ಪುರಂದರ ದಾಸರ ಆರಾಧನೆ - ೨೦೦೯

ಪುರಂದರ ದಾಸರ ಆರಾಧನೆ - ೨೦೦೯

ಪುಷ್ಯ ಬಹುಳ ಅಮಾವಾಸ್ಯೆ. ಜನವರಿ ೨೫, ೨೦೦೯ ಪುರಂದರದಾಸರ ಆರಾಧನೆಯ ದಿನ.

ಕಳೆದ ಆರು ತಿಂಗಳಲ್ಲಿ ಮೊದಲ್ಗೊಂಡ ಹರಿದಾಸ.ಇನ್ ನಲ್ಲಿ ಈಗ ಸುಮಾರು ೨೬೦ ಕ್ಕೂ
ಹೆಚ್ಚಿನ ದೇವರನಾಮಗಳಿವೆ ಎನ್ನುವುದನ್ನು ನೋಡಿದರೆ, ಬಹಳ ಸಂತೋಷವಾಗುತ್ತೆ. ಪುರಂದರರ
ಲಭ್ಯವಿರುವ ರಚನೆಗಳು ೧೫೦೦ಕ್ಕಿಂತ ಹೆಚ್ಚಿಲ್ಲ ಅನ್ನುವುದನ್ನು ನೆನೆದಾಗ, ಈ ಬೆಳವಣಿಗೆ
ದೊಡ್ಡದೇ.

ಶ್ರೀಕಾಂತ ಮಿಶ್ರಿಕೋಟಿಯವರ ಜೊತೆ ಒಮ್ಮೆ ಮಾತಾಡುತ್ತಿದ್ದಾಗ ಈ ವರ್ಷದ ಆರಾಧನೆಯಯ
ಒಳಗೆ ೧೦೦ ರಚನೆಗಳನ್ನಾದರೂ ಹಾಕುವ ಉದ್ದೇಶವಿದೆ ಎಂದಿದ್ದರು - ಅದಕ್ಕೂ ಹೆಚ್ಚಿನ
ರಚನೆಗಳನ್ನು ಕಳೆದ ತಿಂಗಳಲ್ಲಿ ಸೇರಿಸಿದ್ದಾರೆ. ಹಾಗೇ ಇನ್ನೂ ಹಲವು ಆಸಕ್ತರು ಕೂಡ ಈ
ಪ್ರಯತ್ನದಲ್ಲಿ ಕೈಜೋಡಿಸಿದ್ದಾರೆ.

ಎಲ್ಲರಿಗೂ, ನನ್ನ ಧನ್ಯವಾದಗಳು! ಹೀಗೇ ಮುಂದಿನ ವರ್ಷದೊಳಗೆ ಪುರಂದರದಾಸರ ಉಳಿದ ಎಲ್ಲ ರಚನೆಗಳನ್ನೂ,
ಇತರ ದಾಸರ ರಚನೆಗಳನ್ನೂ ಹಾಕಲು ಇನ್ನೂ ಹೆಚ್ಚಿನ ಆಸಕ್ತರು ಮುಂದೆ ಬರುತ್ತಾರೆಂಬ ಆಸೆ,
ಬರುವರೆಂಬ ನಂಬಿಕೆ ನನ್ನದು.

-ಹಂಸಾನಂದಿ

Rating
No votes yet

Comments