋಣ. ಕತ್ತಲನ್ನು ಹುಡುಕಿ ಹೋಗುತ್ತಾ‌ ಆಗಸದಲ್ಲಿರುವ ನೋಟಗಳನ್ನು ಆನಂದಿಸೋಣ.
ನಡೆಯಿರಿ. ಜೊತೆಗೆ ಮಕ್ಕಳನ್ನೂ ಕರೆದೊಯ್ಯಿರಿ. ಅವರಿಗೂ‌ ಆಕಾಶದ ಹುಚ್ಚು ಹತ್ತಿಸಿಬಿಡಿ :)

ಏಕೆಂದರೆ, ಒಂದು ಸಲ ಈ‌ ಹುಚ್ಚು ಹತ್ತಿದರೆ, ಅದು ಜೀವಮಾನ ಪೂರ್ತಿ ಬಿಡದು;

ಮತ್ತೆ ಅದಕ್ಕಾಗಿ ಅವರು ನಿಮಗೆ ಆಭಾರಿಯಾಗಿಯೂ‌ ಇರುತ್ತಾರೆ!

-ಹಂಸಾನಂದಿ

ಕೊ.ಕೊ: ಅಂದ ಹಾಗೆ, ಇದು ನಾನು ಉಬುಂಟು ವಿನಲ್ಲಿ ಬರೆದ ಮೊದಲ ಬ್ಲಾಗ್ ಬರಹ :)

Rating
No votes yet

Comments