ಓದುಗರೇ ನಿಮಗೆ ಈ ಮನ ಕಲಕುವ , 'ಮಾಯಾ' ರಾಕ್ಚಸಿಯ, ರಕ್ಕಸ ರಾಜ್ಯದ / ಪ್ರಜೆಗಳ ದೌರ್ಭಾಗ್ಯದ ಕಥೆ ಗೊತ್ತೇ?
ನಿಮಗೆ (ನೀವು ಈ ಎರಡು ದಿನಗಳ ಹಿಂದಿನ ಪೇಪರ್ ಓದಿದ್ದರೆ, ಟಿ ವಿ ನೋಡಿದ್ದರೆ ಇದು ಖಂಡಿತ ಗೊತ್ತಿರುತ್ತೆ)..
ಈ ಸುದ್ಧಿ ಓದಿ ಏನನಿಸುತ್ತೆ ಖಂಡಿತ ತಿಳಿಸಿ...
ಇದು 'ಮಾಯಾವತಿ' ಎನ್ನುವ ದುರುಳ ಹೆಂಗಸಿನ ಕಥೆ...
ಈ ಮಾಯಾ ಕನ್ಯೆ( ಅವರು ಇನ್ನು ಕುಮಾರಿ ಮಾಯಾವತಿ) ಗೆ , ಅವರ ಹುಟ್ಟಿದ ದಿನಕ್ಕೆ ವಿದೇಶದ ಹೂವು, ಬೇಕು,
ಮತ್ತು ಅವರ ಹುಟ್ಟಿದ ದಿವಸ ಎಸ್ಟೋ ಜನರ 'ಸತ್ತ ದಿವಸವೂ' ಆಗಿಬಿಡುತ್ತೆ...
ಪ್ರತಿ ಹುಟ್ಟಿದ ಹಬ್ಬದಲ್ಲೂ ಕೋಟಿಗಳ ಲೆಕ್ಕದಲ್ಲಿ ದೇಣಿಗೆ ಸಂಗ್ರಹಿಸಿ, ಹುಟ್ಟಿದ ಹಬ್ಬಕ್ಕೆ ಪೋಲು ಮಾಡಿ ಬಡವರ ಉದ್ದಾರದ ಭಾಷಣ ಬಿಗಿಯುತ್ತಾರೆ. ಇನ್ನು ಅವರ ಆದೇಶದ ಪ್ರಕಾರ ಅವರ ಪಕ್ಷದ ಗೂಂಡ ಶಾಷಕರು ಬಹಿರಂಗವಾಗಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ, ವ್ಯಾಪಾರಿಗಳಿಗೆ ಧಮಕಿ ಹಾಕಿ ಹಣ ವಸೂಲಿ ಮಾಡಿ , ನೈಜ ಸುಲಿಗೆಕೊರರನ್ನೇ ಮೀರಿಸುತ್ತಾರೆ.
ಪ್ರತಿ ಸಾರಿ ಕಾಂಗ್ರೆಸ್ಸ್ ಮತ್ತು ಸಮಾಜವಾದಿ ಪಕ್ಷ, ಹಾಗೂ ಬಿ ಜೆ ಪಿ ಬೆ0ಬಲಿಸಿದ ಇಲ್ಲಿಯ ಜನ ಈಗ ಅನಿವಾರ್ಯವಾಗಿ ಇವರನ್ನು ಬಹುಮತದಿಂದ ಆರಿಸಿ ತಂದ ಕಾರಣ ತಲೆ ಚೆಚ್ಚಿಕೊಲ್ಳುವನ್ತಾಗಿದೆ. ಇನ್ನು ಅದಕ್ಕಿಂತ ಚೋಧ್ಯ ಎಂದರೆ ತಾನು ಬದುಕಿರುವಾಗಲೇ ತನ್ನ ವಿಗ್ರಹ ಪ್ರತಿಸ್ಥಾಪಿಸಿದ್ದು.(ಎಲ್ಲಿಯಾದರೂ ಯಾರಾದರು ಬದುಕಿರುವಾಗಲೇ ವಿಗ್ರಹ ಮಾಡಿಸಿದ್ದು ನೋಡಿದ್ದೆರ?
ಕೇಳಿದ್ದೆರ?)
ಇನ್ನು ಈಕೆಯ ಬೆನ್ನ ಹಿಂದೆ ನೂರಾರು ಹಗರಣಗಳ ಸರಮಾಲೆಯೇ ಇದೆ..
ಆದರೆ ಈಕೆ ಅದನ್ನೆಲ್ಲಾ ಒಂದೊಂದು ಪಕ್ಷಕ್ಕೆ ಕೇಂದ್ರದಲ್ಲಿ ಬೆಂಬಲ ಕೂಟ್ಟು ಆ ಹಗರಣಗಳನ್ನೆಲ್ಲ ಸ್ವಲ್ಪ ದಿನಗಳ ಮಟ್ಟಿಗೆ( ಕೇಂದ್ರ ಸರಕಾರ ಪತನ ಅಥವಾ ಅವಧಿ ಮುಗಿಯುವ ತನಕ) ಪಾರು ಆಗಿಬಿಡುತ್ತಾಳೆ.. ....
ಇನ್ನು ಈಕೆ ಒಂದು ಸಾರಿ ಒಂದು ಸಾರಿ ಬಿ ಜೆ ಪಿ ಯನ್ನು ಮತ್ತೊಮೆ ಕಾಂಗ್ರೆಸ್ಸ್ ಅನ್ನು ಮಗದೊಮ್ಮೆ ಅಕಾಲ ಮ್ರುತ್ಯು ಗೆ ಈಡಾಗುವ ಮೂರನೇ ರಂಗ ಎಂಬದಕ್ಕು ಬೆಂಬಲಕ್ಕು ಕೊಟ್ಟು ತನ್ನ ಬೆಲೆ ಬೇಯಿಸಿಕೊಳ್ಳುತ್ತಾಳೆ.
ಒಮ್ಮೆ ವಾಜಪೇಯಿ ಸರಕಾರಕೆ ಮತ್ತು ವಯಪೇಯಿ ಅವರ ರಾಜ್ಯ ಸರಕಾರದ (ಉತ್ತರ ಪ್ರದೇಶದಲ್ಲಿ) ಅಧಿಕಾರ ಕೊಡದೆ ಕೈ ಕೊಟ್ಟದ್ದು ಇದೆ( ಇಲ್ಲಿ ಕರ್ನಾಟಕದಲ್ಲಿ ನಮ್ಮ ಕುಮಾರಣ್ಣನ ಸಚಾ ಹಾಗೆ ಮಾಡಿ ಮಣ್ಣು ತಿಂದದ್ದು ನೆನಪಿರಬಹುದು) ಇನ್ನು ಒಮ್ಮೆ ತಾಜ್ ಮಹಲ್ ಅನ್ನೇ ಮಾರಲು ಹೊರಟಿದ್ದು ಸಹ ಉಂಟು( ತಾಜ್ ಕಾರಿಡಾರ್ ಹೆಸರಿನ ಯೋಜನೆಯಲ್ಲಿ) ಇನ್ನು ಸಾಮಾನ್ಯ ಕೆಲ ಹಂತದ ವಂಶದಲ್ಲಿ ಹುಟ್ಟಿ ಹಾಗು ಹೀಗೂ ಪದವಿ ಪಾಸು ಆಗಿ ನಂತರ ಕಾನ್ಸಿ ರಾಮ್ ಎನ್ನುವ ಮಹಾನುಭಾವರೊಬ್ಬರ ಕೈಗೆ ಸಿಕ್ಕು ಅವರನ್ನೇ( ಕಾನ್ಸಿ ರಾಮ್ ) ಈಕೆಯನ್ನು ಜೀವನ ಪೂರ್ತಿ ಮರೆಯದ ಹಾಗೆ ಕಾಟ ಕೊಟ್ಟದ್ದು ಇದೆ, ಹೇಳಲು ಹೊರಟರೆ ಈ ತರಹದ ತುಂಬಾ ಘಟನೆಗಳಿವೆ..
ಇಂತಿಪ್ಪ ನಮ್ಮ ಈ ಮಾಯಾವತಿ ಈಗ ಮತೊಮ್ಮೆ ಒಂದು ಕೆಟ್ಟ ಕಾರಣಕ್ಕಾಗಿ ಸುದ್ಧಿಯಲ್ಲಿದ್ದಾಳೆ.. ಅದು ಪಿ ಡಬ್ಲು ಇಂಜಿನಿಯರ್ ಒಬ್ಬರ ಬರ್ಬರ ಹತ್ಯೆ( ಪೋಸ್ಟ್ ಮರತಂ ವರಧಿ ಪ್ರಕಾರ ಮೃತ ಇಂಜಿನಿಯರ್ ಗೆ ಸಾಯುವ ಮುಂಚೆ ಕರೆಂಟ್ ಶಾಕ್ ಕೊಟ್ಟು ೩೨ ಬಾರಿ ಇರಿದಿದ್ದರಂತೆ) ಕಾರಣಕ್ಕಾಗಿ.. ಇದು ಅವರ ದುಷ್ಟ ಶಾಸಕನೋಬ್ಬನ ಕೃತ್ಯ.. ಇನ್ನು ಅವರ ರಾಜ್ಯದಲ್ಲಿ ಯಾವೊಬ್ಬ ಅಧಿಕಾರಿಗೂ ಎದುರಾಡುವ ತಾಕತಿಲ್ಲ..
ಅಧಿಕಾರಿಗಳು ಅವರಿಗೆ ಗಡ ಗಡ ನಡುಗುತ್ತಾರಂತೆ. ಈ ತಾಯಿ ಮೊದಲು ಆಗಹೊರಟಿದ್ದು ಐ ಎ ಎಸ್ ಆಫೀಸರ್ , ಆಗ ಕಾನ್ಸಿ ರಾಮ್ ಬೆಟ್ಟಿಯಾಗಿ ನೀನು ಐ ಎ ಎಸ್ಸ್ ಆದರೆ ನೀನು ರಾಜಕಾರಣಿಗಳಿಗೆ ಡೊಗ್ಗು ಸಲಾಂ ಹೊಡೆಯಬೇಕು, ಆದರೆ ನನ್ನ ಜೊತೆಗೆ ಬಂದರೆ ಅವರೇ (ಐ ಎ ಎಸ್ಸ್ ) ನಿನಗೆ ಸಲಾಂ ಹೊಡೆಯುವ ಹಾಗೆ ಮಾಡುತ್ತೇನೆ ಎಂದರಂತೆ, ಅದಕ್ಕಾಗಿ ನಮ್ಮ ಮಾಯಕ್ಕ ಇದ್ದ ಉಪನ್ಯಾಸಕಿ ಹುದ್ದೆ ಬಿಟ್ಟು ಕಾನ್ಸಿ ರಾಮ್ ಅವರೊಂದಿಗೆ ಕೆಲ ಚಳುವಳಿಗಳಲ್ಲಿ ಬಾಗವಹಿಸಿ, ನಮ್ಮ ಜಯಲಲಿತಾ ಅವರ ತರಹ ನಾನ ಕರಾಮತ್ತು ತೋರಿಸಿ ಈಗ ಮೂರನೇ ಬಾರಿಗೆ ಸಿ ಎಂ ಆಗಿ ಬಡ, ಶ್ರೀಮಂತ ಜನರ ತೆರಿಗೆ ಹಣವನ್ನ ಸ್ವಾಹ ಮಾಡುತ್ತಾ, , ಜನರ ಪ್ರಾಣ ಹಿಂಡುತ್ತಿದ್ದಾಳೆ...
ಇಂತಿಪ್ಪ ನಮ್ಮ ಮಾಯಾ ರಾಣಿಯ ದುರುಳ ರಾಜ್ಯಬಾರ ಮತ್ತು ಹಣ ಸುಲಿಗೆ ಬಹಿರಂಗವಾಗಿ ನಡೆಯುತ್ತಿದೆ.. ಹಣ ಕೊಡಲೊಪ್ಪದ ಇಂಜಿನಿಯರ್ ಅನ್ನು ಅತ್ತ್ಯಂತ ಬರ್ಬರವಾಗಿ ಹೊಡೆದು ಕೊನೆಗೆ ಪೋಲಿಸ್ ಸ್ಟೇಷನ್ ಗೆ ಹೊಯ್ದು ಹಾಕಿ ಪೋಲಿಸರನ್ನ ಮತ್ತಸ್ತು ಕುಬ್ಜರನ್ನಾಗಿಸಿದ್ದು ಉಂಟು. ಒಬ್ಬ rowdy ಶಾಸಕ ಅವರ ಹೆಸರು ಹೇಳಿ ಬಹಿರಂಗವಾಗಿ ಹಣ ಕೇಳುವುದು ಕೇವಲ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ( ಅಲ್ಲಿ ಲಾಲು ವನ್ನು ಸೋಲಿಸಿದ್ದು ಜನರೇ) ಮಾತ್ರ ಕಾಣಲು ಸಾಧ್ಯ( ಕರ್ನಾಟಕದಲ್ಲೂ ನಮ್ಮ ಚೆನ್ನಿಗಪ್ಪ ಕುಮಾರಣ್ಣ ಪರವಾಗಿ ಹಣವನ್ನು ಗಣಿ ಧನಿಗಳಿಂದ ವಸೂಲು ಮಾಡಿದ್ದರು ಎಂದು ಆರೋಪ ಮಾಡಿದ ಗಣಿ ಧಣಿಗಳು ಈಗ ಚೆನ್ನಿಗಪ್ಪನ ಬೆನ್ನ ಹಿಂದಿದ್ದಾರೆ!)..
ಇನ್ನು ನಮ್ಮ ಮಾಯಕ್ಕನ ಮಹತ್ತರ ಆಸೆ ಎಂದರೆ ಈ ದೇಶದ ಪ್ರದಾನಿ ಆಗುವುದು.......!!!೧
ಹಾಗೇನಾದರು ಆದರೆ ನಮ್ಮ ದೇಶದ ಗತಿ?....
ಅಗಾಗ ಚುನಾವಣೆ ನಡೆಯುವ ಪಕ್ಕದ ರಾಜ್ಯಗಳಲ್ಲಿ ಬಾಷಣೆ ಬಿಗಿಯುತ್ತ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಬೊಗಳೆ ಬಿಟ್ಟು ಒಂದು ಸೀಟನ್ನು ಗೆಲ್ಲದೆ ಅಪಹಾಸ್ಯಕ್ಕೆ ಈದದದ್ದು ಉಂಟು..(ನಮ್ಮ ಕರ್ನಾಟಕ, ಮಧ್ಯ ಪ್ರದೇಶ, ರಾಜಸ್ಥಾನ, ಡೆಲ್ಲಿ ಯಲ್ಲಿ ಮಾತ್ರ ಒಂದಿಬ್ಬರು ಅದೂ ಅವರ ಸ್ವಂತ ಬಲದ ಮೇಲೆ ಆರಿಸಿ ಬಂದರು) ಈಗಾಗಲೇ ದೇಶದ ಪ್ರದಾನಿ ಆಗುವ, ಆದ ಜನರ ಪಟ್ಟಿಯಲ್ಲಿ, ಎಲ್ ಕೆ ಅಡ್ವಾಣಿ, ದೇವೇಗೌಡ (ಇವರ್ಗೆ ಇನ್ನು ಏನಾದರು ಜಾದೂ ನಡೆದು ಮಗದೊಮ್ಮೆ ತಾವೇ ಪ್ರಧಾನಿ ಆಗುವ ಕನಸು ಕಾಣುತ್ತಿದ್ದಾರೆ), ಲಾಲು, ಪವಾರ್, ಸೋನಿಯಾ, ಹೀಗೆ ತುಂಬಾ ದೊಡ್ಡದಿರುವ ಸರತಿಯಲ್ಲಿ ಅವರನ್ನೆಲ್ಲ ಹಿಂದಿಕ್ಕಿ ಮಾಯಕ್ಕ ತಾನು ಪ್ರಧಾನಿ ಆಗುವ ಆಸೆ ತಿಳಿಸುತ್ತಿದ್ದಾಳೆ...
ಇಂತಿಪ್ಪ ನಮ್ಮ ಮಾಯಕ್ಕನ ಚಾಳಿ ಇನ್ನ್ಯಾವ ಅಕ್ಕನಿಗೂ ಬಾರದಿರಲಿ, ಮತ್ತು ಆ ದೇವರು( ಆ ಉತ್ತರ ಪ್ರದೇಶದಲ್ಲಿ ಕೇವಲ ಈಗ ದೇವರೇ ದಿಕ್ಕು) ಉತ್ತರ ಪ್ರದೇಶದ ಜನರನ್ನ ಕಾಪಾಡಲಿ ಎಂದು ಬೇಡುವಾ.
ಈಗ ಹೇಳಿ ನಮ್ಮ ಈ ಮಾಯಕ್ಕನ ಕಥೆ ನಿಮಗೆ ಹೇಗನ್ನಿಸಿತು?.
Comments
ಉ: ಓದುಗರೇ ನಿಮಗೆ ಈ ಮನ ಕಲಕುವ , 'ಮಾಯಾ' ರಾಕ್ಚಸಿಯ, ರಕ್ಕಸ ರಾಜ್ಯದ / ಪ್ರಜೆಗಳ ದೌರ್ಭಾಗ್ಯದ ಕಥೆ ಗೊತ್ತೇ?