ಅಸಮಾನ್ಯ ಕಲೆಗಾರ ಈ ರಾಜು....

ಅಸಮಾನ್ಯ ಕಲೆಗಾರ ಈ ರಾಜು....

ಎಲ್ಲ ಬಲ್ಲವರಿಲ್ಲ ಅನ್ನುವುದು ಹಳೆಯ ಮಾತು ಈಗ ಗೊತ್ತಿಲ್ಲದ್ದು ಏನೂ ಉಳಿದಿಲ್ಲ...ರಾಜು ಮಾಡಿದ ಅವಾಂತರದ ಮುಂದೆ ಇದೀ

ಭಾರತ ತಲೆ ತಗ್ಗಿಸಬೇಕಾಗಿದೆ. ಯಾರ ಮೇಲೆ ವಿಶ್ವಾಸವಿಡಬೇಕು ಈ ಪ್ರಶ್ನೆ ಕಾಡಿದೆ ಯಾಕೆಂದರೆ management science ನಲ್ಲಿ

ಕಲಿಸುವ ವಿಚಾರ ಅಂದರೆ ಕಂಪನಿಗಳ balance sheet ಅಭ್ಯಾಸ ಮಾಡಿ ಹಣ ಹೂಡಬೇಕು ಅಂತ ಆದರೆ ಇಲ್ಲಿ ಆಗಿರುವುದೆಲ್ಲ

ಉಲಟಾ ಪುಲಟಾ. ನಾ ಮೊದಲ ಪಿಯುಸಿ ಯಲ್ಲಿದ್ದಾಗ ನಮ್ಮ ಲೆಕ್ಚರ್ ರ್ ಕಲಿಸಿ ಕೊಟ್ಟ ಲೆಕ್ಕನೇ ಬೇರೆ ಆದರೆ ರಾಜು

ಪ್ರತಿಪಾದಿಸುವ ಲೆಕ್ಕ್ ಶಾಸ್ತ್ರ ವೇ ಬೇರೆ.

ಲೆಕ್ಕಶಾಸ್ತ್ರ ಅಂದರೆ ಆಗಿರುವ ಖರ್ಚು ವೆಚ್ಚ ದಾಖಲಿಸುವುದು ಅಂತ ನಮ್ಮ ಲೆಕ್ಚ್ ರ್ ರ್ ಅಂಬೋಣ ವಾಗಿತ್ತು . ಆದರೆ

ರಾಜುನ ಲೆಕ್ಕ್ ಬೇರೆ ಇಲ್ಲಿ ಇಲ್ಲದಿರುವ ಘೋಟಾಳಿ ಇದೆ ಕಾಲ್ಫನಿಕ ವಾದ ಆಸ್ತಿಗಳಿವೆ ಸರಿ ಎಂದು ದಾಖಲಿಸುವ c a ಇದ್ದಾರೆ

ಅದ ನಂಬಿ ಸಾಲ ಕೊಡುವ ಬ್ಯಾಂಕು ಇದೆ... ಅದ ನೋಡಿ ತನ್ನ ಉಳಿತಾಯದ ಹಣ ಸುರಿದು ಕಂಗಾಲಾದ ಖರೀದಿದಾರ

ಇದ್ದಾರೆ... ಹಾಗೆಯೇ ಕಂಪನಿ ಪಗಾರ ಕೊಡುತ್ತಲೇ ಇರುತ್ತದೆ ಎಂಬ ನಂಬಿಕೆಯಿಂದ ಸಾಲ ಮಾಡಿ ಮನೆ, ಮದುವೆ

ಮಾಡಿಕೊಂಡ ನೌಕರದಾರ ಇದ್ದಾನೆ. ಇವರೆಲ್ಲರ ನಡುವೆ ಆ ರಾಜು ಜೇಲಿಗೆ ಹೋಗುತ್ತಾನೆ ಜಾಮೀನು ಸಿಗುತ್ತದೆ ದೀರ್ಘವಾದ

ವಿಚಾರಣೆ ಶುರು ಆಗುತ್ತದೆ... ಮತ್ತೊಂದು ಹಗರಣ ಹೊರಗೆ ಬರುವವರೆಗೆ ಟಿವಿ, ಬಸ್, ಆಫೀಸು ಗಳಲ್ಲಿ ಇದರದೇ ಚರ್ಚೆ

ಆಗುತ್ತದೆ.

Rating
No votes yet

Comments