ವ್ಹಾಟ್ ಇಸ್ ಕಂಪ್ಯೂಟರ್..?

ವ್ಹಾಟ್ ಇಸ್ ಕಂಪ್ಯೂಟರ್..?

ಅರ್ಧ ಬೆಂಗಳೂರ್ ಸುತ್ತಾಡಿ, ಅವ್ಯನ್ಯೂ ರೋಡಿಂದ ಸೀದಾ ಬಸವೇಶ್ವರ ಸರ್ಕಲ್ ಗೆ ಬಂದು, ಆ ರೋಡಿಂದ, ಎದುರಿಗೆ ಮೂರ್ನಾಲ್ಕು ಜೋಡಿ-ಹಾವಿನ ಚಿತ್ರಗಳಂತೆ ಕಾಣುತ್ತಿದ್ದ ಟ್ರಾಫಿಕ್ ಸೈನ್-ಬೋರ್ಡ್ ಗಳನ್ನ್ decipher ಮಾಡಕಾಗ್ದೆ, ಡಿವೈಡರ್ ಇಲ್ದಿರೋ(ರಿಪೇರಿ ಅಂತ ಕಿತ್ತಾಕಿದ್ದು) ರೇಸ್-ಕೋರ್ಸ್ ರೋಡಿನ ಆ ಲೇನ್ ನಿಂದ ಈ ಲೇನ್ ಗೆ ಜಂಪ್ ಮಾಡಿದ್ದನ್ನ , ಸರ್ಕಲ್ ನಡುವೆ ನಿಂತಿದ್ದ ಮಾಮ ನೋಡಿ, ನಾ ಇನ್ನೇನು ಸರ್ಕಲ್ ಸುತ್ತಬೇಕು ಅನ್ನೋವಾಗ, ನನ್ನ ಜೊತೆ-ಜೊತೆಗೆ ನನ್ನಂತೆ ಇನ್ನೊಬ್ಬ ಬೈಕಿ-ಯನ್ನ ಹಿಡಿದು, ನನ್ನ ಲೈಸೆನ್ಸ್, ಅವ್ನ ಎಲ್ಲೆಲ್ಲಾರು ಕಸ್ಕಂಡು, ದೊಡ್ಡಮಾಮನ (ದೊಮಾ) ಹತ್ರ ಕರ್ಕಂಡೋಗಿ, "ನೋ ಎಂಟ್ರಿ ನುಗ್ಗವರೆ, ಸಾರ್" ಅಂತ ಪಿರ್ಯಾದಿಸಿ, ಇವ್ರದು ಎಲ್ಲೆಲ್ಲು ಅಂತ ಒತ್ತಿ ಹೇಳಿದಾಗ, ಪಾಪಾ, ನನ್ನ ಜೊತೆಗಿರುವನ ಮೀಟರ್‍ ಆಪಾಗಿದ್ದು ನೋಡಿ, ಒಳಗೊಳಗೆ ನಗು ಬಂದಿದ್ದು, "have u put the L board on your bike..?", ಅಂತ ದೊಮಾ ಅವನ್ನ ಕೇಳಿದಾಗ, ಅವನು "ಆ೦.. ಆ೦.." ಅಂತ ನನ್ನ ಕಡೆ ಪ್ಯಾಲ್ಪ್ಯಾಲಿ ತರ ನೋಡ್ದಾಗ, ತಡ್ಕಣಕಾಗ್ದೆ, ಜೋರಾಗಿ ನಕ್ಕಾಗ, ದೊಮಾ ನನಗೆ, "Didn't you see the board..?", ಅಂದಾಗಲೆ ನಾ ಸ್ವಲ್ಪ ರೈಸಾಗಿ, ಕನ್ನಡದಲ್ಲೇ ದೊಮಾ ನಿಗೆ, "ನಿಮ್ಮ ಬೋರ್ಡ್ಗ್ ಗಳು ಅರ್ಥ ಆಗಲ್ಲಾ.., ಅದು... ಇದು..", ಅಂತ ರೋಪ್ ಹಾಕಣ ಅಂತ ಟ್ರೈ ಮಾಡೋವಾಗ "talk like an educated" ಅಂತ(ಅಂದ್ರೆ, ಇಂಗ್ಲೀಶ್ ಲ್ಲಿ ಮಾತಾಡು) ದೊಮಾ ನನ್ನ ಬಾಯ್ಮುಚ್ಸಿ, "I will put 100 rupee fine on both of u", ಅಂತ ಡಿಕ್ಳೇರ್ ಮಾಡಿ, ಪ್ರಿಂಟರ್(ಸಣ್ಣ-ಪೋರ್ಟೇಬಲ್) ತಗಂಬಾ, ಅಂತ ಮಾಮಾನಿಗೆ, ಹೇಳಿ, ತನ್ನ blackberry-ಯಲ್ಲಿ, ನಮ್ಮ ಕುಲ-ಗೋತ್ರ ಎಲ್ಲಾ ಫೀಡ್ ಮಾಡಿ, ಒತ್ತಿದ್-ತಕ್ಷಣ, ಪ್ರಿಂಟ್ ಬಂದಿದ್ದು ನೋಡಿ
ನಾನು, "ಸಾರ್ ಅದು bluetoothಆ..?", ಅಂತ ಕೇಳ್ದಾಗ, ಒಂಥರಾ ಮೆಚ್ಚುಗೆಯಿಂದ ನನ್ನನ್ನ ನೋಡಿ, "yes" ಅಂದಾಗ, ನನ್ನ ಜೊತೆ ಸಿಕ್ಕವನು , ನೂರು ರುಪಾಯಿ ಮಡಗಿ, ರಸೀತಿನೂ ಕೇಳ್ದೆ, ಕಾಲ್ಕಿತ್ತ.

ಇಶ್ಟತ್ತಿಗಾಗಲೆ, ದೊಮಾ-ನಿಗೆ ಇಂಗ್ಲೀಶ್ ನಶೆ-ಯೇರಿದೆ ಅಂತ ನನಗೆ ಅರಿವಾಗಿತ್ತು. ನನ್ನ ಬೈಕ್ ನಂಬರ್ ಕೇಳಿ, ಎಂಟ್ರಿ ಮಾಡಿ, ದೊಮಾ ಶುರು ಹಚ್ಕಂಡ್ರು, "Are you an engineer..?", ನಾನು
ಅಕ್ಕ-ಪಕ್ಕ ನೋಡಿ,
"ಹೌದು ಸಾ" ಅಂದೆ,
"software..ಆ?",
"ಹೌದು ಸಾ"
(ದೊಮಾ ನ ನೋಟ ಎಲ್ಲೋ ದಿಗಂತದಾಚೆ ನೆಟ್ಟಿತ್ತು.)
"I was also an engineer, You see, once a caught an computer student, and I asked him, what is computer?"
"ಆ೦..ಆ೦.., ಯಾರಿಗೆ ಕೇಳಿದ್ರಿ ಸಾ?"
"computer student, I asked him, what is computer? and told him, if you answer correctly, I will let you without any fine."
"...."(ನಾನು ದುಡ್ಡು ಮಡಗಿ, ರಸೀತಿಗೆ ಕಾಯ್ತಿದ್ದೆ, ಆಗ್ಲೆ ಇಪ್ಪತ್ತು ನಿಮಿಶ ಕಳ್ದಿತ್ತು, ದೊಮಾ)
"that fellow, told some rubbish thing, like it is mix of hardware-software.., like something , something."
"...."
"You see, Earlier I was a lecturer, and I told him that,"
(ಎರಡು ಸೆಕೆಂಡು ಪಾಸು)
"Computer is an extension of human intelligence in electronic form."
(ಅರೆ ಕ್ಷಣ ನನ್ನತ್ತ ನೋಡಿದರು, ಮತ್ತೆ ದಿಗಂತದೆಡೆ ದ್ರುಷ್ಟಿ ಹೊಳ್ಳಿಸಿ)
"And I told him that, whoever asks him the same questiion, tell this answer only."
ನಾನು,(ಅತೀ ಧನ್ಯಭಾವದಿ, ತ್ರಿಕಾಲ-ಸತ್ಯದ ದರ್ಶನ ಪಡೆದವನಂತೆ, ನೋಟ ಸೂಸಿ)
"ಆಹಾ.., ಆಹಾ.., ಹೌದು ಸಾ..,"
"ಸಾ ನನ್ನ ರಸಿತಿ ಕೊಡಿ ಸಾ.."
ದೊಮಾ computer ಡೆಫಿನಿಶಿಸಿದ್ದರು,
ಒಂಥರಾ ನಿರಾಳ-ನಿರುಮ್ಮಳಾಗಿ, ಬೈಕಿನ ಮೇಲೆ ಪವಡಿಸಿದ್ದರು..
ನಾ ಕಾಲ್ಕಿತ್ತಿದ್ದೆ..

Rating
No votes yet

Comments