ಗೊತ್ತಿದ್ದು ಮಾಡೊ ಸಣ್ಣ ಸಣ್ಣ ತಪ್ಪುಗಳು........................

ಗೊತ್ತಿದ್ದು ಮಾಡೊ ಸಣ್ಣ ಸಣ್ಣ ತಪ್ಪುಗಳು........................

ಹೌದು ನಮ್ಮ ಜೀವನದಲ್ಲಿ ಗೊತ್ತಿದ್ದು ಮಾಡುವ ಸಣ್ಣ ಸಣ್ಣ ತಪ್ಪುಗಳು ,ಈ ತಪ್ಪುಗಳು ಕೆಲವರಿಗೆ ದೊಡ್ಡದಾಗಿ ಕಾಣಿಸಬಹುದು ಮತ್ತೆ ಕೆಲವರಿಗೆ ಕಾಣಿಸದೆ ಇರಬಹುದು, ಅವುಗಳಲ್ಲಿ ಕೆಲವು ಕೆಳಗಿನಂತಿವೆ ,ಇದನ್ನು ಸುಮ್ಮನೆ ಓದಿ ಹಾಗೆ ಇರಬ್ಯಾಡಿ ನನಗೆ ಗೊತ್ತು ನೀವೂ ಭಾರಿ ಬುದ್ದಿವಂತರಂತ ನಿಮಗೆನೂ ಹೇಳಬೇಕಾಗಿಲ್ಲ ಅಲ್ಲವೆ …................

೧) ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಅಂತ ಸಿಗರೇಟ್ ಪ್ಯಾಕ್ ಮ್ಯಾಲೆ ಮತ್ತು ಎಲ್ಲರೂ ಹೇಳುತಿದ್ದರೂ ನಮ್ಮ ಧೂಮಾಪಾನಿಗಳು ಆರಾಮ ಆಗಿ ಒಂದರ ಹಿಂದೆ ಒಂದು ಸಿಗರೇಟ್ ಸೇದುತ್ತಾ ಹೊಗೆ ಬಿಡುತ್ತಾ ಇರುತ್ತಾರೆ.
೨) ಮಧ್ಯಪಾನ ಮಾಡಿ ವಾಹನ ಚಲಿಸಬ್ಯಾಡಿ ಅಂತ ಹೇಳುತ್ತಾರೆ ಆದರೆ ನಮ್ಮಲ್ಲಿ ಕೆಲವರು ಮಧ್ಯಪಾನ ಮಾಡಿ ವಾಹನ ಚಲಿಸಿ ನಮ್ಮ ಪೋಲಿಸ್ ಮಾಮಾ (ಮಾವ) ಗಳ ಕೈಗೆ ಸಿಕ್ಕಿ ಪೈನ್ ಕಟ್ಟಿ ಬರುತ್ತಾರೆ.
೩) ಇಲ್ಲಿ ಉಗಳಬಾರದು ,ಚೀಟಿ ಅಂಟಿಸಬಾರದು ಮತು ಕಸ ಕಡ್ಡಿ ಇಲ್ಲಿ ಹಾಕಬಾರದು ಅಂತ ಗೋಡೆ ಮ್ಯಾಲೆ ಬರೆದಿದ್ದರೂ ಎಲ್ಲಾ ಅಲ್ಲೆ ಕಸಕಡ್ಡಿ ಹಾಕೋದು ಉಗಿಯೋದು ಅಲ್ಲೆ.
೪)ಬಸ್ಸಿನಲ್ಲಿ ಹೆಂಗಸರಿಗೆ ಮತ್ತು ಅಂಗವಿಕಲರಿಗೆ ಅಂತ ಬರೆದಿರುತ್ತಾರೆ ,ಆದೆ ಸೀಟಿನಲ್ಲಿ ಗಂಡಸರೂ ಕೂತಿರುತ್ತಾರೆ ಅಲ್ಲಿ ಹೆಂಗಸರಾಗಲಿ ಅಥವಾ ಅಂಗವಿಕಲರಾಗಲಿ ಇದ್ದರೂ ನೊಡಿದರೂ ನೊಡದೆ ಹಾಗೆ ಸುಮ್ಮನೆ ಕೂತಿರುತ್ತಾರೆ.
೫) ಪಾದಚಾರಿಗಳೂ ಜಿಬ್ರಾ ಪಟ್ಟಿಯಲ್ಲೆ ರಸ್ತೆ ದಾಟಬೇಕು ಅಂತ ಹೇಳುತ್ತಾರೆ ಆದರೆ ನಮ್ಮ ಜನಗಳೂ ಅವರ ಇಷ್ಟ ಬಂದ ಕಡೆಯಲ್ಲ ದಾಟೊದು ಅಲ್ಲದೆ ರಸ್ತೆಯಲ್ಲಿ ಗಾಡಿ ಬರುತ್ತಾ ಇರೋ ಪರಿಯೇ ನೋಡದೆ ಸುಮ್ಮನೆ ನುಗ್ಗುತ್ತಿರುತ್ತಾರೆ .
೬) ಇನ್ನಾ ನಮ್ಮ ವಾಹನ ಸವಾರರೂ ಟ್ರಾಪಿಕ್ ನಲ್ಲಿ ಹಳದಿಯ ಸಿಗ್ನಲ್ ಬಂದಾಗ ಹೋರಡಲೂ ರೆಡಿಯಾಗಿ ಮತ್ತು ಹಸಿರು ಸಿಗ್ನಲ್ ಬಂದಾಗ ಚಲಿಸಿ ಅಂತ ಇದ್ದರೆ ನಮ್ಮ ಸವಾರರೂ ಹಳದಿ ಸಿಗ್ನಲ್ ಬಂದ ತಕ್ಷಣವೆ ವಾಹನ ಚಲಿಸಿಕೊಂಡು ಹೋರಟುಹೋಗುತ್ತಾರೆ.
೭)ಆಪೀಸ್ ನಲ್ಲಿ ಪೋನ್ ಅನ್ನು ಆಪೀಸ್ ಕೆಲಸಕ್ಕೆ ಮಾತ್ರ ಉಪಯೋಗಿಸಿ ಅಂತ ಅಂದರೆ ನಮ್ಮ ಉದ್ಯೋಗಿಗಳೂ ಅವರ ಮನೆ ಕೆಲಸಗಳಿಗೆಲ್ಲಾ ಉಪಯೋಗಿಸೊದು ಮತ್ತು ನಮ್ಮ ಸರ್ಕಾರಿ ಅಧಿಕಾರಿಗಳು ಕೂಡ ಅವರಿಗೆ ಕೊಟ್ಟಿರುವ ವಾಹನವನ್ನು ಸರ್ಕಾರದ ಕೆಲಸಕ್ಕೆ ಮಾತ್ರ ಉಪಯೋಗಿಸಿ ಅಂದರೆ ಅವರ ಮನೆ ಕೆಲಸಕ್ಕೂ ಉಪಯೋಗಿಸೋದು, ಭಾರಿ ಬುದ್ದಿವಂತರೂ ಒಂದೆ ಹೇಟಿಗೆ ಎರಡು ಹಕ್ಕಿ ಹೊಡೆಯೊ ಹಾಗೆ.
೮)ಸುಳ್ಳು ಹೇಳೊದು ಮಹಾ ಪಾಪ ಅಂತಾರೆ ಆದರೆ ಇಲ್ಲಿ ಎಲ್ಲರೂ ಸತ್ಯಕ್ಕಿಂತ ಸುಳ್ಳೆ ಜ್ಯಾಸ್ತಿ ಹೇಳೊದು ಇದು ಹೆಚ್ಚಾಗಿ ನಮ್ಮ ಜನ ನಾಯಕರಿಗೆ ಸಲ್ಲುತ್ತೆನೊ .
೯)ಗುರುಹಿರಿಯರನ್ನಾ ಗೌರವಿಸಿ ಅಂದರೆ ಕೆಲವು ಮಹಾಶಾಯರು ಅವರ ಮುಂದೆ ಗೌರವಿಸೊ ಹಾಗೆ ನಡೆದುಕೊಳ್ಳೊದು ಹಿಂದೆ ಅವರನ್ನೆ ಬೈಯೊದು.
೧೦)ನಾಟಕದ ಪ್ರೀತಿ ನಂಬಿಕೊಂಡು ಮೊಸ ಹೊಗಬ್ಯಾಡಿ ಅಂದರೂ ಮೊಸಹೋಗೋದು ಆಮೇಲೆ ನಮ್ಮ ಸಂಪದದ ಆ.ಭಾ.ವಿ.ಪೇ.ಸಂ. ಸೇರೊದು ಇದೆಲ್ಲಾ ಬೇಕಾ ನಮ್ಮ ಪ್ರೇಮಿಗಳಿಗೆ ,ಆದರೆ ನಿಮ್ಮಂತವರಿಗೆ ನಮ್ಮ ಸಂಘದ ಬಾಗಿಲೂ ಸದಾ ತೆರೆದಿರುತ್ತೆ .

ಅಯ್ಯೊ ಇಷ್ಟೆ ಸಾಕು ಹೇಳುತ್ತಾ ಹೊದರೆ ಮುಗಿಯೊದೆ ಇಲ್ಲ ಅನಿಸುತ್ತೆ. ಇದೆನೆಲ್ಲ ನಿಮ್ಮಗಳಿಗೆ ಹೇಳೊ ಮುಂಚೆ ನಾನು ತಿದ್ದುಕೊಳ್ಳುತೇನೆ ಹಾಗಾದರೆ ನೀವೂ........................................

ನಿಮ್ಮವ

ಗೌಡ್ರು

Rating
No votes yet

Comments