ಸಂಪದದಲ್ಲಿ ಬರುವ ಬ್ಲಾಗ್ ಗಳ ಗುಣಮಟ್ಟ.....

ಸಂಪದದಲ್ಲಿ ಬರುವ ಬ್ಲಾಗ್ ಗಳ ಗುಣಮಟ್ಟ.....

Comments

ಬರಹ

ನೋಡಿ ಮೊದಲೇ ಹೇಳಿ ಬಿಡುವೆ ಯಾರೂ ಇದನ್ನು ವೈಯುಕ್ತಿಕವಾಗಿ ನೋಡಬೇಡಿ...
ಬಂದು ಮೂರು ತಿಂಗಳಾಗಿಲ್ಲ ಆಗಲೇ ಕಿತಾಪತಿ ಶುರುಆಯಿತು ಅಂತ ಅಂದುಕೊಂಡ್ರೆ ಅದು ನಿಮ್ಮ ಕರ್ಮ.
ಈ ಮೂರು ತಿಂಗಳಲ್ಲಿ ನಾ ಕಂಡ ಕೆಲವು ವಿಚಾರಗಳು ಹೀಗಿವೆ

೧) ಪ್ರತಿಕ್ರಿಯೆ ಕೆಲವೊಮ್ಮೆ ಆರೋಗ್ಯಕರ ಆಗಿರುತ್ತದೆ ಮತ್ತೆ ಕೆಲವೊಮ್ಮೆ ಹುಚ್ಚುತನದಿಂದ ಕೂಡಿರುತ್ತದೆ.

೨) ಬ್ಲಾಗ್ ಬರಹಗಳ ಗುಣಮಟ್ಟ ಸ್ವಲ್ಪ ಕಳಪೆ ಯಾಗಿರುತ್ತದೆ.. ಆಮೇಲೆ ಯಾವುದು ಬ್ಲಾಗ್ ಆಗಿ ಸೇರಿಸಬೇಕು
ಇದರ ಬಗ್ಗೆ ಬರೆದವರು ಮಾತ್ರ ನಿರ್ಧಾರ ತಗೋಬಹುದು ಖರೆ, ಆದರೆ ಅದರ ಜೋಡಿ ಜವಾಬ್ದಾರಿ ಸಹ ಅದ.
ಈಗ ನೋಡ್ರಿ "ಕಂಡಿದ್ದು ಕೇಳಿದ್ದು" ಅಂತ ಒಬ್ರು ಬರೀತಾರ ಆ ಪೇಪರ್, ಈ ಪೇಪರ್ ನಿಂದ ಸುದ್ದಿ ತಂದು
ಇಲ್ಲಿ ದಾಖಲಿಸುತ್ತಾರೆ ಹಾಗೆಯೇ ಮಗಳು ಹೊಡೆದಿದ್ದು, dance ಮಾಡಿದ್ದು , ಹೆಂಡತಿಯ ಮೇಲೆ ಬರೆದ
ಶಾಯರಿಗಳು ಇವೆಲ್ಲ ಬ್ಲಾಗ್ ಆಗಿ ಬಂದಿವೆ. ಇವೆಲ್ಲ ಬೇಕಾ ?

೩) ವೈಯುಕ್ತಿಕ ವಿಚಾರ ಬಿಟ್ಟರೆ ಸಂಪದಾದ ರೂಪ ಅದೂ ಬ್ಲಾಗ್ ನಲ್ಲಿ ಇನ್ನೂ ಛಲೋ ಆಗ್ತದ.

ನಿನ್ನೆ ಸಂವಾದದಲ್ಲಿ ಈ ಬಗ್ಗೆ ಪ್ರಸ್ತಾಪಿಸಬೇಕೆಂದಿದ್ದೆ ಆದರೆ ಮೊದಲ ಭೇಟಿ ಇರಿಸುಮುರಿಸು ಆಗಬಾರದೆಂದು
ಸುಮ್ಮನಿದ್ದೆ.

ಇದರ ಬಗ್ಗೆ ಒಂದು ಆರೋಗ್ಯಕರ ಚರ್ಚೆ ಆಗಲಿ ಎಂದು ನನ್ನ ಆಶಯ
ಬೇರೆಯಾಗಿ ತೆಗೆದುಕೊಂಡರೆ ನನ್ನ ಕರ್ಮ ಎಂದುಕೊಂಡು ಸುಮ್ಮನಾಗುವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet