ಕನ್ನಡದಲ್ಲಿ ಓಸಿಆರ್ ಇದೆಯೇ?
ಕಿಟೆಲ್ ನಿಘಂಟಾಗಲೀ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಾಗಲೀ ಪಂಪಭಾರತವೇ ಆಗಲಿ ಮತ್ತೆ ಅದನ್ನು ಟೈಪು ಮಾಡುವುದು ಅತಿ ತ್ರಾಸಾದ ಕೆಲಸ. ಅದರ ಬದಲು ಸ್ಕ್ಯಾನಿಂಗ್ ಮಾಡಿ ಅಚ್ಚು ಹಾಕೋದು ಸುಲಭವೆನ್ನಬಹುದೇನೋ? ಈಗಾಗಲೇ ನವದೆಹಲಿಯ AES ನವರು ಹಳೆಯ ಕನ್ನಡ ಪುಸ್ತಕಗಳನ್ನು ಹೀಗೆಯೇ ಮರುಮುದ್ರಣ ಮಾಡಿದ್ದಾರೆ. ಆದರೆ ಅಚ್ಚಾಗುವ ಮುನ್ನ ಆ ಪುಸ್ತಕದ ಒಡಲಲ್ಲಿ ಏನನ್ನಾದರೂ ತಿದ್ದಬೇಕೆಂದರೆ ಅದು ಸಾಧ್ಯವಿಲ್ಲ.
ಮೈಸೂರು ವಿವಿ ಯವರು ತಮ್ಮ ಇಂಗ್ಲಿಷ್ ಕನ್ನಡ ನಿಘಂಟನ್ನು ಪಿಡಿಎಫ್ ರೂಪದಲ್ಲಿ ನೀಡಿದ್ದಾರೆ.
ಪುಸ್ತಕದ ಪುಟಗಳನ್ನು ನೋಡಿ ತಾನಾಗೇ ಅಕ್ಷರಗಳನ್ನು ಕಂಪೋಸ್ ಮಾಡುತ್ತಂತಲ್ಲ ಒಂದು ತಂತ್ರಾಂಶ, ಅದು ಕನ್ನಡದಲ್ಲಿ ಇದ್ದಿದ್ದರೆ ಎಷ್ಟು ಚೆನ್ನಿತ್ತು ಅಲ್ಲವೇ? ಇಂಗ್ಲಿಷಿನಲ್ಲಿ ಈಗಾಗಲೇ ಅಂಥದು ಇದೆಯಂತೆ. ಇಂಗ್ಲಿಷಿನಲ್ಲಿ ಬರೇ ೨೬+೨೬ ಅಕ್ಷರಗಳಿರುವುದರಿಂದ ಈ ತಂತ್ರಾಂಶ ಸಾಧ್ಯವಾಗಿದೆಯಂತೆ. ಆದರೆ ಕನ್ನಡದಲ್ಲಿ ಅಕ್ಷರಮಾಲೆ, ಒತ್ತಕ್ಷರ, ಕಾಗುಣಿತ ಎಲ್ಲ ಸೇರಿದರೆ ಅದು ಹತ್ತಿರ ಹತ್ತಿರ ೫೦೦ ಆಗುತ್ತದೆಯಾದ್ದರಿಂದ ಈ ಓಸಿಆರ್ (ಆಪ್ಟಿಕಲ್ ಕ್ಯಾರಕ್ಟರ್ ರೆಕಗ್ನಿಶನ್) ತಂತ್ರಾಂಶ ಸಾಧ್ಯವಾಗುತ್ತಿಲ್ಲವಂತೆ.
ಹಿಂದೊಮ್ಮೆ ತಾತಾ ವಿಜ್ಞಾನ ಮಂದಿರದ ಇಬ್ಬರು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದರಂತೆ. ನೋಡಿ http://www.springerlink.com/content/09gn4jx2eqcwk9xy/
ಅಲ್ಲದೆ ಅಡೋಬ್ ನವರಾಗಲೀ, ಮೈಕ್ರೋಸಾಫ್ಟಿನವರಾಗಲೀ ಅಥವಾ ಇನ್ಯಾರಾದರೂ ಈ ಕುರಿತು ತಮ್ಮ ಪ್ರಯತ್ನ ಮುಂದುವರಿಸಿರಬಹುದು. ಆ ಪ್ರಯತ್ನ ಬೇಗ ಕೈಗೂಡಲಿ ಎಂದು ಆಶಿಸುತ್ತೇನೆ.
ಏಕೆಂದರೆ ನಮ್ಮಲ್ಲಿ ನವಕರ್ನಾಟಕದವರ ಜ್ಞಾನವಿಜ್ಞಾನಕೋಶ, ಮೈಸೂರು ವಿಶ್ವವಿದ್ಯಾಲಯದವರ ಕನ್ನಡ ವಿಶ್ವಕೋಶ, ರೈಸರ ಎಪಿಗ್ರಾಫಿಯಾ ಕರ್ನಾಟಿಕಾ, ಕಿಟೆಲರ ನಿಘಂಟು, ಕವಿಗಳ ಸಾರಸ್ವತ ಭಂಡಾರ ಎಲ್ಲವೂ ಪುಸ್ತಕ ರೂಪದಲ್ಲಿದೆ. ಅವನ್ನೆಲ್ಲ ಡಿಜಿಟೈಸ್ ಮಾಡಿ ಅಂತರ್ಜಾಲದಲ್ಲಿ ಊಡಿದರೆ ಎಷ್ಟು ಚೆನ್ನ ಅಲ್ಲವೇ? ಆದ್ದರಿಂದ ಅಂಥಾ ಒಂದು ತಂತ್ರಾಂಶದ ಅಗತ್ಯ ಇಂದು ಎದ್ದು ಕಾಣುತ್ತಿದೆ.
ಪ್ರೀತಿಯಿಂದ
ಸಿ ಮರಿಜೋಸೆಫ್
Comments
ಉ: ಕನ್ನಡದಲ್ಲಿ ಓಸಿಆರ್ ಇದೆಯೇ?
In reply to ಉ: ಕನ್ನಡದಲ್ಲಿ ಓಸಿಆರ್ ಇದೆಯೇ? by cmariejoseph
ಉ: ಕನ್ನಡದಲ್ಲಿ ಓಸಿಆರ್ ಇದೆಯೇ?
ಉ: ಕನ್ನಡದಲ್ಲಿ ಓಸಿಆರ್ ಇದೆಯೇ?
In reply to ಉ: ಕನ್ನಡದಲ್ಲಿ ಓಸಿಆರ್ ಇದೆಯೇ? by vikashegde
ಉ: ಕನ್ನಡದಲ್ಲಿ ಓಸಿಆರ್ ಇದೆಯೇ?
In reply to ಉ: ಕನ್ನಡದಲ್ಲಿ ಓಸಿಆರ್ ಇದೆಯೇ? by cmariejoseph
ಉ: ಕನ್ನಡದಲ್ಲಿ ಓಸಿಆರ್ ಇದೆಯೇ?
In reply to ಉ: ಕನ್ನಡದಲ್ಲಿ ಓಸಿಆರ್ ಇದೆಯೇ? by omshivaprakash
ಉ: ಕನ್ನಡದಲ್ಲಿ ಓಸಿಆರ್ ಇದೆಯೇ?