ನಾನು ಹಾವನ್ನು ಕೂಲ್ಲಲಿಲ್ಲ. ಅದರೆ ಸುಟ್ಟುಹಾಕಿದೆ.
![]() |
From HAVU |
ಚಿತ್ರದಲ್ಲಿರುವುದು ಮಣ್ಣಮುಕ್ಕಹಾವು. ಅದು ಸುಮಾರು ಹತ್ತು ಅಂಗಲಕ್ಕಿಂತ ದೊಡ್ಡದಾಗೆನೂ ಇರಲಿಲ್ಲ. ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೆಲ ಹಾವುಗಳು ವಿಷಕಾರಿಯಲ್ಲ. ಆದರೆ ಅವುಗಳು ಹುಟ್ಟಿಸುವ ಭಯ ಮಾತ್ರ ಭಯಂಕರವಾದದು. ಹೀಗಾಗಿ ಕೆಲ ನಿರಪರಾಧಿ ಹಾವುಗಳು ವಿನಾಕಾರಣ ಮಾನವನಿಂದ ಮರಣ ಹೊಂದುತ್ತವೆ.
ನಮ್ಮ ಮನೆಯ ಅಂಗಳದಲ್ಲಿ ಒಂದು ಹಾವು ಓಡಾಡುತ್ತಿತ್ತು. ಅದು ಬಹಳ ಸುಂದರವಾಗಿತ್ತು. ಕಲ್ಲು ಸಂಧಿಂiiಲ್ಲಿ ಅದು ಸಪ್ಪಳವಿಲ್ಲದೇ ಜಾರುವಾಗ ಬಹಳ ಮೋಹಕವಾಗಿ ಕಾಣುತ್ತಿತ್ತು. ಅದು ಕೆ ಎಸ್ ನರಸಿಂಹಸ್ವಾಮಿಗಳ- ಬೇಲಿಯಲಿ ಹಾವು ಹರಿದಂತೆ- ಎಂಬ ಮಾತನ್ನು ನೆನಪಿಗೆ ತರುತ್ತಿತ್ತು.
ಒಂದು ದಿನ ಅದು ಸುರುಳಿಯಾಗಿ ಸುತ್ತಿಕೊಂಡು ದೇವರ ಪೀಟದ ಅಡಿಯಲ್ಲಿ ಕಂಡು ಬಂದಿತು. ಅದೇನೆಂದು ಗುರುತಿಸುವುದರೊಳಗೆ ದೈನಂದಿನ ಲೋಡ್ ಷೆಡ್ ನಲ್ಲಿ ವಿದುತ್ ಕಣ್ಮರೆಯಾಯಿತು. ಅದು ಹಾವು ಎನ್ನುವುದು ನನಗೆ ಮನದಟ್ಟಾಯಿತು.
ಕ್ರಿಕೆಟ್ ಸ್ಟಂಪಿನಿಂದ ಅದರ ತಲೆಗೆ ನೇರವಾಗಿ ಚುಚ್ಚುವುದು- ಎಂದು ನಿರ್ಧರಿಸಿದೆ. ಸ್ಟಂಪನ್ನು ಹಿಡಿದುಕೊಂಡೆ. ಹಾವು ಮನೆಯಲ್ಲಿ ಯಾವ ಕೋಣೆಗಾದೠ ನುಗ್ಗಿದರೆ? ಮನೆಯಲ್ಲಿ ಯಾರೂ ಇಲ್ಲ. ಒಬ್ಬನಿಗೆ ಧೈರ್ಯಸಾಲಲಿಲ್ಲ. ಅದು ಎಲ್ಲಿಗೆ ಓಡುತ್ತದೆ ಎಂದು ನೋಡುತ್ತಿರು ಎಂದು ನೆರೆಮನೆಯವನನ್ನು ಕರೆದು ಹೇಳಿದೆ. ತಕ್ಷಣದಿಂದ ಈ ಸುದ್ಧಿ ಮನೆ ಮನೆಗೆ ಹಬ್ಬಿತು. ಜನ ಬರಹತ್ತಿದರು. ತಲೆಗೊಂದು ಸಲಹೆ! ಒಬ್ಬ ಸೀಮೆ ಎಣ್ಣೆ ಹಾವಿಗೆ ಎರಚಲು ಹೇಳಿದ. ಒಂದು ಲೀಟರ್ ಸೀಮೆ ಎಣ್ಣೆ ಖರ್ಚಾಯಿತು. ಹಾವು ಅಲ್ಲಿಂದ ಜಾಗ ಖಾಲಿಮಾಡಿತು. ಸೀಮೆ ಎಣ್ಣೆ ಹಾವಿನ ಪಕ್ಕದಲ್ಲಿರುವ ಅಕ್ಕಿಯಮೇಲೂ ಬಿದ್ದಿದ್ದರಿಂದ ಆ ಅಕ್ಕಿ ಹಾಳಾಯಿತು. ಸಿಮೆಂಟ್ ನೆಲವಾದ್ದರಿಂದ ಅಥವಾ ಹಾವಿಗೆ ಪೊರೆ ಬಂದದ್ದರಿಂದ ಹಾವು ವೇಗವಾಗಿ ಓಡುತ್ತಿರಲಿಲ್ಲ. ಹೀಗಾಗಿ ನಾನು ನಾಲ್ಕು ಏಟು ಹಾಕಲು ಸಾಧ್ಯವಾಯಿತು. ಇನ್ನೊಂದೆರಡು ಏಟು ಹಾಕಿದರೆ ಹಾವು ಅಲ್ಲಿಯೇ ಸಾಯುತ್ತಿತ್ತು. ಎಲ್ಲರೂ ಒಕ್ಕೊರಲಿನಿಂದ ಮಾನಿಷಾದ ಮಾ ಚೀರತೊಡಗಿದರು. ಕೊಲ್ಲಬೇಡಿ.!! ಅದು ನಾಗರ ಹಾವು ಅದು ಬ್ರಾಹ್ಮಣ ಹಾವು ಕೊಲ್ಲಬೇಡಿ!!
ನಾನು ಪರಿಪರಿಯಾಗಿ ಬೇಡಿಕೊಂಡೆ. ಇನ್ನೆರಡೇ ಹೊಡತಕ್ಕೆ ಅದನ್ನು ಕೊಲ್ಲುತ್ತೇನೆ. ಆದರೆ ಜನ ಕೇಳಲಿಲ್ಲ. ಮುಂದಿನ ಕಾರ್ಯವನ್ನು ಜನರೇ ಕೈಗೆತ್ತಿಕೊಂಡರು! ಒಬ್ಬ ಹುಲ್ಲು ಮೆದೆ ಒಟ್ಟಿದ. ಇನ್ನೊಬ್ಬ ಅದಕೆ ಸೀಮೆ ಎಣ್ನೆ ಸುರಿದ. ಒಬ್ಬ ಅದರ ಮೇಲೆ ಅರೆಜೀವವಾದ ಹಾವನ್ನು ಮಲಗಿಸಿದ. ಒಬ್ಬ ಮನೆಯಲ್ಲೆಲ್ಲಾ ಹುಡುಕಿ ಹತ್ತು ಪೈಸೆ ನಾಣ್ಯ ತಂದು ಅದರ ತಲೆಯಮೇಲೆ ದೂರದಿಂದಲೇ ಇಟ್ಟ. ಒಬ್ಬ ಅದಕ್ಕೆ ಬೆಂಕಿ ಹಚ್ಚಿದ. ನಾನು ನೋಡುತ್ತಲೇ ನಿಂತೆ. -ನಾನು ಹಾವನ್ನು ಕೊಲ್ಲಲಿಲಲ್ಲ ॒॒॒॒॒॒॒॒॒॒॒॒॒॒॒॒॒.॒.
Comments
ಉ: ನಾನು ಹಾವನ್ನು ಕೂಲ್ಲಲಿಲ್ಲ. ಅದರೆ ಸುಟ್ಟುಹಾಕಿದೆ.