ಕನ್ನಡಸಾಹಿತ್ಯಡಾಟ್ಕಾಂ ಮನವಿಗೆ ರಾಜ್ ಕುಟುಂಬದ ಬೆಂಬಲ, ಜೊತೆಗೆ...
ಕನ್ನಡಸಾಹಿತ್ಯಡಾಟ್ಕಾಂ ಕನ್ನಡ ತಂತ್ರಾಂಶಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಲಿರುವ ಮನವಿಗೆ ಪಾರ್ವತಮ್ಮ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಸಹಿ ಹಾಕಿ ಬೆಂಬಲ ಸೂಚಿಸಿ ಕನ್ನಡಸಾಹಿತ್ಯಡಾಟ್ಕಾಂನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಹಂಪಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಹಾಗೂ ಭಾಷಾ ತಜ್ಞರಾಗಿರುವ ಕೆ ವಿ ನಾರಾಯಣ್, ಹಿರಿಯ ಚಿಂತಕರು, 'ಹೊಸತು' ಮಾಸಪತ್ರಿಕೆಯ ಸಂಪಾದಕರೂ ಆದ ಜಿ ಆರ್ ರಾಮಕೃಷ್ಣರವರು ಮನವಿಗೆ ಸಹಿ ಹಾಕಿರುವ ಪ್ರಮುಖರ ಪಟ್ಟಿಗೆ ಸೇರಿದ್ದಾರೆ.
ಮನವಿಯ ಮುಖ್ಯಾಂಶಗಳು ಕೆಳಕಂಡಂತಿವೆ:
- ಕಂಪ್ಯೂಟರ್ ಕಲಿಸುವ ಎಲ್ಲ (ಇಂಗ್ಲಿಷ್ ಮಾಧ್ಯಮವೂ ಸೇರಿದಂತೆ) ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿರುವ ಕಂಪ್ಯೂಟರ್ಗಳಲ್ಲಿ ಕನ್ನಡ/ಪ್ರಾಂತೀಯ/ರಾಜ್ಯ ಭಾಷೆಗಳ ತಂತ್ರಾಂಶಗಳನ್ನು ಅನುಸ್ಥಾಪಿಸುವುದನ್ನು ಕಡ್ಡಾಯ ಮಾಡಿ ಆದೇಶಿಸಬೇಕು.
- ತಿಂಗಳಿಗೆ ಒಂದು ಗಂಟೆ ಕಾಲವನ್ನು ವಿದ್ಯಾರ್ಥಿಗಳಿಗೆ - ಅನುಸ್ಥಾಪಿಸಿದ ಕನ್ನಡ ತಂತ್ರಾಂಶದ ಸಾಧ್ಯತೆಗಳನ್ನು ತೋರಿಸಿಕೊಡುವಂತೆ ಪಾಠ ಮಾಡಬೇಕು.
- ಇದು ಮುಂದಿನ ವರ್ಷವೇ ಜಾರಿಯಾಗುವಂತೆ ಆದೇಶವಿರಬೇಕು.
- ಪಠ್ಯಕ್ರಮವನ್ನು ರಚಿಸಲು ತಜ್ಞರ ಸಮಿತಿಯೊಂದನ್ನು ಕೂಡಲೆ ರಚಿಸಬೇಕು.
- ಕರ್ನಾಟಕದ ಎಲ್ಲ ಸೈಬರ್ ಕೆಫೆಗಳಲ್ಲಿ `ಬರಹ' ಹಾಗು 'ನುಡಿ' ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸುವುದು ಕಡ್ಡಾಯವಾಗಬೇಕು.
- ಕರ್ನಾಟಕದಲ್ಲಿ ಮಾರಾಟವಾಗುವ ಯಾವುದೇ ಕಂಪ್ಯೂಟರ್ನಲ್ಲಾಗಲಿ ಅದು ಬಳಕೆದಾರನಿಗೆ ತಲುಪುವ ಮುನ್ನ `ಬರಹ', `ನುಡಿ' ಅಥವ ಉಚಿತವಾಗಿ ಲಭ್ಯವಿರುವ ಸ್ಥಳೀಯ ಭಾಷೆಗಳ ಯಾವುದೇ ತಂತ್ರಾಶಗಳಿದ್ದರೂ ಅವುಗಳನ್ನು ಸ್ಥಾಪಿಸಿರಬೇಕು.
ಮನವಿಗೆ ಸಹಿ ಸಂಗ್ರಹಿಸಲಿಚ್ಛಿಸುವ ಆಸಕ್ತರು ಮನವಿ ಪತ್ರದ ನಮೂನೆಯನ್ನು http://kanlit.com/manavi.pdf ನಿಂದ Download ಮಾಡಿಕೊಳ್ಳಬಹುದು.
Rating
Comments
Re: ಕನ್ನಡಸಾಹಿತ್ಯಡಾಟ್ಕಾಂ ಮನವಿಗೆ ರಾಜ್ ಕುಟುಂಬದ ಬೆಂಬಲ, ಜೊತೆಗೆ...