ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
ಇಂದು ಬೆಳಗ್ಗೆ ಘಜನಿ ಚಿತ್ರದ ಹಾಡೊಂದನ್ನು ಟಿ. ವಿ ಯಲ್ಲಿ ಹಾಕಿದ್ದರು
ನನ್ನ ಮಗಳ ಜೊತೆಗೆ ಹಾಡು ನೋಡುತ್ತಾ ಕುಳಿತಿದ್ದೆ.
ನನ್ನ ಮಗಳು ಗೊತ್ತಲ್ಲ, ಪ್ರಶ್ನ್ಗೆ ಶುರು ಮಾಡಿದಳು
"ಅಮ್ಮ ಅವನ್ಯಾಕೆ ಬಟ್ಟೆ ಹಾಕೊಂಡಿಲ್ಲ"(ಹಾಡಿನಲ್ಲಿ ಅಮೀರ್ಖಾನ್ ಮುಂದಿನ ಭಾಗಕ್ಕೆ ಸಾಕಾಗದಷ್ಟು ಷರ್ಟ್ ಹಾಕಿದ್ದ, ಒಂದೇ ಮಾತಲ್ಲಿ ಹೇಳುವುದಾದರೆ ಫ್ರಂಟ್ಲೆಸ್ಸ್ ಜಾಕೇಟ್ )
ಫ್ಯಾಶನ್ ಅಂತ ಹೇಳೋದು ಬೇಡ ಅನ್ಕೊಂಡು
"ತುಂಬಾ ಸೆಖೆ ಅಂತೆ ಅದಕ್ಕೆ ಹಾಗೆ ಅರ್ಧ ಬಟ್ಟೆ ಹಾಕಿದ್ದಾನೆ"
ಅಷ್ಟರಲ್ಲಿ ಆಸಿನ್ನ ಪ್ರವೇಶವಾಯ್ತು
ಅದೇನೋ ಇವತ್ತು ಅವಳ ಕುತ್ತಿಗೆಯಿಂದ ಕಾಲಿನವರೆಗೆ ಬಟ್ಟೆ(ಯಾವುದೋ ಗೌನ್).
ನನ್ನ ಮಗಳು
"ಮತ್ತೆ ಅವಳ್ಯಾಕೆ ಪೂರ್ತಿ ಬಟ್ಟೆ ಹಾಕಿಕೊಂಡಿದಾಳೆ"
ಏನು ಹೇಳೋದು
" ತುಂಬಾ ಚಳಿ ಅದಕ್ಕೆ ಹಾಕಿಕೊಂಡಿದಾಳೇ"
ಮತ್ಯಾವುದೋ ಪ್ರಶ್ನೆ ಕೇಳಿ ಅವಳೇನೋ ಸುಮ್ಮನಾದಳು
ನನ್ನ ಮನಸಿಗೆ ಬಂದದ್ದು
ಇದೇನೋ ಹೊಸ ಟ್ರೆಂಡ್ ಉಲ್ಟಾ ಆಗಿದೆ
ಅಮೀರ್ಖಾನ್ , ಅಕ್ಷಯ್ ಕುಮಾರ್, ಶಾರುಕ್ ಖಾನ್, ಇವರಿಗೆಲ್ಲಾ ಸ್ಪೂರ್ತಿ ಸಲ್ಮಾನ್ ಖಾನ್ ಇವರೆಲ್ಲಾ ಹೀಗೆ ದೇಹ ಪ್ರದರ್ಶನ ಮಾಡ್ತಿದಾರೆ , ಇದೀಗ ನಮ್ಮ ಕನ್ನಡದ ವಿಜಯ್, ಮುರಳಿ ಅವ್ರೂನೂ ಹಾಗೇನೆ
ಆದ್ರೆ ನಟೀಮಣಿಯರು ಮೈ ತುಂಬಾ ಬಟ್ಟೆ ಧರಿಸತೊಡಗಿದ್ದಾರೆ
ಏನಿದರ ಅರ್ಥ?
ಹೋಗಲಿ ಬಿಡಿ
ನಾಯಕಿಯರಿಗೊಂದು ಕಾಲ ನಾಯಕರಿಗೊಂದು ಕಾಲ :)
Comments
ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
In reply to ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ by Rakesh Shetty
ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
In reply to ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ by kalpana
ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ