ಮಗುವಾಗುವಾಸೆ
ಮಗುವಾಗುವಾಸೆ
ಮನದೊಳಗೆ ಮಡುಟ್ಟಿರುವ
ವಿಷಯ-ವಿಷವ
ಹೊರಗಟ್ಟಿ
ಮಗುವಾಗುವಾಸೆ|
ಗತ್ತು ಗಮ್ಮತ್ತುಗಳ
ಕಿತ್ತೆಸೆದು
ಬೆತ್ತಲಾಗುವಾಸೆ|
ಅಳುಕು ತಳುಕುಗಳ
ಹೊಗಳಿಕೆ ತೆಗಳಿಕೆಗಳ
ಹುಳುಕು ಕೊಳಕುಗಳ ಹೊರಚೆಲ್ಲುವಾಸೆ|
ಒಳಗಿರದ
ತೋರಿಕೆಯ ನಗುವ ನಗದೆ
ಮನಬಿಚ್ಚಿ ಬಿಕ್ಕಳಿಸಿ ಅಳುವ ಆಸೆ|
ರವಿ ಇಣುಕದ
ಮನೆಬಿಟ್ಟು ಹೊರಗೋಡಿ
ಕುಣಿದು ಕುಪ್ಪಳಿಸುವಾಸೆ|
ಹೆತ್ತು ,ಹೊತ್ತು
ಹತ್ತಿಪ್ಪತ್ತು ವರುಷಗಳಲಿ
ಬಳಲಿ ಸತ್ತ ನಮ್ಮಮ್ಮನನು
ನೆನೆನೆನೆದು ದಿನವ ಕಳೆಯುವಾಸೆ||
Rating
Comments
ಉ: ಮಗುವಾಗುವಾಸೆ
ಉ: ಮಗುವಾಗುವಾಸೆ