ಮರು ಜನ್ಮ - secondlife.com

ಮರು ಜನ್ಮ - secondlife.com

ಕೆಲ ದಿನಗಳ ಹಿಂದೆ CNN ನಲ್ಲಿ ಈ ವೆಬ್-ಸೈಟ್ನ ಬಗ್ಗೆ ನೋಡಿದ್ದೆ. ತುಂಬಾ ಕುತೂಹಲಕಾರಿಯಾಗಿತ್ತು. ನೆನ್ನೆ ಕೊನೆಗೂ ಹೋಗಿ ನೋಡ್ದೆ.  ನಿಜಕ್ಕೂ ಅದ್ಭುತವಾಗಿದೆ. ಯಾರು "The Matrix" ಚಿತ್ರವನ್ನ ಹೆಚ್ಚ್ಹಾಗಿ ಇಷ್ಟ ಪಟ್ಟಿದ್ರೋ ಅವ್ರಿಗಂತೂ ಇದು ಇಷ್ಟ ಆಗೋದ್ರಲ್ಲಿ ಸಂದೇಹವೇ ಇಲ್ಲ.

Secondlife.com ಕಂಪೂಟರ್ ಒಳಗೇ ಸ್ರುಷ್ಟಿ ಆಗಿರೋ ಒಂದು 3D ಪ್ರಪಂಚ.  ಅದರೊಳಗೆ ಪ್ರವೇಶ ಮಾಡಿದ್ರೆ, ನಿಮ್ಮ ಒಂದು 3D ರೂಪ ಕಾಣುತ್ತೆ.  ಹಾಗೆ ಲಾಗಿನ್ ಆದವ್ರ ಬೇರೆ 3D ಮಾನವ ಚಿತ್ರಗಳೂ ಇರುತ್ತೆ. ಒಳಗೆ ಒಂದು 3D ಪ್ರಪಂಚವೇ ಇದೆ.  ಸಮುದ್ರಗಳು, ಅದರ ಮಧ್ಯೆ ಸಾವಿರಾರು  ದ್ವೀಪಗಳು, ಪ್ರತಿಯೊಂದು ದ್ವೀಪಗಳಲ್ಲಿ ಅಂಗಡಿ ಮುಂಗಟ್ಟುಗಳು ಎಲ್ಲವೂ ಇದೆ.  ಆ ಅಂಗಡಿಗಳಲ್ಲಿ ನಾವು ಲಿಂಡೆನ್ ಎಂಬ Currencyಯಲ್ಲಿ ಖರೀದಿಯನ್ನೂಮ ಾಡಬೋದು. Coca-cola, Pepsi ಹೀಗೆ ಹಲವಾರು ಕಂಪನಿಗಳು ನಿವೇಶನಗಳನ್ನು ಕೊಂಡು ಈ ಪ್ರಪಂಚದಲ್ಲಿ ಜಾಹಿರಾತನ್ನೂ ಆರಂಬಿಸಿದ್ದಾರೆ.  ನಾವು  ನೆಡೆಯಬಹುದು, ಓಡಬಹುದು, ಹಾರಬಹುದು, ಯಾವ ಬಟ್ಟೆಯನ್ನಾದ್ರೂ ಧರಿಸಬಹುದು,  ಯಾರೋಡನೆಯಾದ್ರೂ ಮಾತಾಡ್ಬೋದು, ನಿವೇಶನಗಳನ್ನು ಕೊಂಡು ನಮ್ಮದೇ ಉದ್ಯಮವನ್ನೂ ಸ್ಥಾಪಿಸಬೋದು.  ನಿಜಕ್ಕೂ ವಿಸ್ಮಯಕಾರಿ !

ನನ್ನ ಒಂದು ಪುಟ್ಟ ಯೋಚನೆ. ನಾವೆಲ್ಲಾ ಸೇರಿ ಈ ಪ್ರಪಂಚದಲ್ಲಿ ಒಂದು ದ್ವೀಪವನ್ನು ಕೊಂಡು ಅದರಲ್ಲಿ ಒಂದು "ಕನ್ನಡ ಭವನ"ವನ್ನ ಸ್ಥಾಪಿಸಬೇಕು.  ಕನ್ನದ ಭವನದಲ್ಲಿ ಕನ್ನಡದ ಬಗ್ಗೆ ಮಾಹಿತಿಯನ್ನ ಕೊಡ್ಬೇಕು - ಸಖತ್ತಾಗಿರುತ್ತೆ ಅಲ್ವಾ ?  ;)

Rating
No votes yet

Comments