ಅಪರಾಧ ಪ್ರಜ್ಞೆ

ಅಪರಾಧ ಪ್ರಜ್ಞೆ

ಅಂದ್ರೆ ಗಿಲ್ಟಿ ಫೀಲಿಂಗು. ( ನಿನ್ನೆ ಮಯೂರದೊಳಗೊಂದು ಕಾರ್ಟೂನ್ ನೋಡ್ದೆ- ಇನ್ ಮ್ಯಾಲ ಭಿಕ್ಷಾ ಬೇಡಾವರು 'ಅಮ್ಮ-ಅಪ್ಪಾ ' ಎಂದು ಬೇಡೋ ಬದ್ಲು 'ಮಮ್ಮೀ - ಡ್ಯಾಡೀ) ಅಂತ ಬೇಡಾವರು - ಯಾಕಂದರ ಸಾಲೀಯೊಳಗ ಒನ್ನೇತ್ತಾದಿಂದs ಇಂಗ್ಲೀಷ್ ಸುರೂ ಮಾಡಾವ್ರಿದ್ದಾರ!)

ಇದೂ ಎಲ್ಲೋ ಓದಿದ್ದS , ಅಲ್ಲಿಲ್ಲೆ ಓದಿದ್ದು ನಿಮಗ ಹೇಳಿದರ ಬ್ಯಾಸರಿಲ್ಲ ಹೌದಲ್ಲೋ?)

ಒಬ್ಬಾಂವ ಹಸಿದುಕೊಂಡು ಇರ್ತಾನ , ಕೈಯಾಗ ರೊಕ್ಕಿಲ್ಲ - ಏನರ ತಗೊಂಡು ತಿನ್ನೋಣಂದ್ರ . ಹೀಂಗ ಒಂದು ಹೊಟೇಲ್ ಮುಂದ ನಿಂತಿರ್ಬೇಕಾದ್ರ , ಅಲ್ಲಿ ಒಂದು ನಾಯಿ ಅವನ ಬಾಜುಕ ಬಂದು ನಿಂದರ್ತದ. ಆವಾಗ ಒಬ್ಬಾಕಿ ಬಂದು ' ಈ ನಾಯಿ ನಿಮ್ಮದೇನ್ರೀ , ಮಿಸ್ಟರ್? ಇದು ನನಗ ಬೇಕು ' ಅಂತ ಮಾತಾಡ್ಲಿಕ್ಕೂ ಬಿಡ್ದs ಅವನ್ ಕೈಯಾಗ ನೂರು ಡಾಲರ್ ತುರುಕಿ ನಾಯೀ ತಗೊಂಡು ಹೋಗ್ಬಿಡ್ತಾಳ .

ಇಂವಗ ಯಾಕೋ ಬರೊಬ್ಬರ ಅನುಸೂದಿಲ್ಲ , ಯಾರ್ದೋ ನಾಯೀ ಯಾರ್ಗೋ ಮಾರಾಟ ಮಾಡ್ದಂಗಾಯ್ತಲ್ಲ - ಇದು ತಪ್ಪಲ್ಲೇನು? - ಆದರs ಹಸಿವಿ ಆಗೇದ , ಕೈಯಾಗ ರೊಕ್ಕ ಸಿಕ್ಕsದ' ಅಂತ ವಿಚಾರಾ ಮಾಡ್ತಿರಬೇಕಾದ್ರ ಇನ್ನೊಬ್ಬಾಕಿ ಅಲ್ಲಿ ಓಡಿ ಬಂದು ' ರೀ ಮಿಸ್ಟರ್ , ನನ್ನ ನಾಯೀ ಏನಾರ ನೋಡೀರೇನು , ಇದೇ ಈಗ ತಪ್ಪಿಸ್ಕೊಂಡದ' ಅಂತಾಳ . ತಕ್ಷಣ ಇಂವ ' ಇಲ್ಲೇ ಇರ್ರಿ , ಈಗ ಬಂದ್ಬಿಡ್ತೀನಿ' ಅಂತ ಹೇಳಿ , ಮೊದಲ್ನೇದಾಕಿ ಹೋದ ದಿಕ್ನಾಗ ಓಡಿ ಹೋಗಿ , ಅಕಿನ್ನ ತಡದು , ' ಸಾರಿ , ನನ್ನ ನಾಯಿ ಬಿಟ್ಟು ನನಗ ಇರ್ಲಿಕ್ಕೆ ಆಗೂದಿಲ್ಲ. ನಿಮ್ಮ ರೊಕ್ಕಾ ನೀವು ವಾಪಸ್ ತಗೋಡ್ರಿ' ಅಂತ ಹೇಳಿ ಅಕೀ ರೊಕ್ಕಾ ಅಕೀಗೆ ಕೊಟ್ಟು , ನಾಯಿ ತಗೊಂಡು ವಾಪಸ್ ಬಂದು , ಅದರ ಮಾಲೀಕಳಿಗೆ ಒಪ್ಪಿಸ್ತಾನ . ಅಕೀಗೆ ಭಯಂಕರ ಖುಶೀ ಆಗಿ , ಅಂವಗ ನೂರು ಡಾಲರ್ ನೋಟು ಭಕ್ಷೀಸು ಕೊಟ್ಟು ತನ್ನ ಹಾದೀ ಹಿಡೀತಾಳ .

ಈಗ
ಅವನ ಕೈಯಾಗ ಅದs ನೂರು ಡಾಲರ್ ಅದ . ಆದ್ರ ಆವಾಗಿನ ಗಿಲ್ಟೀ ಫೀಲಿಂಗ್ ಇಲ್ಲ .

ಹೆಂಗದ ಕಥೀ ?

ಈ ಕಥೀ ಫಾರ್ಮ್ಯಾಟು ನಿಮಗ ಸೇರಿತs? ತಿಳಿಸ್ರಿ ಮತ್ತ . ಹೀಂಗ ಆಡುಮಾತಿನ್ಯಾಗ ಬ್ಯಾಡಾ , ಪುಸ್ತಕದ ಭಾಷಾದಾಗs ಇರ್ಲಿ ಅಂತೀರೇನು ಮತ್ತ?

Rating
No votes yet

Comments