ಪ್ರೀತಿ, ಪ್ರೇಮ... ಹೀಗೊಂದು Philosophy

ಪ್ರೀತಿ, ಪ್ರೇಮ... ಹೀಗೊಂದು Philosophy

ಪ್ರೀತಿ, ಪ್ರೇಮ, Philosophy

ನಾವು ಪ್ರೀತಿಸಿ ಮದುವೆಯಾಗಿದ್ದೀವಿ - ಹಾಗಂತ ಹೇಳ್ತಾರೆ ಕೆಲವರು.

ನಾವು ಮದುವೆಯಾಗಿ ಪ್ರೀತಿಸ್ತಾ ಇದ್ದೀವಿ - ಹೀಗಂತಾರೆ ಹಲವರು.

ಎರಡೂ ಬಗೆಯ ಜನರಿಗೂ ಬದುಕಿನಲ್ಲಿ ಅಹಹಹಾ ಎಂಬಂಥ ಖುಷಿ ದೇವರಾಣೆಗೂ ಸಿಕ್ಕುವುದಿಲ್ಲ ಎಂಬುದು ಪರಮ ಸತ್ಯ.

ಅಂದಮೇಲೆ-ಪ್ರೀತಿಸಿ ಮದುವೆಯಾಗಬೇಕಾ? ಅಥವಾ ಮದುವೆಯಾದ ಮೇಲೆಯೇ ಪ್ರೀತಿಸಬೇಕಾ?

ಉತ್ತರಿಸುವುದು ಕಷ್ಟ.

ಮದುವೆಯ ದಿನಗಳವರೆಗೂ ಪ್ರೀತಿಸುವುದೇ ಬೇಡ ಎನ್ನುವುದಾದರೆ ಆ ಕಳ್ಳ ಪ್ರೇಮದ ಪುಳಕವನ್ನು ಕಳೆದುಕೊಳ್ಳಬೇಕಾಗುತ್ತದೆ.

ಇದರರ್ಥ ಇಷ್ಟೇ - ನಾವು, ನೀವೆಲ್ಲ ಪ್ರೇಮಿಸದೇ ಸುಖವಾಗಿರಲಾರೆವು ಮತ್ತು ಪೇಮಿಸಿದರೂ ಸುಖದಿಂದ ಬದುಕಲಾರೆವು!

ನೆನಪಿರಲಿ:

ಪ್ರೀತಿ-ಪ್ರೇಮ ಅನ್ನೋದು ಶುದ್ಧ ಜೂಜು. ಅದನ್ನು ಗೆಲ್ಲುವ ಹಠದಿಂದಲೇ ಆಡಬೇಕು. ಸೋತಷ್ಟೂ ಹಠ ಹೆಚ್ಚಾಗಬೇಕು.

ನಮ್ಮ ಬದುಕೆಂಬುದು ಪ್ರೀತಿಯ ಪರಿಧಿಯೊಳಗೆ ಇರಬೇಕು. ನಾವೆಲ್ಲ ಇದರಲ್ಲೇ ಮುಳುಗಬೇಕು.

ಈಜಿದರೆ ಆ ದಡ. ಈಜದಿದ್ದರೆ ಈ ದಡವೇ ಗತಿ. ಹೀಗಾಗಿ ಈಜಾಡುತ್ತಲೇ ಇರಬೇಕು.

ಅದೇ ಜೀವನ. ಅದೇ ಪ್ರೇಮ.

-----------------------------------------------------------------

ಮರೆತಿದ್ದೆ: ಈ philosophy ನನ್ನದಲ್ಲ. ;)

ಮಿಂಚಂಚೆಯಲ್ಲಿ ಬಂದದ್ದು. :)

Rating
No votes yet

Comments