ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು

ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು

ಸಂಪದ ಬಳಗಕ್ಕೆ ಬಂದಾಗಿನಿಂದ ಹಲವರನ್ನು ನೋಡುತ್ತಾ ಬಂದಿದ್ದೇನೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ವಿಶೇಷ ವ್ಯಕ್ತಿಗಳೇ.

ನನ್ನ ಮಟ್ಟಿಗೆ ಹೇಳುವುದಾದರೆ, ಅಂತರ್ಜಾಲದ ಸಮುದಾಯವೊಂದು ಒಬ್ಬರ ಮನಸ್ಸಿನಲ್ಲಿ, ವ್ಯಕ್ತಿತ್ವದಲ್ಲಿ ತರಬಹುದಾದ ಬೆಳವಣಿಗೆಗೆ ಒಂದು ಉದಾಹರಣೆಯಾಗಿ ಬೆಳೆದಿದೆ ಸಂಪದ. ದೇಶಕಾಲಾತೀತವಾಗಿ, ಕನ್ನಡಿಗರಿಗೆಲ್ಲ ಒಂದೇ ಮನೆ ಎಂಬ ಭಾವನೆ ತರುವುದರಲ್ಲಿ ಗೆದ್ದಿದೆ.

ಆದರೆ ಸಮುದಾಯವೊಂದರ ತಳಹದಿ ಅಲ್ಲಿರುವ ಜನರೇ ಅಲ್ಲವೇ? ಜನರೇ ಇಲ್ಲದೇ ಸಮುದಾಯ ಕಟ್ಟುವುದೆಂತು?

ಅದಕ್ಕೆಂದೇ, ಸಂಪದಕ್ಕೆ ಬರುವ ಎಲ್ಲರಿಗೂ ನನ್ನ ಧನ್ಯವಾದಗಳನ್ನು ಇಂದು ಸಲ್ಲಿಸೋಣ ಎನ್ನಿಸಿತು.

ಅಥವಾ, ಇವತ್ತು ತ್ಯಾಗರಾಜರ ನೆನಪಿನ ದಿನವಲ್ಲವೇ (ಜನವರಿ, ೬) ? ಅದಕ್ಕೇ , ಅವರ ಮಾತಿನಲ್ಲಿ ಹೇಳುವುದಾದರೆ

"ಎಂದರೋ ಮಹಾನುಭಾವುದು, ಅಂದರಿಕಿ ವಂದನಮುಲು"

"ಎಲ್ಲೆಲ್ಲೂ ಇರುವ ಮಹಾನುಭಾವರಿಗೆಲ್ಲ ತಲೆಬಾಗಿ ಮಣಿವೆ ನಾನಿಂದು"

-ಹಂಸಾನಂದಿ

Rating
No votes yet

Comments