ಗ್ರಹಣ ಹಿಡಿದಿದೆ ಎನ್ನ ....flexible ಭಜನೆ!

ಗ್ರಹಣ ಹಿಡಿದಿದೆ ಎನ್ನ ....flexible ಭಜನೆ!

ಗ್ರಹಣ ಹಿಡಿದಿದೆ ಎನ್ನ | ಮನಕೆ |
ಗ್ರಹಣ ಹಿಡಿದಿದೆ || ಪ||

ಶಾಲೆಕಾಲೇಜೆಂಬ ಗ್ರಹಣ , ನೌ-
ಕರಿಚಾಕರಿಯ ಗ್ರಹಣ
ಗಳಿಕೆಉಳಿಕೆಯ ಗ್ರಹಣ ||೧||

ಪ್ರೀತಿಪ್ರೇಮವೆಂಬೊ ಗ್ರಹಣ ,ಮ-
ಡದಿಮಕ್ಕಳೆಂಬೊ ಗ್ರಹಣ
ಬಂಧುಬಳಗವೆಂಬೊ ಗ್ರಹಣ ||೨||

ಟೀವಿಕಂಪ್ಯೂಟರ್ರೆಂಬೋ ಗ್ರಹಣ ,ಮೊ-
ಬೈಲು ಇಂಟರ್ನೆಟ್ಟ ಗ್ರಹಣ
ಸಿನಿಮಾ ಸಂಗೀತೆಂಬೋ ಗ್ರಹಣ ||೩||

ನಾನೆ ಜಾಣನೆಂಬ ಗ್ರಹಣ, ಅವ-
ರಿವರ ಹಿಂದಿಕ್ಕುವೆನೆಂಬ ಗ್ರಹಣ
ದೇವ ದಿಂಡಿರೆಂಬ ಗ್ರಹಣ ||೪||

****ಅಡಿಟಿಪ್ಪಣಿ -
***೧) ಇದರ ಪಲ್ಲವಿಯ ಇನ್ನೊಂದು ಪಾಠವೂ ಇದ್ದು .... ಅದು ಹೀಗಿದೆ

ಗ್ರಹಣ ಬಿಟ್ಟಿತು | ಎನ್ನ ಮನಕೆ |
ಹಿಡಿದ ಗ್ರಹಣ ಬಿಟ್ಟಿತು ||

ಹೀಗಾಗಿ ನಿಮಗೆ ಬೇಕಾದ ಪಲ್ಲವಿಯನ್ನು ಹಾಡಿಕೊಳ್ಳುವುದು !

****೨) ಕೃತಿಕಾರರ ಅಂಕಿತ ಭಾಗವು ಬಿಟ್ಟು ಹೋಗಿದ್ದು , ನಿಮಗೆ ಬೇಕಾದಂತೆ ನಿಮ್ಮ ಇಷ್ಟದೈವವನ್ನೋ , ನಿಮ್ಮ ಹೆಸರನ್ನೋ ಸೇರಿಸಿಕೊಂಡು ಇನ್ನೆರಡು ಸಾಲನ್ನು ಹೊಸೆದುಕೊಂಡು ಹಾಡಿಕೊಳ್ಳುವುದು !!

Rating
No votes yet

Comments