ಕನ್ನಡಿಗರೇನು ಕಡಿಮೆಯೇ?

ಕನ್ನಡಿಗರೇನು ಕಡಿಮೆಯೇ?

ಇಂದು ಯಾಹೂ ಮೇಯ್ಲ್‌ನ [:http://patcavit.com…|ಹೊಸ ಆವೃತ್ತಿ ಬಿಡುಗಡೆಯಾಗಿದೆಯೆಂಬ ಸುದ್ದಿ] ಓದಿ ಎಷ್ಟೋ ದಿನಗಳಿಂದ ಬಳಸದೇ ಇಟ್ಟಿದ್ದ ನನ್ನ ಯಾಹೂ ಅಕೌಂಟ್ ತೆರೆದುನೋಡಿದೆ. ಯಾಹೂನವರಿಗೆ ನಾವುಗಳು 'important' ಎನಿಸಲಿಲ್ಲವೋ ಏನೋ, ಬರೇ ಯು ಎಸ್ ನಲ್ಲಿರುವವರಿಗೆ ಮಾತ್ರ ಹೊಸ ಯಾಹೂ ಮೇಯ್ಲ್ ಬಳಸುವ ಭಾಗ್ಯ ಎಂದು ನನ್ನ ಕುತೂಹಲಕ್ಕೆ ತಣ್ಣೀರು ಎರಚಿದರು. ಸರಿ, ಇಷ್ಟು ದಿನಗಳಾದ ಮೇಲೆ ತೆರೆದು ನೋಡುತ್ತಿರುವ ನನ್ನ ಯಾಹೂ ಖಾತೆಯೆಲ್ಲಿ ಏನಾದರೂ ಓದಿ ಕ್ಲೋಸ್ ಮಾಡಬೇಕಲ್ಲ! ಯಾಹೂ ಗ್ರೂಪ್ಸ್‌ನೆಡೆಗೆ ನಡೆದೆ. ಏನು ಬಂತೋ ಏನೋ 'kannada' ಎಂದು ಗ್ರೂಪ್ಸ್ ಇಂಟರ್ಫೇಸಿನಲ್ಲಿ ಟೈಪಿಸಿ 'ಎಂಟರ್' ಕುಟ್ಟಿದ್ದಾಗಿ ಹೋಯ್ತು. ಅರೆರೆ, ಏನಾಶ್ಚರ್ಯ! [:http://groups.yahoo…|ಸುಮಾರು 350ಕ್ಕೂ ಹೆಚ್ಚು] (ನಮ್ಮಲ್ಲಿ 'ಸಂಪದ'ದಲ್ಲಿ ಇರುವ ಸದಸ್ಯರಿಗಿಂತಲೂ ಹೆಚ್ಚು) ಬರೇ ಕನ್ನಡ 'ಗುಂಪು'ಗಳೇ ಇವೆ! ೧೦೦೦ಕ್ಕೂ ಹೆಚ್ಚು ಸದಸ್ಯರಿರುವುದು ಕನ್ನಡ 'activism' ಗುಂಪುಗಳಲ್ಲಿ ಮಾತ್ರ ;) ಸಾಹಿತ್ಯ ಕುರಿತ ಗುಂಪುಗಳಲ್ಲಿ ಜನರು ಕಡಿಮೆಯೇ (ನಮ್ಮ ಜನ ಬರೇ ಬೇರೆಯವರನ್ನು ಬಯ್ಯೋದಕ್ಕೆ ಸರಿ, ತಾವೇ ಭಾಷೆ ಉದ್ಧಾರ ಮಾಡುವುದಿರಲಿ ಅದರ ಬಳಕೆಯೂ ಮಾಡರು ಎಂಬುದು ಎಷ್ಟು ಸತ್ಯ?) ಇನ್ನು ಒಂದೇ ರೀತಿಯ ವಿಷಯಗಳನ್ನಾಧರಿಸಿ ಕನ್ನಡದಲ್ಲೇ ಹಲವು ಗುಂಪುಗಳು! (ನಮ್ಮಲ್ಲಿ ಒಗ್ಗಟ್ಟೆಷ್ಟಿದೆ ಎಂಬುದಕ್ಕೆ ಇದೇ ಸಾಕ್ಷಿಯೋ ಏನೊ? ;-) ಅಥವಾ ಎಲ್ಲರಿಗೂ ತಮ್ಮ ತಮ್ಮ ಗುಂಪು ಪ್ರಾರಂಭಿಸುವಲ್ಲಿ ಬಹಳ ಮಜ ಇರಬಹುದು) ಸರಿ, ಅದೆಲ್ಲಾ ಮೂಲೆಗೆ ಹಾಕಿದರೂ ಯಾಹೂನಲ್ಲಿ ಕನ್ನಡ ಯುನಿಕೋಡ್ ಬೆಂಬಲವೇ ಇಲ್ಲ! ಎಲ್ಲರಿಗೂ ಕಂಗ್ಲಿಷ್ಷೆ ಗತಿ! ಕನ್ನಡಿಗರೇನೂ ಕಡಿಮೆಯಿಲ್ಲ. ಆದರವರು ತಮ್ಮ ತಮ್ಮ ಸ್ವಾರ್ಥದಿಂದ ಹೊರಬಂದು ಒಟ್ಟಾಗಿ ಕನ್ನಡದ ಬೆಳವಣಿಗೆಯ ಕಡೆ ಗಮನಹರಿಸಿದರೆ ಬಹುಶಃ ಕನ್ನಡದ ಸ್ಥಿತಿ ಸಾಕಷ್ಟು ಸುಧಾರಿಸಬಹುದೇನೊ?
Rating
No votes yet

Comments