ಚಿತ್ರ ಸಂತೆ
http://sampada.net/image/15989,
http://sampada.net/image/15988,
http://sampada.net/image/15987,
http://sampada.net/image/15986,
http://sampada.net/image/15985, ,
http://sampada.net/image/15983,
http://sampada.net/image/15982,
http://sampada.net/image/15981,
ಸಂಪದಿಗರ ಸ್ನೇಹ ಸಮ್ಮಿಲನಕ್ಕೆ ಬರಲಾಗದ ವ್ಯಥೆಯೊಂದಿಗೆ ..
ಈ ಭಾನುವಾರ ಮತ್ತೊಮ್ಮೆ ಸೇರುವ ಆಸೆಯೊಂದಿಗೆ ಸಂಪದಿಗರಿಗೆ ಹಾಗು
ಕಲಾ ಪ್ರೇಮಿಗಳಿಗೆ, ಕಲಾಸಕ್ತರಿಗೆ, ಕಲಾ ವಿರೋದಿಗಳಿಗೆ ;-)
ಎಲ್ಲರಿಗೂ ಚಿತ್ರಕಲಾ ಪರಿಷತ್ ರವರಿಂದ ಮತ್ತು ನನ್ನಿಂದ ಚಿತ್ರ ಸಂತೆಗೆ ಈ ಆಹ್ವಾನ..
ಮತ್ತೊಮ್ಮೆ ಚಿತ್ರ ಸಂತೆ ಬಂದಿದೆ..
ಇದೇ ಭಾನುವಾರ ಅಂದ್ರೆ ೨೫-೦೧-೨೦೦೯ ರಂದು..
ಪ್ರತಿ ವರ್ಷದ ಕೊನೆಯ ಭಾನುವಾರದಂದು ನಡೆಯುತ್ತಿದ್ದ ಈ ಚಿತ್ರ ಸಂತೆಯು ಈ ಬಾರಿ ಸ್ವಲ್ಪ ತಡವಾಗಿ ಜನವರಿ ತಿಂಗಳಲ್ಲಿ ನಡೆಯುತ್ತಿದೆ....
ಇದೂ ಒಂದು ರೀತಿಯಲ್ಲಿ ತರಕಾರಿ ಸಂತೆ ಇದ್ದಂಗೆ..
ಇಲ್ಲಿ ನಿಮ್ಮ ರುಚಿಗೆ ತಕ್ಕಂತೆ, ಅಬಿರುಚಿಗೆ ತಕ್ಕಂತೆ , ಹಣಕ್ಕೆ ತಕ್ಕಂತೆ.. ಇಲ್ಲಿ ಎಲ್ಲಾ ರೀತಿಯ ಕಲಾಕ್ರುತಿಗಳೂ ಸಿಗುತ್ತೆ..
ದೇಶದ ಎಲ್ಲಾ ಕಡೆ ಇಂದಲೂ ಸಾವಿರಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ಬಾಗವಹಿಸುತ್ತಿದ್ದಾರೆ...
ಇದು ನನಗೆ ಹಾಗು ನನ್ನಂತ ಕಲಾವಿದ್ಯಾರ್ಥಿಗಳಿಗೆ, ಕಲಾವಿದರಿಗೆ ವಾರ್ಷಿಕ ಹಬ್ಬ...
ಕಾರಣ ಇಲ್ಲಿ ಒಂದೇ ಕಡೆ ಎಲ್ಲಾ ರೀತಿಯ ಕಲಾಕ್ರುತಿಗಳನ್ನು ನೋಡಬಹುದು ಎನ್ನುವುದು ಒಂದು ಕಾರಣವಾದರೆ ಮತ್ತೊಂದು ನನಗೆ ನನ್ನ ಈ ಎಂಟು ವರ್ಷಗಳಿಂದ ಸಿಕ್ಕಿರೊ ಎಲ್ಲಾ ಸ್ನೇಹಿತರನ್ನು ಭೇಟಿ ಮಾಡುವುದಕ್ಕೆ ಒಂದು ವೇದಿಕೆ..
ಈ ವರ್ಷದ ಮತ್ತೊಂದು ಆಕರ್ಷಣೆ ಏನೆಂದರೆ..ಭಾರತದ ಕಲಾ ಮಾದ್ಯಮದಲ್ಲಿ ಇತ್ತೀಚೆಗೆ ಹೆಚ್ಚು ಮಹತ್ವ ಪಡೆದಿರುವ ಮತ್ತೊಂದು ಕಲಾ ಮಾದ್ಯಮವಾದ ’ವಿಡಿಯೋ ಕಲೆ’ಯ ಕಲಾ ಪ್ರದರ್ಶನ ಮಾಡುತ್ತಿರುವುದು ಈ ಬಾರಿಯ ಚಿತ್ರ ಸಂತೆಯ ಪ್ರಮುಖ ಆಕರ್ಷಣೆ... ಭಾರತೀಯ ಕಲಾ ಪ್ರೆಕ್ಷಕರಿಗೆ ಅಷ್ಟು ಪರಿಚಿತವಲ್ಲದ ಈ ಕಲೆಯನ್ನು ೧೧ಜನ ಭಾರತೀಯ ಕಲಾವಿದರು ಪ್ರದರ್ಶಿಸುತ್ತಿದ್ದಾರೆ...
ಇಂತಹ ವರ್ಣರಂಜಿತ ದಿನದಲ್ಲಿ ತಮ್ಮ ನಿರೀಕ್ಷೆಯಲ್ಲಿ
ನಿಮ್ಮವ
ಮಂಜುನಾಥ್
Comments
ಉ: ಚಿತ್ರ ಸಂತೆ