ಲಿನಕ್ಸಾಯಣ - ೩೭ - GRUB ಅಪ್ಚನ್ ಬದಲಿಸೋದು ಹ್ಯಾಗೆ?

ಲಿನಕ್ಸಾಯಣ - ೩೭ - GRUB ಅಪ್ಚನ್ ಬದಲಿಸೋದು ಹ್ಯಾಗೆ?

ಗ್ನು/ಲಿನಕ್ಸ್ ಇನ್ಸ್ಟಾಲ್ ಮಾಡಿದ ನಂತರ  ಲಿನಕ್ಸ್ ಬೂಟ್ ಲೋಡರ್ GRUB ನಲ್ಲಿ ಡೀಫಾಲ್ಟ್ (Default) ಆಯ್ಕೆಯಾಗಿ ಬಿಡತ್ತೆ. ಇದನ್ನ ಬದಲಿಸೋದ್ಯಾಗೆ ಅಂತ ಸಂಪದ ಸಂವಾದಲ್ಲಿ ನನ್ನ ಮುಂದಿಟ್ಟ ಪ್ರಶ್ನೆಗೆ ಹ್ಯಾಗೆ ಉತ್ತರಿಸೋದು ಅಂತ ಯೋಚಿಸ್ತಿದ್ದೆ. ಯಾಕಂದ್ರೆ ಇದಕ್ಕೆ GRUB ನ ಕಾನ್ಪಿಗರೇಷನ್ ಫೈಲ್ ಎಡಿಟ್ ಮಾಡಬೇಕು. ಒಂದು ಸಣ್ಣ ತಪ್ಪಾದರೂ ಕಂಪ್ಯೂಟರ್ ತಕ್ಷಣಕ್ಕೆ ಕೆಲಸ ಮಾಡದೇ ಹೋಗ ಬಹುದು. 

 ಆಗ ನನ್ನ ತಲೆಗೆ ಹೊಳೆದ ಉತ್ತರ, ಬಳಕೆದಾರನಿಗೆ ಮೌಸ್ ಉಪಯೋಗಿಸಿ GUI (ಗ್ರಾಫಿಕಲ್ ಯೂಸರ್ ಇಂಟರ್ಪೇಸ್)  ನಲ್ಲೇ GRUB ಆಫ್ಛನ್ ಬದಲಿಸಬಹುದಾದ ಸಣ್ಣದೊಂದು ತಂತ್ರಾಂಶ. ಅದೇ “grub-choose-default“.

ಇದನ್ನು ನೀವು Synaptic Package Manager ಬಳಸಿ ಅಥವಾ ಕೆಳಗೆ ಕೊಟ್ಟಿರುವ ಕಮ್ಯಾಂಡ್ ಅನ್ನು ಟರ್ಮಿನಲ್ ನಲ್ಲಿ  ಬಳಸಿ ನೀವಿದನ್ನ ಇನ್ಸ್ಟಾಲ್ ಮಾಡಿಕೊಳ್ಳಬಹುದು. 

 sudo aptitude install grub-choose-default

ಇನ್ಸ್ಟಾಲೇಷನ್ ಮುಗಿದ ನಂತರ Applications-> System Tools -> "Choose Next Default for Grub"  ಮೆನುವಿನಿಂದ ನೀವು ತಂತ್ರಾಂಶವನ್ನ ತೆರೆಯ ಮೇಲೆ ತರಬಹುದಾಗಿದೆ.

ಕೆಳಗಿನ ಕಮ್ಯಾಂಡ್ ಕೂಡ ಅದೇ ಕೆಲಸ ಮಾಡುತ್ತೆ. (Alt+F2 ಪ್ರೆಸ್ ಮಾಡಿ ರನ್ ಪ್ರಾಂಟ್ ಬಂದಾಗ ಅಲ್ಲಿ ಕೆಳಗಿನ ಕಮ್ಯಾಂಡ್ ಬಳಸಿ ಇಲ್ಲ ಟರ್ಮಿನಲ್ ನಲ್ಲಿ ಇದನ್ನು ಬಳಸಬಹುದು)

sudo grub-choose-default

ತಂತ್ರಾಂಶ ನನ್ನ ಕಂಪ್ಯೂಟರಿನಲ್ಲಿ ಕಂಡಂತೆ:

 grub-choose-default

 

ಇಲ್ಲಿ ನಾನು ಉಬುಂಟುವನ್ನು ನನ್ನ ಡೀಫಾಲ್ಟ್ ಆಯ್ಕೆ ಮಾಡಿಕೊಂಡಿದ್ದೇನೆ. ನಿಮಗೆ ವಿಂಡೋಸ್ ಬೇಕಿದ್ದರೆ ನೀವು ಅದನ್ನ ಕ್ಲಿಕ್ ಮಾಡಿದರಾಯಿತು. 

Rating
No votes yet

Comments