ಗೆಳೆಯ

ಗೆಳೆಯ

ನೀ ತಮಾಷೆಗೆ ಬರೆದೆಯೋ, ನನ್ನಲ್ಲಿ ನಿಜವಾಗಲೂ ಆಸಕ್ತಿ ಮೂಡಿತ್ತೋ, ಈಗಲೂ ನನಗೆ ಗೊತ್ತಿಲ್ಲ. ಆದರೆ ಗೆಳೆಯರಿಲ್ಲದ ಒಂಟಿಯಾಗಿದ್ದ, ಮಾತೇ ಬರದ ಮೌನಿಯಾಗಿದ್ದ ನನಗೆ ನೀನು ಬರೆದ ಒಂದೇ ಒಂದ ಕಾಗದ ನನ್ನ ಜೀವನವನ್ನೆ ಬದಲಾಯಿಸಿತು. ನನಗೆ ಅರಿವಾಗದಂತೆ ನಾನು ನಿನ್ನ ಪ್ರೀತಿಯಲ್ಲಿ ಸಿಲುಕಿದೆ. ಸ್ವಭಾವತಃ ಭಾವಜೀವಿಯಾಗಿದ್ದ ನಾನು ನಿನ್ನ ಕಾಗದಗಳಲ್ಲಿ ಅನೇಕ ಅರ್ಥಗಳನ್ನು ಕಂಡುಕೊಂಡೆ. ಅದನ್ನು ನಿನಗೆ ತಿಳಿಸುತ್ತಿದ್ದೆ ಕೂಡ.

ಆದರೆ ಕ್ಷುಲ್ಲಕ ಕಾರಣಕ್ಕಾಗಿ ನನ್ನ ಅಣ್ಣ ಮತ್ತು ನಿನ್ನ ಅಮ್ಮನ ನಡುವೆ ನಡೆದ ಜಗಳ ನನ್ನ ಪ್ರೀತಿಯನ್ನು ಬಲಿ ತೆಗೆದುಕೊಳ್ಳುವುದೆಂದು ಯಾರು ತಿಳಿದಿದ್ದರು. ನೀನು ನನ್ನ ಬೆಂಬಲಕ್ಕೆ ನಿಂತಿದ್ದರೆ ಈ ಜಗತ್ತು ಎದುರಾದರೂ ನಾನು ಹೆದರುತ್ತಿರಲಿಲ್ಲ. ಆದರೆ ಗೆಳೆಯ ನೀನು ಏಕೆ ಹಿಂಜರಿದೆಯೋ ಗೊತ್ತೆ ಆಗಲಿಲ್ಲ. ನನ್ನ ಕನಸ್ಸುಗಳ ರಾಜಕುಮಾರನಾದ ನೀನು ವಾಸ್ತವ ಜಗತ್ತಿನಲ್ಲಿ ಹೇಡಿಯಾದೆ. ನಮ್ಮಿಬ್ಬರ ನಡುವೆ ಬರೀ ಸ್ನೇಹವೆಂದೆ. ಹೀಗೇಕೇ ದೂರಾದೇ ಗೆಳೆಯ.

ಒಂದಲ್ಲ, ಎರಡಲ್ಲ ೧೫ ವರ್ಷಗಳ ಪ್ರೀತಿ ಮಣ್ಣು ಪಾಲಾಯಿತು. ಗೊತ್ತಿದ್ದವರು, ಗೊತ್ತಿಲ್ಲದವರು, ಎಲ್ಲರು ನಮ್ಮಿಬ್ಬರ ಸಂಬಂಧದ ಬಗ್ಗೆ ಏನೇನೋ ಆಡಿಕೊಂಡರು.

ಕಣ್ಣಂಚಿನ ಕೊನೆಯಲ್ಲಿ ಹನಿಗಳು ಮೂಡಿವೆ. ಇನ್ನೆನೂ ಬರೆಯಲಾಗುತ್ತಿಲ್ಲ ಕ್ಷಮಿಸು ಗೆಳೆಯ

Rating
No votes yet

Comments