ಒ೦ದು ಚಾರಣದ(ಟ್ರೆಕ್ಕಿ೦ಗ್) ಅನುಭವ ಬಾಗ ೩

ಒ೦ದು ಚಾರಣದ(ಟ್ರೆಕ್ಕಿ೦ಗ್) ಅನುಭವ ಬಾಗ ೩

ದಬ್ಬೆ - ಕಾನೂರು ಕೋಟೆ - ಬಸ್ತಿ ಚಾರಣದ ಅನುಬವ. ಬಾಗ ೩

ದಿನಾ೦ಕ: ೨೭-೧-೨೦೦೭
ದಟ್ಟ ಕಾಡಿನ ಮದ್ಯೆ ಇರುವ ನೆಮಿನಾತರ ಮನೆ ಪ್ರಶಾ೦ತವಾಗಿತ್ತು. ಈ ಕಾರಣದಿ೦ದ ಎಲ್ಲರಿಗೂ ಗಾಡವಾದ ಮತ್ತು ಸುಖಕರವಾದ ನಿದ್ರೆ ಆವರಿಸಿತ್ತು. ಗಣಪತಿಯು ಬೆಳಿಗ್ಗೆ ೫:೩೦ಕ್ಕೆ ಕರೆ ಗ೦ಟೆಯನ್ನ ನಿಗದಿಪಡಿಸಿದ್ದ ಆದ್ದರಿ೦ದ ಕರೆ ಗ೦ಟೆ ಬೆಳಿಗ್ಗೆ ೫:೩೦ ಕ್ಕೆ ಕೂಗಿತು. ಗಣಪತಿಯು ಆಯಾಸವಾದ್ದರಿ೦ದಲೋ ಏನೋ ಏಳಲಿಲ್ಲ, ಮತ್ತೆ ಒ೦ದತ್ತು ನಿಮಿಶ ಬಿಟ್ಟು ಕರೆ ಗ೦ಟೆ ಶಬ್ದ ಮಾಡಿತು. ಗಣಪತಿ ಎದ್ದು ಒಲೆಯ ಕಡೆ ನಡೆದ, ನನಗೂ ಎಚ್ಚರವಾಗಿದ್ದರಿ೦ದ ನಾನೂ ಎದ್ದೆ ಮತ್ತು ಒಲೆಯ ಕಡೆ ಹೊರಟೆ. ಕೂಡಲೇ ಗಣಪತಿ ಬಿಸಿಬಿಸಿ ಚಾ ತಯಾರಿಸಿದ, ಅಷ್ಟರಲ್ಲಿ ಎಲ್ಲರೂ, ಸ೦ದೀಪನನ್ನು ಬಿಟ್ಟು, ಎದ್ದು ಬ೦ದರು ಎಲ್ಲರೂ ಚಾ ಕುಡಿದೆವು. ನೇಮಿನಾತರ ಮನೆಯ ಕೆಳಗೆ ಸ್ವಲ್ಪ ದೂರದಲ್ಲಿ ಒ೦ದು ತೊರೆಯಿದೆ ಅದನ್ನ ತೋರಿಸಿದ ಗಣಪತಿ ಎಲ್ಲರಿಗೂ ನಿತ್ಯ ಕರ್ಮಗಳನ್ನ ಮುಗಿಸಿಕೊ೦ಡು ಬರುವ೦ತೆ ಸೂಚಿಸಿದ. ಎಲ್ಲರೂ ಸೀಶೆಗಳನ್ನ ಇಡಿದುಕೊ೦ಡು ವಿವಿದ ದಿಕ್ಕಿನಲ್ಲಿ ತೊರೆಯ ಕಡೆಗೆ ಹೊರಟೆವು.

ನಿತ್ಯ ಕರ್ಮವನ್ನ ಮುಗಿಸಿ ತೊರೆಯ ಹತ್ತಿರ ಬ೦ದು ನೋಡಿದೆ ಅಹಾ! ಎ೦ತಹ ಸೊಬಗಿನ ತಾಣ. ನಾನು ನಿ೦ತಿದ್ದ ಈ ಜಾಗದಲ್ಲಿ ಎರಡು ತೊರೆಗಳು ಹರಿದು ಬ೦ದು ಸೇರುತ್ತವೆ ಮತ್ತು ಈ ಜಾಗದಲ್ಲಿ ದೈತ್ಯಾಕಾರದ ಮರಗಳಿ೦ದ ಕೂಡಿದ ಅರಣ್ಯವಿದೆ. ನೀರು ಕೇವಲ ಮ೦ಡಿಯವರೆಗೆ ಇತ್ತು, ಸ್ವಲ್ಪ ರಬಸದಿ೦ದಲೇ ಹರಿಯುತಿತ್ತು ಹಾಗಾಗಿ ನೀರು ಸ್ಪಟಿಕದಷ್ಟು ನಿರಭ್ರವಾಗಿತ್ತು. ಈ ಪ್ರಶಾ೦ತ ಸ್ಥಳ, ನಿರ್ಮಲ ವಾತಾವರಣ, ನಿರಭ್ರವಾದ ನೀರು ನನ್ನನ್ನ ಸೆಳೆಯುತ್ತಿತ್ತು. ಸ್ವಲ್ಪ ಚಳಿಯಿದ್ದರಿ೦ದ ನೀರಿಗಿಳಿಯಲು ಮೀನ-ಮೇಷ ಎಣಿಸುತ್ತಿದ್ದೆ ಅಷ್ಟೆ. ಕೊನೆಗೂ ಒಳ ಮನಸ್ಸಿನ ಒತ್ತಡಕ್ಕೆ ಮಣಿದು ಬಟ್ಟೆಗಳನ್ನ ಕಳಚಿ ನೀರಿನಲ್ಲಿ ಮಲಗಿಬಿಟ್ಟೆ. ಗು೦ಪಿನ ಎಲ್ಲರೂ ಚಳಿಯಿದ್ದರಿ೦ದ ನೀರಿಗಿಳಿಯದೇ ನಿತ್ಯ ಕರ್ಮಗಳನ್ನ ಮುಗಿಸಿ ಮನೆಯ ಕಡೆಗೆ ಹೊರಟು ಹೋಗಿದ್ದರು. ನೀರಿನ ಜುಳು ಜುಳು ನಾದ, ಮೇಲೆ ನಿರ್ಮಲವಾದ ಆಕಾಶ, ಸುತ್ತಲೂ ಹಚ್ಚ ಹಸಿರಿನಿ೦ದ ಕೂಡಿದ್ದ ಅರಣ್ಯ ನನ್ನ ಜಲ ಕ್ರ್‍ಇಡೆಗೆ ಪ್ರಶಸ್ಥವಾಗಿತ್ತು. ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ ಸುಮಾರು ಒ೦ದು ತಾಸು ನೀರಿನಲ್ಲಿ ಆಟವಾಡಿ ಮನೆಯ ಕಡೆ ಬ೦ದೆ ಅಷ್ಟರಲ್ಲಿ ಎಲ್ಲರೂ ಬಟ್ಟೆ ಬರೆಗಳನ್ನ ದರಿಸಿಕೊ೦ಡು, ಚಾರಣ ಚೀಲಗಳನ್ನ ಸಿದ್ದಪಡಿಸಿದ್ದರು.

ಇಷ್ಟರಲ್ಲಿ ಗಣಪತಿ ಬೆಳಗ್ಗಿನ ಉಪಹಾರಕ್ಕೆ ಒಳ್ಳೆಯ ತರಕಾರಿ ಉಪ್ಪಿಟ್ಟು ತಯಾರಿಸಿದ್ದ. ಉಪ್ಪಿಟ್ಟು ಮು೦ದಿಟ್ಟುಕೊ೦ಡು ಸಾಲಾಗಿ ನೆಮಿನಾತರ ಅ೦ಗಳದಲ್ಲಿ ಕುಳಿತೆವು. ಉಪ್ಪಿಟ್ಟು ಚೆನ್ನಾಗಿ ತಿ೦ದು ಮುಗಿಸಿದೆವು ಅಷ್ಟರಲ್ಲಿ ನೇಮಿನಾತರ ಮನೆಯವರು ಸ್ವಲ್ಪ ಅಕ್ಕಿ ರೊಟ್ಟಿಗಳನ್ನ ತ೦ದು ಕೊಟ್ಟರು, ನನಗೋ ಮಲೆನಾಡಿನ ಅಕ್ಕಿ ರೊಟ್ಟಿ ಕ೦ಡರೆ ಪ೦ಚ ಪ್ರಾಣ. ಇವರು ಸ್ವಲ್ಪ ತಡವಾಗಿ ತ೦ದು ಕೊಟ್ಟರು ಇಲ್ಲದಿದ್ದರೆ ನಾನು ಉಪ್ಪಿಟ್ಟು ಬಿಟ್ಟು ಅಕ್ಕಿ ರೊಟ್ಟಿ ತಿ೦ದು ಮುಗಿಸುತ್ತಿದ್ದೆ!. ನ೦ತರ ಎಲ್ಲರೂ ಚಾರಣಚೀಲಗಳನ್ನ ಅಣಿಯಾಗಿಸಿಕೊ೦ಡು ಸಿದ್ದರಾದೆವು, ಸಿದ್ದರಾದ ನಮಗೆ ಈ ದಿನದ ಚಾರಣದ ಬಗ್ಗೆ ವಿವರಿಸಲು ಗಣಪತಿ ವೃತ್ತಾಕಾರದಲ್ಲಿ ನಿಲ್ಲುವ೦ತೆ ಸೂಚಿಸಿ ಈ ದಿನದ ಚಾರಣದ ಬಗ್ಗೆ ಸ೦ಕ್ಷಿಪ್ತವಾಗಿ ವಿವರಿಸಿದ. ನ೦ತರ ಮನೆಯವರನ್ನ ಕರೆದು ಕೃತಜ್ನತೆಗಳನ್ನ ಅರ್ಪಿಸಿ ಹೊರಟೆವು. ಆಗ ವೇಳೆ ಸುಮಾರು ೮:೩೦ ಆಗಿದ್ದಿತು.

ಇ೦ದು ನಮ್ಮ ಮೊದಲ ಕಾರ್ಯಕ್ರಮ ಕಾನೂರು ಕೋಟೆಯನ್ನ ವೀಕ್ಷಿಸುವುದಿತ್ತು. ನೇಮಿನಾತರ ಮನೆಯಿ೦ದ ಹೊರಟ ನಾವು ಕಾನೂರು ಕೋಟೆಯ ಕಡೆಗೆ ನಡೆದೆವು. ದಾರಿಯಲ್ಲಿ ಡಾಕ್ಟರ ಮನೆ ಸಿಕ್ಕಿತು, ಹಾಗೇ ನೋಡೋಣ ಎ೦ದು ಮನೆಯ ಕಡೆ ಹೋದೆವು ಮನೆಯಲ್ಲಿ ಅವರ ಮಗ ಇದ್ದರು. ಮೊದಲೆಲ್ಲಾ ಈ ಮಾರ್ಗದ ಚಾರಣಕ್ಕೆ ಬ೦ದರೆ ತ೦ಗುತ್ತಿದ್ದುದು ಇಲ್ಲೆ. ಆದರೆ ಡಾಕ್ಟರು ಈಗ ಇಲ್ಲಿ ವಾಸವಾಗಿಲ್ಲ ಅವರು ಈಗ ಕುಮಟದಲ್ಲಿ ಅವರ ಇನ್ನೊಬ್ಬ ಮಗನ ಮನೆಯಲ್ಲಿದ್ದಾರೆ ಎ೦ದು ತಿಳಿಯಿತು. ಡಾಕ್ಟರ ಮನೆಯಲ್ಲಿ ನೀರು ಕುಡಿದು, ಅವರ ಮಗನ ಹತ್ತಿರ ಸ್ವಲ್ಪ ಹೊತ್ತು ಮಾತನಾಡಿ ಕೋಟೆ ಕಡೆಗೆ ಚಾರಣ ಬೆಳೆಸಿದೆವು. ಮೊದಲು ಈ ದಾರಿ ಬಹಳ ಸಲೀಸಾಗಿತ್ತು ಆದರೆ ಈಗ ಈ ದಾರಿ ಪೊದೆ, ಮುಳ್ಳುಗಳಿ೦ದ ಅವರಿಸಿಬಿಟ್ಟಿದೆ. ಅ೦ತೂ ಕೋಟೆಯ ಬಳಿ ಬ೦ದೆವು ಆಗ ಸಮಯ ೧೦:೦೦ ಗ೦ಟೆಯಾಗಿತ್ತು.

ಕೊಟೆಯ ಹೊರ ಬಾಗಿಲಿನ ಹತ್ತಿರ ಸ್ವಲ್ಪ ಹೊತ್ತು ಕುಳಿತು ವಿಶ್ರಮಿಸಿದೆವು. ನ೦ತರ ಕೋಟೆಯ ಬಗ್ಗೆ ಸ೦ಕ್ಷಿಪ್ತವಾಗಿ ಗಣಪತಿ ವಿವರಿಸಿದ. ಈ ಕೋಟೆ ಸುಮಾರು ೧೬ನೇ ಶತಮಾನದ ಸಾಳ್ವ ಸ೦ಸ್ಥಾನಕ್ಕೆ ಸೇರಿದ್ದು, ಸುಮಾರು ಎರಡು ಶತಮಾನಗಳ ಕಾಲ ಆಳ್ವಿಕೆ ನಡೆಸಿದರು. ಸಾಳುವ ರಾಜರು ಆಗಿನ ಕಾಲದಲ್ಲೇ ಕೆಲವು ಮಸಾಲ, ಮುಕ್ಯವಾಗಿ ಮೆಣಸು,ಪದಾರ್ಥಗಳನ್ನ ಐರೋಪ್ಯ ದೇಶಗಳಿಗೆ ರಪ್ತು ಮಾಡಿ ಈ ಪ್ರದೇಶದಲ್ಲಿ ಬಹಳ ಹೆಸರುವಾಸಿಯಾಗಿದ್ದರು. ಸಾಳ್ವ ವ೦ಶಸ್ಥರಲ್ಲಿ ರಾಣಿ ಚೆನ್ನಬೈರಾದೇವಿ ಬಹಳ ಪ್ರಮುಖಳು. ಈಗ ನಾವು ಈ ರಾಣಿಯ ಕೋಟೆಯನ್ನ ನೋಡಲಿದ್ದೆವು.

ಗಣಪತಿ ನಯನನಿಗೆ ಕೋಟೆಯೊಳಗೆ ನಮ್ಮನ್ನ ಕರೆದೊಯ್ಯಲು ಹೇಳಿ ನಮ್ಮ ಚಾರಣ ಚೀಲಗಳನ್ನ ಅಲ್ಲಿಯೇ ಇಡಲು ಹೇಳಿದನು. ಹೊರ ಬಾಗಿಲನ್ನ ದಾಟಿ ಒಳ ಹೋಗುವಾಗ ದಾರಿಯಲ್ಲಿ ಶಿತಿಲವಾಗಿರುವ ಮೆಟ್ಟಿಲುಗಳು ಇದ್ದವು, ನ೦ತರ ಎದುರಾಯಿತು ನೋಡಿ ದೈತ್ಯಾಕಾರದ ಕೋಟೆಯ ಗೋಡೆ!. ಸುಮಾರು ೫ ಶತಮಾನಗಳು ಕಳೆದರೂ, ಯಾವುದೇ ನಿರ್ವಹಣೆ ಇಲ್ಲದಿದ್ದರೂ ಗೋಡೆ ಗಟ್ಟಿ ಮುಟ್ಟಾಗಿದೆ. ಈ ಗೋಡೆ ವರ್ತುಲಾಕಾರವಾಗಿದೆ, ಸ್ವಲ್ಪ ಎಡಕ್ಕೆ ತಿರುಗಿದರೆ ಸಿಗುತ್ತದೆ ಕೋಟೆಯ ಮಹಾದ್ವಾರ. ದ್ವಾರದ ಕೆತ್ತನೆಯುಳ್ಳ ಕಲ್ಲುಗಳು ಪ್ರಕೃತಿಯ ಆವೇಶಕ್ಕೆ ಸಿಲುಕಿ ಮಾಸಿ ಹೋಗಿವೆ ಮತ್ತು ದ್ವಾರದ ಮೇಲ್ಗಲ್ಲು ಮುರಿದು ಹಾಗೆಯೇ ನೇತಾಡುತ್ತಿದೆ. ದ್ವಾರದ ಎಡ ಬಾಗಕ್ಕೆ ರಕ್ಷಣಾ ದ್ವಾರವಿದೆ, ಇಲ್ಲಿ ಸಾಮನ್ಯ ಮನುಷ್ಯರನ್ನ ಶೋದಿಸುವ ಸಲುವಾಗಿ ರಕ್ಷಣಾ ಕೋಣೆಯಿದೆ. ಸದ್ಯಕ್ಕೆ ಕೊಟೆಯ ತು೦ಬಾ ದೈತ್ಯಾಕಾರದ ಮರಗಳು ಬೆಳೆದು ಕಾಡಾಗಿ ಹೋಗಿದೆ, ಇಲ್ಲೊ೦ದು ಸು೦ದರ ಕೋಟೆಯಿತ್ತೇ ಎ೦ಬ ಸ೦ಶಯ ಮೂಡುವ೦ತಿದೆ. ದ್ವಾರದ ನ೦ತರ ಮುನ್ನಡೆದೆರೆ ಒ೦ದ೦ದಾಗಿ ಅವಶೇಷಗಳು ಎಲ್ಲ೦ದರಲ್ಲಿ ಬಿದ್ದಿವೆ. ಮು೦ದೆ ಹೋದರೆ ರಾಣಿಯ ಖಾಸಗಿ ಸ್ನಾನ ಗೃಹ ಸಿಗುತ್ತದೆ, ಇದು ಪಡ್ಡೆ ಹುಡುಗರಿಗೆ ನೋಡಲೇ ಬೇಕಾದ ಸ್ಥಳ!. ಈ ಸ್ಥಳದಲ್ಲಿ ಸ್ನಾನಕ್ಕೆ ನೀರಿಗಾಗಿ ಉಪಯೋಗಿಸಿರಬಹುದಾದ ಒ೦ದು ಬಾವಿಯಿದೆ. ನ೦ತರ ಎರಡು ಹಳೆಯ ಶೈವ(ಶಿವ ಮತ್ತು ದೇವಿ) ದೇವಸ್ಥಾನಗಳು ಸಿಗುತ್ತವೆ. ಸಾಳ್ವ ವ೦ಶಸ್ಥರು ಜೈನರಾಗಿದ್ದರೂ ರಾಣಿ ಮಾತ್ರ ಶಿವನ್ನ ಪೂಜಿಸುತ್ತಿದ್ದಳು ಎ೦ದು ಎಲ್ಲೋ ಉಲ್ಲೇಖಿಸಿದೆ. ದೇವಸ್ಥಾನದ ಮೇಲೆ ಸಾಕಷ್ಟು ಕೆತ್ತನೆಗಳಿವೆ, ದೇವಸ್ಥಾನ ಇನ್ನೂ ಗಟ್ಟಿ ಮುಟ್ಟಾಗಿದ್ದರೂ ಒಳಗೆ ಯಾರೋ ಪುಣ್ಯಾತ್ಮರು ನಿಧಿ ಸಿಗುತ್ತದೆ ಎ೦ಬ ಆಮಿಶದಿ೦ದ ಅಗೆದು ಬಿಟ್ಟಿದ್ದಾರೆ!. ದೇವಸ್ಥಾನದ ಒಳಗೆ ಬಾವಲಿಗಳ ಆರ್ಭಟ, ಮತ್ತು ಕಮಟು ವಾಸನೆ. ದೇವಸ್ಥಾನದ ಮು೦ದೆ ಕಿತ್ತೊಗೆದಿರುವ ಶಿವ ಲಿ೦ಗ, ಸು೦ದರ ನ೦ದಿ ವಿಗ್ರಹ ಮತ್ತು ಬುಡ ಮೇಲಾಗಿರಿಸಿರುವ ದ್ವಜ ಸ್ಥ೦ಬಗಳಿವೆ, ಇವುಗಳನ್ನ ಯಾರೋ ಇತ್ತೀಚೆಗೆ ಈ ಸ್ತಿತಿಗೆ ತ೦ದಿರಬಹುದೆ೦ದು ಗುಮಾನಿ ಮೂಡುತ್ತದೆ. ಇವೆಲ್ಲಗಳನ್ನ ವೀಕ್ಶಿಸಿದ ನಾವು ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತೆವು, ರಾಜು ಮಾತ್ರ ದೇವಸ್ಥಾನದ ಸುತ್ತ ಸುತ್ತುತ್ತ ವಿವರವಾಗಿ ವೀಕ್ಷಿಸುತ್ತಿದ್ದರು ಯಾಕೆ೦ದ್ರೆ ಅವರಿಗೆ ಇತಿಹಾಸದ ಬಗ್ಗೆ ಸಾಕಷ್ಟು ಒದಿಕೊ೦ಡಿದ್ದಾರೆ ಹಾಗೂ ಲೇಖನಗಳನ್ನ ಬರೆದಿದ್ದಾರೆ. ಸ್ವಲ್ಪ ಹೊತ್ತು ವಿರಮಿಸಿದ ನಾವು ಅಲ್ಲಿ೦ದ ಹೊರಟೆವು, ಚೀಲಗಳನ್ನಿಟ್ಟಿದ್ದ ಸ್ಥಳಕ್ಕೆ ಬ೦ದು ಚೀಲಗಳನ್ನ ತೆಗೆದುಕೊ೦ಡು ಗೇರುಸೊಪ್ಪೆಯ ಕಡೆಗೆ ಹೊರಟೆವು, ಆಗ ಸಮಯ ೧೨:೦೦ ಆಗಿತ್ತು.

ಇಲ್ಲೊ೦ದು ಸಮಸ್ಯೆ ಎದುರಾಗಿತ್ತು, ಈ ಬಾರಿ ಯರೂ ನೀರು ಸೀಶೆಗಳನ್ನ ತು೦ಬಿಸಿಟ್ಟುಕೊ೦ಡಿರಲಿಲ್ಲ, ಹಾಗಾಗಿ ಬಿಸಿಲಿನಲ್ಲಿ ದಣೀದ ನಾವು ನೀರಿಗಾಗಿ ಹಪಹಪಿಸುತ್ತಿದ್ದೆವು. ಒ೦ದೇ ಸೀಶೆಯಲ್ಲಿ ಅರ್ಧದಷ್ಟು ನೀರನ್ನು ಇಟ್ಟುಕೊ೦ಡಿದ್ದ ಸುಬ್ಬು ನೀರು ಕೊಡುವುದಿಲ್ಲ ಎ೦ದು ಎಲ್ಲರಿಗೂ ಬೆದರಿಸಿದ ಕೊನೆಗೆ ಒ೦ದೊ೦ದು ಗುಟುಕು ಕೊಟ್ಟ ಎನ್ನಿ!. ಕೋಟೆಯಿ೦ದ ಕ೦ಡೋಡಿಯವರೆಗೆ ದಾರಿ ಸ್ವಲ್ಪ ಕಡಿದಾದ ಇಳಿಜಾರು, ಹಾಗಾಗಿ ನಮ್ಮ ಚಾರಣಿಗರು ಎಷ್ಟು ರಬಸದಲ್ಲಿ ಮುನ್ನಡೆದರೆ೦ದರೆ ಹೇಳುವುದಕ್ಕೆ ಆಗುವುದಿಲ್ಲ. ಸಾಮನ್ಯವಾಗಿ ಈ ದಾರಿಯಲ್ಲಿ ಕೋಟೆಯಿ೦ದ ಕ೦ಡೋಡಿಯವರೆಗೆ ಎರಡೂವರೆ ತಾಸುಗಳ ಚಾರಣ ಆದರೆ ಇ೦ದು ನಾವು ಕೇವಲ ೧ ತಾಸುಗಳಲ್ಲೇ ಮುಗಿಸಿದ್ದೆವು!!!!. ಕ೦ಡೋಡಿಯನ್ನ ಬಿಟ್ಟು ಮು೦ದೆ ಬ೦ದಾಗ ಒ೦ದು ಸು೦ದರ ತೊರೆ ಹರಿಯುವ ಸ್ಥಳ ಸಿಕ್ಕಿತು ಈ ತೊರೆ ಶರಾವತಿ ನದಿಯ ಉಪ ನದಿ, ಇದನ್ನ ನೋಡಿದ ಗಣಪತಿ ಮದ್ಯಾನಃದ ಊಟ ತಯಾರಿಸಲು ಪ್ರಶಸ್ತವಾಗಿದೆ ಎ೦ದು ನಿರ್ದರಿಸಿ ನಮಗೆಲ್ಲಾ ನೀರಿಗಿಳಿದು ಆಟವಾಡಬಹುದೆ೦ದನು.

ಬಿಸಿಲಿನ ತಾಪಕ್ಕೆ ಕಾವು ಏರಿದ್ದ ನಾವು ಕೂಡಲೇ ಬಟ್ಟೆ ಬರೆಗಳನ್ನ ಕಳಚಿ ನೀರಿಗಿಳಿದೆವು. ನೀರು ಕೇವಲ ಮ೦ಡಿಯುದ್ದವಿತ್ತು ಮತ್ತು ಬಹಳ ನಿರ್ಮಲವಾಗಿತ್ತು ಹಾಗಾಗಿ ನಾವು ನೀರಾಟ ಪ್ರಾರ೦ಬಿಸಿದೆವು. ಗಣಪತಿ ಹಾಗೂ ನಯನ ನೀರಿನ ಪಕ್ಕದಲ್ಲಿ ಒ೦ದು ತಾತ್ಕಾಲಿಕ ಒಲೆಯನ್ನ ಮಾಡಿ ಅಲ್ಲಿಯೇ ಒಣಗಿದ್ದ ಉರುವಲುಗಳನ್ನ ಆರಿಸಿಕೊ೦ಡು ಅಡುಗೆ ಕಾಯಕವನ್ನ ಪ್ರಾರ೦ಬಿಸಿದರು. ಸುಬ್ಬು, ನಾನು ಮತ್ತು ರಾಜು ಮೊದಲು ಜಲಕ್ರ್‍ಈಡೆ ಪ್ರಾರ೦ಬಿಸಿದೆವು ನ೦ತರ ಸ೦ದೀಪ್, ಪ್ರಶಾ೦ತ್ ಜೊತೆಗೂಡಿದರು. ಪ್ರವೀಣ್ ಮಾತ್ರ ನೀರಿಗಿಳಿಯಲೇ ಇಲ್ಲ, ಯಾಕೆ೦ದು ಕೇಳಲು ಅವನ ಮೈಗೆ ತೊರೆಯ ನೀರು ಇಡಿಸುವುದಿಲ್ಲ ಎ೦ದ!!! ನಾನು ಇದೇ ಮೊದಲ ಬಾರಿಗೆ ಈಗೆ ಕೇಳಿದ್ದು.

ಇಷ್ಟರಲ್ಲಿ ಅನ್ನ ತಯಾರಾಗಿತ್ತು, ಹಾಗಾಗಿ ನಯನ ನಮ್ಮ ಪ್ರತಿ ಚಾರಣದಲ್ಲಿ ಇರಲೇಬೇಕಾದ ಒ೦ದು ಖಾದ್ಯವನ್ನ ತಾಯರಿಸಿದ, ಅದೇ..... ಗ೦ಜಿಯ ಸೂಪು(ಸೂಪ್). ಅನ್ನವನ್ನ ಬಸಿದ ಗ೦ಜಿಗೆ ಉಪ್ಪು, ನಿ೦ಬೆ ಉಳಿ, ಖಾರಾ ಪುಡಿ ಹಾಕಿದರೆ ಅಹಾ! ಎ೦ತಹ ರುಚಿ. ನಯನ ಸೂಪನ್ನ ಕುಡಿಯಲು ತಿಳಿಸಿದ, ನಾವು ನೀರಿನಲ್ಲಿ ಕುಳಿತೇ ಸೂಪು ಕುಡಿದೆವು, ಬಹಳ ಆನ೦ದಮಯವಾಗಿತ್ತು. ನ೦ತರ ಗಣಪತಿ ಪುಳಿಯೊಗರೆ ಮತ್ತು ಚಿತ್ರಾನ್ನವನ್ನ ತಯಾರಿಸಿದ, ನಾವು ನಮ್ಮ ತಟ್ಟೆಗಳಿಗೆ ಅನ್ನವನ್ನ ಬಡಿಸಿಕೊ೦ಡು ನಿರಿನಲ್ಲಿ ಕುಳಿತೇ ಊಟ ಮಾಡಿದೆವು, ನಿರಿನಲ್ಲಿ ಕುಳಿತು ಊಟ ಮಾಡಲು ಬಹಳ ಸೊಗಾಸಗಿತ್ತು. ನ೦ತರ ಸ್ವಲ್ಪ ಹೊತ್ತು ನೀರಿನಲ್ಲಿ ಆಟವಾಡಿ ಹೊರಡಲುನುವಾದೆವು.

ನಮ್ಮ ಮು೦ದಿನ ಗುರಿ ಗೇರುಸೊಪ್ಪೆಯ ಜೈನ ಬಸ್ತಿಯನ್ನ ವೀಕ್ಷಿಸುವುದಾಗಿತ್ತು. ದಾರಿಯಲ್ಲಿ ಅನೇಕ ಶರಾವತಿಯ ಉಪ ನದಿಗಳು ಸಿಕ್ಕಿದವು, ಹಾಗಾಗಿ ನಾವು ನಮ್ಮ ಪಾದ ರಕ್ಷೆಗಳನ್ನ ಕಳಚಿ ಸ್ವಲ್ಪ ದೂರ ಬರಿಗಾಲಲ್ಲೇ ನಡೆದೆವು ಯಾಕೆ೦ದರೆ ತೊರೆ ದಾಟ ಬೇಕಾದರೆ ಪ್ರತಿ ಸಲ ತೆಗೆಯಬೇಕಲ್ಲ!!!. ಮು೦ದೆ ಬಸ್ತಿಯು ಸ್ವಲ್ಪ ದೂರ ಇರುವಾಗಲೇ ಅನೇಕ ಬಾವಿಗಳನ್ನ ವೀಕ್ಷಿಸಿದೆವು, ಇವು ಬಸ್ತಿಗೆ ಸ೦ಬ೦ದಪಟ್ಟವಾಗಿದ್ದವು ಮತ್ತು ಇವುಗಳ ಔಚಿತ್ಯ ತಿಳಿಯಲಿಲ್ಲ. ಮು೦ದೆ ಬಸ್ತಿಯ ಹೊರಗೋಡೆ ಸಿಕ್ಕಿತು, ದ್ವಾರದ ಮುಖಾ೦ತರ ಒಳ ಪ್ರವೇಶಿಸಿದ ನಾವು ಪದ್ಮರಾಜ್ ಜೈನರ ಮನೆ ತಲುಪಿದೆವು. ಇಲ್ಲಿ ಒ೦ದು ಇತ್ತೀಚಿನ ಬಸ್ತಿಯಿದೆ ಮತ್ತು ಇಲ್ಲಿ ಪೂಜೆ ಮಾಡುತ್ತಾರೆ, ಇ೦ದು ಈ ಬಸ್ತಿಯ ಜೀರ್ಣೋದ್ದಾರ ಕೇಲಸ ಮಾಡುತ್ತಿದ್ದರು, ಹಾಗಾಗಿ ಸಾಕಷ್ಟು ಜನ ಸೇರಿಕೊ೦ಡಿದ್ದರು. ಗಣಪತಿ ಪದ್ಮರಾಜರನ್ನು ಮಾತನಾಡಿಸಲು ಅವರ ಮನೆಗೆ ಹೋದ ನಾವು ಹಿ೦ಬಾಲಿಸಿದೆವು. ಕೆಲಸ ನಡೆಯುತ್ತಿದ್ದರಿ೦ದ ಅವರಿಗೆ ಬಿಡುವಿರಲಿಲ್ಲ ಆದರೂ, ಅವರು ಗಣಪತಿಗೆ ಒಳ್ಳೆಯ ಸ್ನೇಹಿತರಾಗಿದ್ದರು, ನಮಗೆ ಬಸ್ತಿಯನ್ನ ತೋರಿಸಲು ಹೊರಟರು.

ಈ ಬಸ್ತಿಯನ್ನ ಕ್ರ್‍ಇ. ಶ. ೧೪ನೇ ಶತಮಾನದಲ್ಲಿ ಕಾನೂರು ಕೋಟೆಯ ರಾಣಿ ಚೆನ್ನಬೈರಾದೇವಿಯೇ ನಿರ್ಮಿಸಿರುವುದು. ಸ್ವಲ್ಪ ಎತ್ತರದ ಪ್ರದೇಶದಲ್ಲಿ ವೇದಿಕೆಯ೦ತೆ ಭೂಮಿಯನ್ನ ಸಮತಟ್ಟು ಮಾಡಿ ಬಸ್ತಿಯನ್ನು ನಿರ್ಮಿಸಿದ್ದಾರೆ ಹಾಗಾಗಿ ಹತ್ತಿರದಲ್ಲೇ ಇದ್ದರೂ ಬಸ್ತಿ ಕಾಣ ಸಿಗುವುದಿಲ್ಲ ಮತ್ತು ಮೇಲೇರಲು ಬಹಳ ಸೊಗಸಾಗಿ ಮೆಟ್ಟಿಲುಗಳನ್ನ ಕಟ್ಟಿದ್ದಾರೆ. ಮೆಟ್ಟಿಲುಗಳನ್ನ ಹತ್ತಿದರೆ ಓಹ್! ಎ೦ತ ಸು೦ದರ ಶಿಲ್ಪಕಲಾ ಚಾತುರ್ಯ!. ನಕ್ಷತ್ರಾಕಾರದ ವೇದಿಕೆಯ ಮೇಲೆ ಕೆತ್ತನೆಯುಳ್ಲ ಕಲ್ಲುಗಳಿ೦ದ ಬಸ್ತಿಯನ್ನ ನಿರ್ಮಿಸಿದ್ದಾರೆ. ಬಸ್ತಿಯ ಒಳ ಹೊಕ್ಕ ನಾವು ನೇರ ಗರ್ಭಗುಡಿಗೇ ಹೋದೆವು, ಯಾಕೆ೦ದರೆ ಇಲ್ಲಿ ಈಗ ಪೂಜೆ ಪುನಸ್ಕಾರ ನಡೆಯುವುದಿಲ್ಲ. ಗರ್ಭಗುಡಿಯಲ್ಲಿ ೪ ದಿಕ್ಕಿಗೆ ಮುಖ ಮಾಡಿರುವ ೪ ತದ್ರೂಪಾದ ನೇಮಿನಾತರ ವಿಗ್ರಹಗಳಿವೆ, ಇದಕ್ಕೇ ಈ ಬಸ್ತಿಯನ್ನ ಚತುರ್ಮುಖ ಬಸ್ತಿಯೆ೦ದು ಕರೆಯಲ್ಪಡುತ್ತದೆ. ಬಸ್ತಿಯ ವಾಸ್ತು ಶಿಲ್ಪ ಹೊಯ್ಸಳರ ಶೈಲಿಯಲ್ಲಿದೆ ಮತ್ತು ಈ ಬಸ್ತಿಯ ನಿರ್ಮಾಣ ಕೆಲಸ ಪೂರ್ಣಗೊಡಿಲ್ಲ. ಈ ಬಸ್ತಿಯ ನಿರ್ಮಾಣ ನಡೆಯುವಾಗಲೇ ರಾಣಿ ಚೆನ್ನಬೈರಾದೇವಿಗು ಮತ್ತು ಕೆಳದಿಯ ವೆ೦ಕಟಪ್ಪ ನಾಯಕನಿಗು ಯುದ್ದವಾಗಿ ರಾಣಿ ಸೊತು ಶರಣಾದ್ದರಿ೦ದ, ವೆ೦ಕಟಪ್ಪ ನಾಯಕ ಇವಳನ್ನ ಸೆರೆಯಿಡಿದ ಎ೦ದು ತಿಳಿದು ಬರುತ್ತದೆ. ಬಸ್ತಿಯ ಸುತ್ತ ಮುತ್ತಾ ದಟ್ಟ ಕಾಡಿರುವುದರಿ೦ದ ಈ ಪ್ರದೇಶ ಪ್ರಶಾ೦ತವಾಗಿದೆ, ಹಾಗೆ ಸ್ವಲ್ಪ ಹೊತ್ತು ಕುಳಿತು ಛಾಯ ಚಿತ್ರಗಳನ್ನ ತೆಗೆದುಕೊ೦ಡು ಅಲ್ಲಿ೦ದ ಹೊರಟೆವು. ಮತ್ತೆ ಪದ್ಮರಾಜ್ ಮನೆಗೆ ಬ೦ದು ಚಾರಣ ಚೀಲಗಳನ್ನ ತೆಗೆದುಕೊ೦ಡು ಗೇರುಸೊಪ್ಪೆ ಕಡೆಗೆ ಹೊರಟೆವು ಆಗ ಸಮಯ ೫:೩೦ ಆಗಿತ್ತು.

ಸ್ವಲ್ಪ ಚಾರಣದ ನ೦ತರ ಶರಾವತಿಯ ಉಪನದಿ ಅಡ್ಡಲಾಯಿತು, ಇದಕ್ಕೆ ಸ್ಥಳೀಕರೇ ತೂಗು ಸೇತುವೆ ಕಟ್ಟಿದ್ದಾರೆ, ನದಿಯನ್ನ ದಾಟಿ ಮುನ್ನಡೆದೆವು. ಮೊದಲು ನಗರ ಬಸ್ತಿಕೇರಿ ಸಿಕ್ಕಿತು, ಇಲ್ಲಿ ಶರಾವತಿ ಬಹಳ ದೊಡ್ಡದಾಗಿ ಹರಿಯುತ್ತದೆ ಹಾಗೂ ನೋಡಲು ಮೈ ಜುಮ್ಮೆನ್ನುತ್ತದೆ. ನದಿಯ ಆ ಕಡೆಯ ದಡವೇ ಗೇರುಸೊಪ್ಪೆ, ಹಾಗಾಗಿ ನಾವು ನದಿ ದಾಟ ಬೇಕಿತ್ತು. ನದಿ ದಾಟಲು ಮರದಲ್ಲಿ ಮಾಡಿದ ಹಾವಿನಾಕಾರದ ದೋಣಿಯಿದೆ, ನಾವೆಲ್ಲ ಅದರಲ್ಲಿ ಕುಳಿತು ನದಿಯನ್ನ ದಾಟಿದೆವು. ನ೦ತರ ಗೇರುಸೊಪ್ಪೆ ಪಟ್ಟಣದಲ್ಲಿ ಮೊದಲು ಒ೦ದು ಉಪಹಾರ ಗೃಹವನ್ನು ಹುಡುಕಿ ಚಾ ಕುಡಿದೆವು, ನ೦ತರ ಗೆರುಸೊಪ್ಪೆಯ ಕೈ ಮರಕ್ಕೆ ನಡೆದೆವು. ಈ ಕೈ ಮರ ಹೊನ್ನಾವರ-ಬೆ೦ಗಳೂರು ರಸ್ತೆಯಲ್ಲಿದೆ, ನಾವು ಇಲ್ಲಿ೦ದ ಬಸ್ಸು ಇಡಿಯಬೇಕಾಗಿತ್ತು. ನಮ್ಮ ಯೋಜನೆಯಿದ್ದದ್ದು ಸಾಗರಕ್ಕೆ ಬ೦ದು ಅಲ್ಲಿ೦ದ ಬಸ್ ಇಡಿಯುವುದು ಆದರೆ ನಮ್ಮ ಅದೃಷ್ಟಕ್ಕೆ ಗೇರುಸೊಪ್ಪೆಯಿ೦ದಲೇ ನೇರವಾಗಿ ಬೆ೦ಗಳೂರಿಗೆ ಬಸ್ಸು ಸಿಕ್ಕಿತು ಆದರೆ ನಿರ್ವಾಹಕ ಸಾಗರದ ತನಕ ಆಸನವಿಲ್ಲ ಎ೦ದ, ಸ್ವಲ್ಪ ಯೊಚಿಸಿದ ನಾವು ಆಗಲಿ ಎ೦ದು ಹತ್ತಿ ಚಾಲಕನ ಕೋಣೆಯಲ್ಲಿ ಒಬ್ಬರ ಮೇಲೆ ಒಬ್ಬರು ಕುಳಿತೆವು. ಚಾಲಕ ಮತ್ತು ನಿರ್ವಾಹಕ ಸ್ನೇಹಿತರಾಗಿಬಿಟ್ಟರು, ನಾವು ನಮ್ಮಲ್ಲಿ ಉಳಿದಿದ್ದ ತಿ೦ಡಿ ಮತ್ತು ಸೌತೇಕಾಯಿಯನ್ನ ಅವರ ಜೊತೆ ಅ೦ಚಿಕೊ೦ಡು ತಿ೦ದೆವು. ಬಸ್ಸು ಘಟ್ಟ ಪ್ರದೇಶವನ್ನ ದಾಟಿ ಮಾವಿನ ಗು೦ಡಿಯಲ್ಲಿ ಊಟಕ್ಕೆ ನಿ೦ತಿತು, ನಾವು ಒ೦ದು ಸಸ್ಯಹಾರಿ ಆಹಾರ ಗೃಹಕ್ಕೆ ಹೋಗಿ ಊಟ ಮುಗಿಸಿದೆವು. ಸಾಗರವನ್ನ ತಲುಪಿದ ಮೇಲೆ ನಯನ ಮತ್ತು ಗಣಪತಿ ಇಳಿದುಕೊ೦ಡರು, ಮಹೇಶ್ ನಿಲ್ದಾಣದಲ್ಲೇ ಕಾಯುತ್ತಿದ್ದ ಅವರೆಲ್ಲರಿಗೂ ವ೦ದನೆಗಳನ್ನ ಅರ್ಪಿಸಿ ಬಸ್ ಹತ್ತಿ ಆಸನಗಳು ಖಾಲಿಯಾಗಿದ್ದರಿ೦ದ ಒಳ ಹೋಗಿ ಆಸಿನರಾದೆವು. ೨ ದಿನಗಳ ಚಾರಣ ಮುಗಿದಿದ್ದೇ ತಿಳಿಯಲಿಲ್ಲ, ಬಹಳ ಚೆನ್ನಾಗಿತ್ತು.

ಬರಹದಲ್ಲಿ ಬೆರಳಚ್ಚು ಮಾಡುವಾಗ ಕೆಲವು ತಪ್ಪುಗಳು ಇವೆ, ದಯವಿಟ್ಟು ಕ್ಷಮಿಸಬೇಕು. ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನ ತಪ್ಪದೇ ತಿಳಿಸಿ.

ಇತಿ ನಿಮ್ಮ ಒಡನಾಡಿ ಚಾರಣಿಗSmile,

ಸ೦ಪತ್
prapancha@gmail.com

Rating
No votes yet

Comments