ನಾ ರೇಖೆ ದಾಟಲೇಬೇಕಿದೆ -ಕ್ಷಮಿಸು

ನಾ ರೇಖೆ ದಾಟಲೇಬೇಕಿದೆ -ಕ್ಷಮಿಸು

ನಿನ್ನನ್ನ ಏನೆಂದು ಕರೆಯಲಿ
ಗೆಳೆಯನೆನ್ನಲು ನೀ ಗೆಳೆಯನಲ್ಲ
ನಲ್ಲನೆನ್ನಲು ನೀ ನಲ್ಲನಲ್ಲ
ಸಂಗಾತಿ ಎನ್ನಲೂ ಮನಸ್ಸು ಬರುತ್ತಿಲ್ಲ
ಪಯಣಿಗಳಿಗೆ ಸಾಥ್ ನೀಡಿದವನೆಂದು ಹೇಳಲೇ
ಸರಿ ನೀನು ಒಳ್ಳೆಯವನೆಂದೆ ಇಟ್ಟುಕೊಂಡರೂ
ಇಂದು ನಾ ನಿನ್ನ ರೇಖೆ ದಾಟಲೇ ಬೇಕಿದೆ

ನಿನ್ನ ಅಡೆತಡೆಗೆ , ನಿನ್ನ ಕೆಂಪುಗೊಂಡ ಮೊಗಕ್ಕೆ
ನಾನೆಷ್ಟೋ ಬಾರಿ ಬೆದರಿ ನಿಲ್ಲುವೆ ನಿಂತಲ್ಲೇ
ನಿನ್ನ ಹಚ್ಚ ಹಸಿರಿನ ಆಣತಿಗಾಗಿ ಕಾಯುತ್ತಾ ನಿಲ್ಲುವಷ್ಟು
ಹೊತ್ತು ತಲುಪಬೇಕೆಂದ ಗುರಿ ತಲುಪವೆನೋ ಇಲ್ಲವೋ
ಎಂಬ ಆತಂಕದಿಂದಲೇ ನಿನ್ನಾಣತಿಗಾಗಿ ಕಾದುಕಾದು
ಬಸಳಿ ಬೆಂಡಾಗಿದ್ದೇನೆ

ನಿನ್ನೊಬ್ಬನ ಸನ್ನೆಗಾಗಿ ನಾನು ಕಾದಿದ್ದು ಸಾಕು
ಇಂದು ನಿನ್ನಾಣತಿ ಮೀರಿ ನಾ ಹೊರಡಲೇ ಬೇಕಿದೆ
ದೇವರ ಸನ್ನಿಧಿಗೆ
ಹೊತ್ತು ಮೀರಿದಷ್ಟು ಆಪತ್ತು
ಕಾಲ ನಿಲ್ಲುವುದಿಲ್ಲ ಯಾರಿಗಾಗಿಯೂ

ಓ ರೇಖೆ ಹಾಕಿದ ಲಕ್ಷಣನೇ
ರೇಖೆ ದಾಟುವ ಸೀತೆ ನಾನೆ
ರಾಮನಿಗಾಗಿ ಅಲ್ಲ , ರಾವಣನಿಗಾಗಿ ಅಲ್ಲ
ಓಡುವ ಸಮಯವ ಹಿಡಿಯಲು

ಕ್ಷಮಿಸೆನ್ನ ಈಗೊಮ್ಮೆ
ಮುಂದೆಂದಾದರೂ ಈ ದಾರಿಯಲ್ಲಿ
ಭೇಟಿಯಾಗಬಹುದು
ಆಗ ಕಾಯುವೆ ಮತ್ತೆ ನಿನ್ನ ಅನುಮತಿಗಾಗಿ

[ಇದು ಮೈಕೋ ಲೇಔಟ್‍ನ ಬಳಿಇರುವ ಸಿಗ್ನಲ್‌ನ ಉದ್ದೇಶಿಸಿ ಹೇಳಿದ್ದು]
೧೨.೦೦ ಘಂಟೆಯೊಳಗೆ ಬನಶಂಕರಿಗೆ ಹೋಗಬೇಕಿತ್ತು. ಅದಕ್ಕೆ ಇವತ್ತು ರೆಡ್ ಸಿಗ್ನಲ್ ಗಮನಿಸಿಯೂ ಮುಂದೆ ನುಗ್ಗಿದ್ದೆ. ಹಿಂದೆ ಟ್ರಾಫಿಕ್ ಪೋಲೀಸಿನವರ ವಿಷಲ್
ಕೇಳುತ್ತಿತ್ತು]

Rating
No votes yet

Comments