ಮಕ್ಕಳೇ ನಿಮಗೆ ಈ ಹಾಡು

ಮಕ್ಕಳೇ ನಿಮಗೆ ಈ ಹಾಡು

ಬಾರೋ ಅಣ್ಣ ನೋಡಿ ಬರೋಣ
ಕನಸಲ್ ತಾರಾಲೋಕ
ಚಂದಮಾಮ ಸೂರ್ಯನ್ ಹಾಗೆ
ಇರೋಲ್ವಂತೆ ಶಾಖ

ಬಾರೋ ಅಣ್ಣ ಹತ್ತಿ ಬಿಡೋಣ
ಬಿಳಿಬಿಳಿ ಚಂದ್ರನ್ ಮೇಲೆ
ಅಲ್ಲೇ ನಿಂತು ನೋಡೋಣಂತೆ
ಕಾಣ್ಸುತ್ತೆ ನಮ್ ಶಾಲೆ

ಬಾರೋ ಅಣ್ಣ ಮುಟ್ಟಿ ಬರೋಣ
ಮಿನು ಮಿನುಗೋ ನಕ್ಷತ್ರ
ಟಾಮ್ ಅಂಡ್ ಜೆರ್ರಿ ಕತೆ ಹೇಳ್ಕೊಂಡು
ನಗ್ಬೇಕ್ ಅವುಗಳ ಹತ್ರ

ಅರ್ಧ ಚಂದ್ರನ್ ಮೇಲಾಡೋಣ
ಜಾರೋ ಬಂಡೆ ಜಾರಿ
ಆಡ್ತಾ ಆಡ್ತಾ ಬೀಳಿಸ್ಬಿಟ್ರೆ
ಹೊಡಿಬೇಡಣ್ಣ ಸಾರಿ

ಎಚ್ಚರಾಗೋಯ್ತು ಕಣ್ ಬಿಟ್ಬಿಟ್ಟೆ
ಎದುರಿಗೆ ಅಮ್ಮಾ ಇದ್ಲು
ಹೇಳ್ತಾ ಇದ್ಲು ಸ್ಕೂಲ್ ಹೊತ್ತಾಯ್ತು
ಏಳೇ ಕಂದಾ ಮೊದ್ಲು. ( ಹೇಗಿದೆ ಪುಟ್ಟ ಪುಟ್ಟಾಣಿ ಪದ್ಯ ?)

Rating
No votes yet

Comments