ಸಂಪದ 'ಲೈವ್' - Sampada 'Live'

3

ಸದಸ್ಯರೆಲ್ಲರಿಗೂ ಅಭಿನಂದನೆಗಳು. ನೀವುಗಳು ಮತ್ತಷ್ಟು 'ಸಂಪದ'ದಲ್ಲಿ ಕಾರ್ಯಶೀಲರಾಗುವಿರೆಂದು ಆಶಿಸುತ್ತ, 'ಸಂಪದ ಲೈವ್' ನಿಮ್ಮ ಮುಂದಿಡುತ್ತಿದ್ದೇನೆ.

'ಸಂಪದ ಲೈವ್'ನಲ್ಲಿ ನೀವು ಇತರ ಸದಸ್ಯರೊಂದಿಗೆ ಮಾತುಕತೆ ನಡೆಸಬಹುದು. ಆದರೆ ಗಮನದಲ್ಲಿಡಿ: ಇದಕ್ಕೆ ಜಾವಾಸ್ಕ್ರಿಪ್ಟ್ ಸಪೋರ್ಟ್ ಇರುವ ಬ್ರೌಸರ್ ಬೇಕು!

ಸಂಪದ ಲೈವ್ ಬರಿಯ ಪ್ರಯೋಗವಷ್ಟೆ. ಆದುದರಿಂದ 'ಸಂಪದ'ದಲ್ಲಿ ಅದರ ಇರುವಿಕೆ ನಿಮ್ಮೆಲ್ಲರ ರಿಯಾಕ್ಷನ್ ಮೇಲೆ ನಿಂತಿರುವಂತದ್ದು. ಎಲ್ಲರಿಗೂ ಸರಿ ಕಂಡಲ್ಲಿ ಈ ಸೌಲಭ್ಯ ಮುಂದುವರೆಯುವುದು.

[:chatbox|ಸಂಪದ ಲೈವ್ ಸೇರಿ ಮಾತನಾಡಲು ಇಲ್ಲಿ ಕ್ಲಿಕ್ ಮಾಡಿ]

ಧನ್ಯವಾದಗಳು,

- ಹೆಚ್ ಪಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಒಳ್ಳೆಯ ಪ್ರಯತ್ನ hpnರವರೆ... ಹೀಗೆ ಮುಂದ್ವರಿಲಿ ನಿಮ್ಮ ಕನ್ನಡದ ಕೆಲ್ಸ!

- ಅಪ್ಪಿ

ಹರಿ ಅವ್ರೆ ನೀವ್ ಕೆಲ ವರ್ಷಗಳ(೨೦೦೫ ಆಗಸ್ಟ್ ) ಹಿಂದೆ ಸದಸ್ಯರು ಪರಸ್ಪರ ಚಾಟ್ ಮಾಡಲು ಒಂದು ವ್ಯವಸ್ಥೆ ಮಾಡಿದ್ದೀರಿ ಅಂತ ಗೊತ್ತಾಯ್ತು(ಈ ಬರಹ ಓದಿ) ಆಮೇಲೆ ಆ ವ್ಯವಸ್ಥೆ ಮುಂದುವರೆಯಲಿಲ್ಲ ಅನಿಸುತ್ತೆ.. .. ಅದಕ್ಕೆ ಸದಸ್ಯರಿಂದ ಸೂಕ್ತ ಪ್ರೋತ್ಸಾಹ ಸಿಗಲಿಲ್ಲವೇ??? ಈಗ ಅದನ್ನು ಮರು ಸ್ಥಾಪಿಸುವ ಉದ್ದೇಶ ಇದೆಯೇ? ನನಗೆ ಆ ತರಹದ ವ್ಯವಸ್ತೆ ಇದ್ದರೆ ಚೆನ್ನ ಅನ್ನಿಸಿದೆ.. ಈ ಬಗ್ಗೆ ಸಹ ಸಂಪದಿಗರು ಏನು ಹೇಳುವರೋ? ನೋಡುವ.. ಶುಭವಾಗಲಿ.. ನನ್ನಿ \|/