ಅನುವಾದದಲ್ಲಿ ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು
ಸಂಪದದ [:http://translate.sampada.net|ಮುಕ್ತ ತಂತ್ರಾಂಶ ಅನುವಾದ ಮಾಡುವ ಪ್ರಾಜೆಕ್ಟಿನಲ್ಲಿ] ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು:
ಮೊನ್ನೆ ಗೈಮ್ ಅನುವಾದಗಳನ್ನ ಫೈನಲೈಸ್ ಮಾಡುವಾಗ ಕೆಲವು ವಿಷಯಗಳು ಕಂಡುಬಂದವು. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ಈ ತಪ್ಪುಗಳು ನಿಮ್ಮದಾಗಿಲ್ಲದಿರಬಹುದು ಎಂಬುದನ್ನು ಗಮನಿಸಿ. ನಾನು ಸುಮ್ಮನೇ ಎಲ್ಲ ಒಟ್ಟಿಗೆ ಇರಲಿ ಎಂದು ಪಟ್ಟಿ ಮಾಡುತ್ತಿದ್ದೇನೆ. ನೀವು ಬಹುಶಃ ಇದನ್ನು ಉಳಿದವರಿಗೆ propagate ಮಾಡುವಲ್ಲಿ ಸಹಾಯ ಮಾಡಬಹುದೆಂಬ ಆಶಯದಿಂದ.
೧) Hotkeys:
sorry, ಇದರ ಬಗ್ಗೆ ಶ್ರೀಕಾಂತ್ ಬರೆದ ಇ-ಮೇಯ್ಲಿಗೆ ತಲೆಯಾಡಿಸಿದ್ದೆ. ನನ್ನದೆ ತಪ್ಪು. ವಾಸ್ತವದಲ್ಲಿ &F ಅಥವ _F ಎಂಬಂತೆ ಇರೋ ಕೀ ವರ್ಡುಗಳಿಗೆ ಕೊನೆಯಲ್ಲಿ (F) ಎಂದು ಸೇರಿಸುವುದು ಒಳ್ಳೆಯ ಐಡಿಯ ಅಲ್ಲ. hotkeys ಇದ್ದ ಕಡೆ ಸುಲಭದ ಅಕ್ಷರವೊಂದರ ಹಿಂದೆ (ವತ್ತುಗಳು - ದೀರ್ಘಗಳಿಲ್ಲದ ಅಕ್ಷರವೊಂದರ ಹಿಂದೆ) & ಅಥವ _ ಸೇರಿಸಿ ಬಿಟ್ಟುಬಿಡಿ. ಅದನ್ನು review ಮಾಡುವ ಸಮಯದಲ್ಲಿ ನೋಡಿ ಭರ್ತಿ ಅಥವ ಸರಿ ಮಾಡಬೇಕು.
೨) ಅನುವಾದದ Consistency ಇರಲಿ - ಒಂದು ಕಡೆ "ಬಳಕೆದಾರ" ಎಂದಿದ್ದರೆ ಎಲ್ಲೆಡೆಯೂ ಅದನ್ನೇ ಬಳಸಿ. ಒಂದು ಕಡೆ ಬಳಕೆದಾರ, ಇನ್ನೊಂದು ಕಡೆ ಮತ್ತೊಂದಿದ್ದರೆ ಬಳಸುವವರಿಗೆ ತಲೆಕೆಡದೆ ಇರುವುದಿಲ್ಲ.
೩) ಅನುವಾದಕ್ಕೆ ಸಾಧ್ಯವಾದಷ್ಟೂ ಸರಳವಾದ ಕನ್ನಡ ಪದಗಳನ್ನು ಬಳಸಿ - ಅದು ಸಂಸ್ಕೃತಮೂಲವೋ, ಕನ್ನಡ ಮೂಲವೋ, ಆಂಗ್ಲ ಪದವೋ ಅಥವ ಮಲ್ಯಾಳವೋ - ನಮಗೆ ಚಿಂತೆ ಬೇಡ. ಒಟ್ಟು ಓದಿದತಕ್ಷಣ ಕನ್ನಡ ಮಾತನಾಡುವವರಿಗೆ ಅರ್ಥವಾಗುವಂತಿರಬೇಕು. ಹೊಸ ನಾಮಕರಣಗಳು ಬೇಡ.
ಉದಾ:
"ಶಿಷ್ಟಾಚಾರ ಸಂಹಿತೆ" ಬೇಡ "ಪ್ರೋಟೋಕಾಲ್" ಸಾಕು
"ಪೋರ್ಕುಳಿ" ಎಲ್ಲ ಬೇಡ - "ಮಿನಿಮೈಸ್" ಸಾಕು,
೪) Context ನೋಡಿಕೊಂಡು ಅನುವಾದ ಮಾಡಿ:
ಉದಾಹರಣೆಗೆ:
"Basic setup" ಎಂಬಲ್ಲಿ:
Basic - ಸರಳ not ಮೂಲಭೂತ
"Description" - ವಿವರ, "ವರ್ಣನೆ" ಅಲ್ಲ
೫) ತಪ್ಪು ಕನ್ನಡ ಪದಗಳನ್ನು ಬಳಸುವುದು ಬೇಡ:
ಉದಾ:
"ನೊಂದಾಯಿಸಿ" ಅಲ್ಲ - "ನೋಂದಾಯಿಸಿ".
೬) ಸ್ಪೆಲ್ಲಿಂಗ್ ಮಿಸ್ಟೇಕ್ಸ್ ಬಗ್ಗೆ ಹುಷಾರಾಗಿರಿ. 'ಳ' ಬದಲು 'ಲ' ಬಂದರಾಯ್ತು -
ಕಷ್ಟ ಪಟ್ಟು ನೀವು ಮಾಡಿದ ಕೆಲಸವೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ.
Comments
ಅನಿಸಿಕೆ: ಅನುವಾದದಲ್ಲಿ ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು
In reply to ಅನಿಸಿಕೆ: ಅನುವಾದದಲ್ಲಿ ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು by Shyam Kishore
ಉ: ಅನಿಸಿಕೆ: ಅನುವಾದದಲ್ಲಿ ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು