ವಿಚಿತ್ರ ಆದರೂ ಸತ್ಯ !
ವಿಚಿತ್ರಗಳು ಜಗತ್ತಿನಲ್ಲಿ ಎಷ್ಟಿವೆ ಯಾರಿಗೆ ಗೊತ್ತು !
ಅಂಥ ಒಂದು ವಿಚಿತ್ರದ ಬಗ್ಗೆ ಬರೆಯುವ ಪ್ರಯತ್ನ ಇಲ್ಲಿದೆ. ಆರ್ಥಿಕ ಹಿಂಜರಿತ ದಿಂದ ಅಮೇರಿಕಾದ ಬ್ಯಾಂಕ್, ಕಾರ್ ತಯಾರಿಸುವ ಕಂಪನಿಗಳು ನಾವು ಕಂಗಲಾಗಿದ್ದೇವೆ, ನಮ್ಮನ್ನು ಉಳಿಸಿ ಎಂದು ಬೊಬ್ಬೆ ಹೊಡೆಯುತ್ತಿವೆ ಹಾಗು ಅವಗಳನ್ನು ಉಳಿಸುವ ಎಲ್ಲ ಪ್ರಯತ್ನಗಳು ನಡೀತಾ ಇವೆ.
ಅಂತದರಲ್ಲಿ, ನಮ್ಮನ್ನು ಉಳಿಸಿ ಅಂಥ ಜಗತ್ತಿನ ಅತ್ಯಂತ ಪ್ರೊಫೆಶನ್ ಆದ ವೆಶ್ಯ ಜಗತ್ತಿನ ಕೆಲ ಜನರು ಕೇವಲ $೫ ಬಿಲಿಯನ್ ಕೇಳುತ್ತಾ ಇದ್ದಾರೆ. ಹಸ್ಲರ್ ಎನ್ನುವ ಪತ್ರಿಕೆಯ ಓನರ್ ಮತ್ತು ಅವನ ಫ್ರೆಂಡ್ ಸೇರಿಕೊಂಡು ಇಂತದೊಂದು ಬೇಡಿಕೆ ಮುಂದಿರಿಸಿದ್ದಾರೆ :-)
ಆರ್ಥಿಕ ಹಿಂಜರಿತದಿಂದ ನಮಗೂ ಸಮಸ್ಯೆಯಾಗಿದೆ. ಸೆಕ್ಸ್ ಅನ್ನುವುದು ಜನರ ಮನಸ್ಸಿನಲ್ಲಿ ಬರುವ ಕೊನೆಯ ವಿಚಾರವಾಗಿದೆ. ಅಮೇರಿಕಾದ ಜನರು ಇಂಥ ಮಾನಸಿಕ ತೊಂದರೆಯಿದೆ ಹೊರ ಬರುವುದಾದರೆ ಅದು ಸೆಕ್ಸ್ ಮತ್ತು ವಯಸ್ಕರ ಮನರಂಜನೆಯಿಂದ ಮಾತ್ರ ಸಾಧ್ಯ. ಜನರು ಕಾರು ಬಿಟ್ಟು ಇರ್ತಾರೆ ಆದರೆ ಸೆಕ್ಸ್ ಬಿಟ್ಟು ಇರೋಕೆ ಆಗಲ್ಲ. ಹೀಗಾಗಿ ನಮಗೆ ಸಹಾಯ ಮಾಡಿ ಅನ್ನುವ ವಿಚಿತ್ರ ಬೇಡಿಕೆ. ಇದು ನಿಜವಾಗ್ಲು ಸೀರಿಯಸ್ ಆಗಿ ವಿಚಾರ ಮಾಡುವಂಥ ವಿಚಾರವಲ್ಲ.. ನಕ್ಕು ಸುಮ್ಮನಾಗಿ ಬಿಟ್ಟರೆ ಸಾಕು. ಅಆದರೆ ಇಂತದೊಂದು ಬೇಡಿಕೆ ಇದುವಷ್ಟು ಧಾರ್ಷ್ಟ್ಯ ಅಮೆರಿಕನ್ನರಿಗೆ ಮಾತ್ರ ಇರಲು ಸಾಧ್ಯ !
ಈ ಲೇಖನ ನಿಮ್ಮ ಮುಖದಲ್ಲೊಂದು ನಗೆ ಮೂಡಿಸಿದ್ದಾರೆ ಅಲ್ಲಿಗೆ ನನ್ನ ಪ್ರಯತ್ನ ಸಾರ್ಥಕ !
Comments
ಉ: ವಿಚಿತ್ರ ಆದರೂ ಸತ್ಯ !
ಉ: ವಿಚಿತ್ರ ಆದರೂ ಸತ್ಯ !
ಉ: ವಿಚಿತ್ರ ಆದರೂ ಸತ್ಯ !