ಕ್ಯಾಲಿಗ್ರಫಿ ಕಲಿಯಲೊಂದು ಪ್ರಯತ್ನ

ಕ್ಯಾಲಿಗ್ರಫಿ ಕಲಿಯಲೊಂದು ಪ್ರಯತ್ನ

"ಕಾರ್ಟೂನು ಬರೆಯೋದೇ ನಿಲ್ಲಿಸಿಬಿಟ್ಟಿದ್ದೀರಲ್ಲ" ಅಂತ ಆ ಕಡೆ ಪರಿಚಿತರೊಬ್ಬರು ಫೋನಿನಲ್ಲಿ ಹೇಳಿದ್ದು ಕೇಳಿ ನನಗೆ "ಹೌದಲ್ಲ" ಅನಿಸಿತು. ಎದುರಿಗೇ ಟ್ಯಾಬ್ಲೆಟ್ ಇಟ್ಟೂಕೊಂಡು ಏನಾದರೂ ಗೀಚಬಹುದಿತ್ತಲ್ಲ ಅನಿಸಿತು. ಆದರೆ ಟ್ಯಾಬ್ಲೆಟ್ ವರ್ಕ್ ಆಗುತ್ತಿರಲಿಲ್ಲ - ಬಹುಶಃ ನಾನು ಡೆಬಿಯನ್ - ಉಬುಂಟು - ಮತ್ತೊಂದು ಎನ್ನುತ್ತ ಪ್ರಯೋಗ ಮಾಡುತ್ತಿರುವಾಗ ಮತ್ತೊಮ್ಮೆ ನಾನು ಹಾಕಿಟ್ಟ ಕಾನ್ಫಿಗರೇಶನ್ ಮಾಯವಾಗಿಹೋಗಿತ್ತು.

ಇವತ್ತು ನೆನಪಾಗಿ ಈ ನನ್ನ ಕೆಲಸದ ಕಂಪ್ಯೂಟರಿನಲ್ಲಿ ಮತ್ತೊಮ್ಮೆ configure ಮಾಡಿದೆ. ಅಂತಹ ಕಷ್ಟದ ಕೆಲಸವೇನಲ್ಲ, ಕಾನ್ಫಿಗರ್ ಮಾಡೋದು. Xconfigನಲ್ಲಿ ಕೆಲವೊಂದು ಲೈನುಗಳನ್ನು ಸೇರಿಸಿದರಾಯ್ತು, ಗ್ನು/ಲಿನಕ್ಸಿನಲ್ಲಿ Wacom Bamboo ಚಾಲೂ.

ಇಷ್ಟು ಮಾಡಿದೆನಲ್ಲ, "ನೀವು ಏನೂ ಬರೆಯುತ್ತಿಲ್ವಲ್ಲ" ಎಂದು ಹೇಳುತ್ತ ಬಂದಿರುವವರಿಗೂ ಸಾಂತ್ವನ ಹೇಳುವಂತೆ ಟ್ಯಾಬ್ಲೆಟ್ ಹಿಡಿದು ಗೀಚಿ ಕ್ಯಾಲಿಗ್ರಫಿ ಪ್ರಯತ್ನಿಸಿದ್ದನ್ನು ಜೊತೆಗೆ ಬೇಗನೆ ಬರೆದದ್ದು ಈಗ ಈ ಬ್ಲಾಗ್ ಪೋಸ್ಟು ಕೂಡ ಆಯಿತು. ಕ್ಯಾಲಿಗ್ರಫಿಯ ಪ್ರಯತ್ನದ ಚಿತ್ರ ಜೊತೆಗಿದೆ.

ಮತ್ತಷ್ಟು ಗೀಚುವ ಇರಾದೆಯುಂಟು. ಆದರೆ ಎಲ್ಲದಕ್ಕೂ ಇನ್ನು ಸಮಯವಿಲ್ಲದ ಸಮಯದಲ್ಲಿ ಸಮಯ *ಮಾಡಿಕೊಳ್ಳಬೇಕು*.

(btw, ಸಂಪದದ ಹೊಸ ರೂಪ ಹೇಗಿದೆ? ಆರೋಗ್ಯ ಸರಿ ಇಲ್ಲದರಿಂದ ಅದರ ಬಗ್ಗೆಯೂ ಬರೆಯಲಾಗಲಿಲ್ಲ. ಕೆಲವರಿಗೆ ತಕ್ಷಣ ಇಷ್ಟವಾಗಲಿಕ್ಕಿಲ್ಲ. ಆದರೆ ಇದು ಮುಂಚಿನ Look and Feel ಗಿಂತ ಉತ್ತಮವಾದದ್ದು. ಆಗಾಗ ಸ್ವಲ್ಪ ವಾರೆ ಕೋರೆಗಳನ್ನು ನಿವಾರಿಸುತ್ತ ಹೋಗಬಹುದು - ಇನ್ನೂ ಚೆಂದಗೊಳ್ಳುವುದು. ನಿಮ್ಮ ಅನಿಸಿಕೆ ತಿಳಿಸಿ - ಇಷ್ಟವಾಯ್ತು, ಇಷ್ಟವಾಗಲಿಲ್ಲ ಎನ್ನುವುದಕ್ಕಿಂತ specific ಆಗಿ Feedback ಕಳುಹಿಸಿ - ಮತ್ತಷ್ಟು ಉತ್ತಮಪಡಿಸುವಲ್ಲಿ ಸಹಾಯಕವಾಗುವುದು.)

Rating
No votes yet

Comments