ಹೀಗೊಂದು ಅಪರೂಪದ ಸಂಜೆ (ಸಂಪದಿಗರ ಸ್ನೇಹ ಮಿಲನ )

ಹೀಗೊಂದು ಅಪರೂಪದ ಸಂಜೆ (ಸಂಪದಿಗರ ಸ್ನೇಹ ಮಿಲನ )

ಶನಿವಾರ ಮೈಲ್ ಓದುತ್ತಿದ್ದಂತೆ ಅಯ್ಯೋ ಸ್ನೇಹ ಮಿಲನದ ಸ್ಥಳ ಬೇರೆಯಾಯ್ತಲ್ಲ ಹೋಗೋದಾ ಬೇಡವಾ ಅಂತ ಯೋಚಿಸುತ್ತಿದ್ದೆ . ಜೊತೆಗೆ ಬರ್ತೀನಿ ಅಂದಿದ್ದ ನನ್ನಕ್ಕ ನೂ ಬರೋದಿಲ್ಲ ಎಂದು ಕೈಕೊಟ್ಟಳು
ಬಸವನಗುಡಿ ಒಂಥರಾ ನಮ್ಮ ಮನೆ ಇದ್ದ ಹಾಗೆ, ಕನ್ನಿಂಗ್ಹ್ಯಾಮ್ ಶಿವಾಜಿ ನಗರ ಯಾವುದೋ ಪರದೇಶ ಇದ್ದ ಹಾಗೆ
ಯೋಚಿಸಿ ಯೋಚಿಸಿ ಕೊನೆಗೆ ಹೊರಡುವ ನಿರ್ಧಾರ ಮಾಡಿದೆ.
ಸರಿ ವೋಲ್ವೊ ಹತ್ತಿ ಕುಳಿತ ನಂತರ ಶರೀಫ್ ಚೇಂಬರ್ ಎಲ್ಲಿದೆ ಎಂದು ತಿಳಿಯಲು ಅರವಿಂದ್‌ಗೆ ಫೋನ್ ಮಾಡಿದರೆ, ನಾನೂ ಇನ್ನೂ ಹೊರಟಿಲ್ಲ ಎಂದು ಮತ್ತಿನ್ಯಾರಿಗೋ ಫೋನ್ ಮಾಡಿ ಸ್ಥಳ ಯಾವುದು ಅಂತ
ತಿಳಿದುಕೊಳ್ತಿದ್ದಾಗ ನಂಗೆ ನಗು.
2.45 pmಗೆ ಮನೆ ಬಿಟ್ಟಿದ್ದು ಅದೇನೋ ನೆನ್ನೆ ಟ್ರಾಫಿಕ್ ಇಲ್ಲವೇನೋ ಅದಕ್ಕೆ 3.15ಗೆಲ್ಲಾ ಡಬಲ್ ರೋಡ್‌ನಲ್ಲಿ ಇಳಿದು ಅಲ್ಲಿಂದ ಆಟೋ ಇಂಡಿಯನ್ ಎಕ್ಸ್ಪ್ರೆಸ್ ಬಳಿ ಬಂದಾತ ೩.೩೦ ಬೇಗ ಹೋಗಿ ಬಿಡ್ತಿನೇನೋ ಎಂಬ ಅಳುಕೂ
ಕೊನೆಗೆ ಬಂದದ್ದು ಸುಳ್ಳಲ್ಲ, ವೊಕ್ ಹಾರ್ಡ್ ಹಾಸ್ಪಿಟಲ್‍ನ ದ್ವಾರದಲ್ಲೇ ಅರವಿಂದರವರು ಮಾರ್ಗದರ್ಶಕರಂತೆ ನಿಂತು ದಾರಿ ಹೇಳಿದರು
ಆಸ್ಪತ್ರೆಯ ಹಿಂದೆ ಹೋಗುತ್ತಿದ್ದಂತೆ ಯಾವುದೋ ಗವಿಯಲ್ಲಿ ನುಗ್ಗುತಿದ್ದೀನೇನೋ ಎಂದುಕೊಂಡೇ ಮೇಲೆ ಹತ್ತಿದ್ದಾಯ್ತು.
ಮಗಳನ್ನು ಎಳೆದುಕೊಂಡು ಹಾಗೂ ಹೀಗೂ ಲಿಪ್ಜ್ಟ್ನಲ್ಲಿ ಎರೆಡನೇ ಫ್ಲೋರ್‌ವರೆಗೆ ಬಂದು ಮೂರನೇ ಫ್ಲೋರಿಗೆ ಮೆಟ್ಟಿಲು ಬಳಸಿ ಬಂದದ್ದಾಯ್ತು
ಅಲ್ಲೇ ಕುಳಿತ್ತಿದ್ದರು ನಮ್ಮ ಶ್ರೀಧರ್ ಸಾರ್ , ಅವರ ಪ್ರೊಪೈಲ್‍ನಲ್ಲಿದ್ದ ಫೋಟೋಗೂ ಅವರಿಗೂ ತುಂಭಾ ಅಂತರ
ಇನ್ನೂ ಬಾಗಿಲು ತೆರೆದಿರಲಿಲ್ಲ
ಹಾಗೆ ಮಾತಾನಾಡುತ್ತಿದ್ದಂತೆ , ಉಮೇಶ್ ಹಾಜಾರಾದರು, ನಂತರ ಸತೀಶ್, ಭೇಟಿಯ ರೂವಾರಿ ರಾಕೇಶ್ ಇನೂ ಬಂದಿರಲಿಲ್ಲ,
ಸ್ವಲ್ಪ ಹೊತ್ತಿನ ನಂತರ ಪರಿಚಿತ ಮುಖ ಕಾಣಿಸಿತು
ಎಲ್ಲೋ ನೋಡಿದ್ದೇನಲ್ಲ ಎಂದುಕೊಳ್ಳುತಿದ್ದಂತೆ
ತಮ್ಮನ್ನು ಸುರೇಶ್ ಹೆಗಡೆ ಎಂದು ಪರಿಚಯಿಸಿಕೊಂಡರು
ಸುರೇಶ್ ಹೆಗಡೆಯೇ ಸಂಪದದ (ಅಶು) ಕವಿ ಅಸು ಹೆಗಡೆ ಎಂದು ಹೊಳೆಯಿತು.
ಜೊತೆಗೆ ಹಿರಿಯರಾದ ಎಮ್ ಎಸ್ ರಾವ್‌ರವರು ಪರಿಚಯವಾದರು
ನಾವೆಲ್ಲಾ ಕೆಳಗಿನಿಂದ ಮೇಲೆ ಬಂದರೆ ಆ ಹುಡುಗಿ ಮೇಲಿನಿಂದ ಇಳಿದರು
ಆ ಹುಡುಗಿ ರಶ್ಮಿ ಎಂದು ಗೊತ್ತಾಯಿತು , ನಮ್ಮ ರಶ್ಮಿ ಪೈ ಎಂದು ತಿಳಿಯಿತು . ರಶ್ಮಿಯವರ ಬರವಣಿಗೆ ಅವರ ಬಗ್ಗೆ ನನ್ನ ಮನಸಿನಲ್ಲಿ ಸ್ವಲ್ಪ ಹಿರಿಯ ವ್ಯಕ್ತಿತ್ವವನ್ನು ಕಲ್ಪನೆ ಇತ್ತು , ಆ ಹುಡುಗಿಯನ್ನು ನೋಡುತ್ತಿದ್ದಂತೆ ಅಭಿಮಾನ ಉಕ್ಕಿತು,
ಬಹಳ ತೂಕವಾದ ಪದಗಳನ್ನು ಬಳಸಿ ಬರೆಯುತ್ತೀರಾ ಎಂದು ಹೇಳಿದ್ದಕ್ಕೆ ಹೆಗಡೆಯವರು , ಅವರು ಕೀ ಬೋರ್ಡ್ ಬಹಳ ತೂಕದ್ದ್ರಿರಬೇಕೆಂದು ತಮಾಷೆ ಮಾಡಿದರು
ಕೊನೆಗೆ ರಾಕೇಶ್ ಬಂದರು
ಬಾಗಿಲು ತೆಗೆದು ನಮ್ಮ ನಿಲ್ಲುವಿಕೆಗೆ ಕೊನೆ ಹಾಡಿದರು
ಅಚ್ಚುಕಟ್ಟಾದ ಆಫೀಸ್ ಅದು, ಹರಿಯವರದೋ ಇಲ್ಲ ಗೆಳೆಯರದೋ ಅನ್ನಿಸುತ್ತೆ
ನಂತರ ಒಬ್ಬೂಬ್ಬರಾಗಿ ರೂಮಿಗಿಳಿದರು
ಒಬ್ಬೂಬ್ಬರೂ ಬರುತ್ತಿದ್ದಂತೆ
ಅವರು ಯಾರಿರಬಹುದು ಎಂದು ಗೆಸ್ ಮಾಡಿಕೊಳ್ಳುವುದು, ನಡು ನಡುವೆ ಒಂದಷ್ಟು ಪ್ರಚಲಿತ ವಿದ್ಯಾಮಾನಗಳ ಮಾತು,
೪ ಘಂಟೆಗೆ ಶುರುವಾಗಬೇಕಿದ್ದ ಭೇಟಿ
೪.೩೦ಯಾದರೂ ಶುರುವಾಗದಾಗ ಬೇಕಾಗೆ ಸಮಯವನ್ನು ಸ್ವಲ್ಪ ಮುಂಚೆಯೇ ಹೇಳಿದ್ದಾರೇನೋ ಎಂಬ ಹಾಸ್ಯಭರಿತ ಮಾತುಗಳೂ ಕೇಳಿಬಂದವು
ನಡುವೆ ಮತ್ತೊಬ್ಬರು ಬಂದರು ಅವರೇ ಸವಿತಾ
ನಾವು ನಾಲ್ವರು ಹೆಂಗಳೆಯರು(ನಾವು ಮೂರು ಜನ + ನನ್ನ ಮಗಳು)
ನಂತರ ಒಬ್ಬೊಬ್ಬರ ಆಗಮನದಲ್ಲೂ ಕುತೂಹಲ
ಅಯ್ಯೋ ಇವರೇನಾ ಅವರು ಎಂಬ ಉದ್ಗಾರ
ಅಷ್ಟರಲ್ಲಿ ಮಿಂಚು ಬಂದಂತೆ ಬಂದರು ಹರಿಪ್ರಸಾದ್
ಬಹುಷ ಒಂದು ಸಂಘಟಕ ಶಕ್ತಿಯ ಅಗತ್ಯವಿತ್ತೇನೋ .
ಅವರಿಂದ ಅನೌಪಚಾರಿಕವಾಗಿ ಶುರುವಾಯ್ತು
ನಂತರ ಓಂಶಿವುರವರು ತಮ್ಮ ಹಾಗು ಸಂಪದದ ನಂಟನ್ನು ವಿವರಿಸಿದರು
ಹಾಗೆಯೇ ಅವರ ಮಾತು ಟೆಕ್ನಾಲಜಿಯ ಬಗ್ಗೆ ಹೊರಳಿತು
ಹರಿಯವರು ಸಂಪದದ ಹುಟ್ಟು ಅದರ ಬೆಳವಣಿಗೆಯ ಕುರಿತು ಮಾತಾಡಿದರು

ನಡುವೆ ಮಹೇಶ್, ಸುಪ್ರೀತ್, ಸುನಿಲ್‌ರ ಅನುಪಸ್ತ್ಯಿತಿಯ ಬಗ್ಗೆಯೂ ಮಾತಾಯ್ತು
ಸುಪ್ರೀತ್ ಯೂನಿಕ್ ಅದಕ್ಕೆ ಅವರು ಇಲ್ಲಿ ಬರಲಿಲ್ಲ ಎಂಬ ಚಟಾಕಿ ಅಸು ಅವರಿಂದ ಕೇಳಿಬಂದಿತು
ಎಂದಿನ ಜಂಜಾಟದ ನಡುವೆ ಒಂದು ಥರ ಹೊಸ ಅನುಭವವಾಯ್ತು
ಯಾವುದೇ ರೀತಿಯ ಅಜೆಂಡಾ ಇಲ್ಲದೇ ಸರಾಗವಾಗಿ ಮಾತುಕತೆಗಳು ನಡೆದವು
ಕೊನೆಗೆ ಇದೆಲ್ಲಾವುದಕ್ಕೆ ಕಾರಣವಾದ
ರಾಕೇಶ್, ಅರವಿಂದ,ನಾಗರಾಜ್ ರವರಿಗೆ ತುಂಬು ಧನ್ಯವಾದಗಳು
ಈ ಸ್ಥಳೀಯರಾಗಿದ್ದೂ ಕಾರ್ಯಕ್ರಮಕ್ಕೆ ಆಗಮಿಸದ ಇತರ ಸಂಪದಿಗರು ಮುಂದಿನ ಸಲ ಖಂಡಿತಾ ಬರುತ್ತಾರೆಂಬ ನಂಬಿಕೆಯೊಂದಿಗೆ
ಇದನ್ನು ಮುಗಿಸುತ್ತಿದ್ದೇನೆ

Rating
No votes yet

Comments