ರಾಜಕಾರಣಿಗಳೂ ಕಾವೇರಿಯೂ

ರಾಜಕಾರಣಿಗಳೂ ಕಾವೇರಿಯೂ

ವಿಧಾನ ಸಭೆ ಕಾವೇರಿ ತೀರ್ಪು ಬರುವಾಗ ಸರಿಯಾಗಿ ಪ್ರಾರಂಭ ವಾಯಿತು. ಆದರೆ ಇಲ್ಲಿಯವರೆಗೂ ವಿಧಾನ ಪರಿಷತ್ತು ಒಂದು ದಿನದ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಕರ್ನಾಟಕದ ರಾಜಕಾರಣಿಗಳು ಒಗ್ಗಟ್ಟಾಗಿ ಹೋರಾಡಬೇಕಾದ ಈ ಸನ್ನಿವೇಶ ದಲ್ಲಿ ಕನ್ನಡಿಗನಿಗೆ ಎಂಥಹ ಅನ್ಯಾಯ! ಇದಕ್ಕೆ ಮೊದಲನೆಯದಾಗಿ ಯಾವುದೇ ಕಾರಣಕ್ಕೆ ಕಲಾಪ ನಡೆಯದಿದ್ದರೆ ಆದಿನದ ಬೆತ್ತೆ ಅವರಿಗೆ ಸಿಗದಂತೆ ಕಾನೂನು ರಚಿಸುವದು ಅತ್ಯಾವಶ್ಯಕ. ಅಲ್ಲದೆ ಯಾವುದೇ ವರ್ಷ ಕನಿಷ್ಟ ೮೦% ರಷ್ಟು ದಿನ ಕಲಾಪ ನಡೆಯದೇ ಹೋದರೆ ಅಥವಾ ಯಾವನೇ ಎಮ್.ಎಲ್.ಏ ಅದರಲ್ಲಿ ಭಾಗವಹಿಸದೇ ಹೋದರೆ (ಅನಾರೋಗ್ಯ

ಹೊರತು ಪಡಿಸಿ) ಅವರ ಎಮ್.ಎಲ್.ಎ ಹುದ್ದೆ ರದ್ದಾಗಬೇಕು. ಆಗಮಾತ್ರ ಇವರು ಸ್ವಲ್ಪವದರೂ ಗಂಭೀರ ವಾಗಿ ಪ್ರಜೆಗಳ ಬಗ್ಗೆ ಚಿಂತಿಸಿಯಾರು. ಇಲ್ಲದಿದ್ದರೆ ಅಧ್ಯಕ್ಷರಬಗ್ಗೆ ಕಾಂಗ್ರೆಸ್ಸಿಗೆ ತಕರಾರು ಇದ್ದರೆ ಅದನ್ನು ಸಭೆಯಲ್ಲಿ ನಿಲುವಳಿ ಮಡಿಸಿ ಚರ್ಚಿಸಬಹುದಿತ್ತು. ಒಂದುವೇಳೆ ಅದು ಸಾಧ್ಯವಾಗದಿದ್ದರೆ ಇಂದಿನಪರಿಸ್ಥಿತಿಯಲ್ಲಿ ಕಾವೇರಿ ಬಗ್ಗೆ ಚರ್ಚೆ ಆದನಂತರ ಸದನದ ಹೊರಗೆ ಎಲ್ಲರೀತಿಯ ಚಳವಳಿ ನಡೆಸಬಹುದಿತ್ತು. ಆದರೆ ಅದಕ್ಕೆ ಹೆಚ್ಚಿನ ಶ್ರಮ ವಾಗುತ್ತದೆ. ಕಾರಣ ಒಳಗೆ ಸ್ವಲ್ಪಹೊತ್ತು ಗದ್ದಲ ವೆಬ್ಬಿಸಿ ಸದನ ಮುಂದೂಡುವಂತೆ ನೋಡಿಕೊಂಡು ನಂತರ ಸ್ವಂತ ಕೆಲಸ ಮಾಡಬಹುದು. ಸಂಬಳ ಎಲ್ಲವೂ ಸುಲಭವಾಗಿ ಸಿಗುತ್ತದೆ.

ಅದೇ ತಮಿಳು ರಾಜಕಾರಣಿಗಳು ಸರ್ವ ಪಕ್ಷ ಸಭೆಕರೆದು ಒಗ್ಗಟ್ಟಿನಿಂದ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಟೊಪ್ಪಿ ಹಾಕಲು ತಯಾರಿ ನಡೆಸಿದ್ದಾರೆ. ಉ.ಪ್ರ ಸರ್ಕಾರದ ವಿಚಾರದಲ್ಲಿ ವಿಭಿನ್ನ ನಿಲುವೆ ತಳೆದ ಡಿ.ಎಮ್.ಕೆ. ನಂತರ ಕಾಂಗ್ರೆಸ್ಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸಹಕರಿಸಲು ಒಪ್ಪಿದೆ. ಇದರ ಅರ್ಥ ಸಧ್ಯದಲ್ಲೇ ನ್ಯಾಧಿಕರಣದ ತೀರ್ಪು ಗೆಜೆಟ್ ನಲ್ಲಿ ಪ್ರಕಟ ವಾಗುವದು ನಿಶ್ಚಿತ. ಆದ್ದರಿಂದ ಕರ್ನಾಟಕದ ಜನತೆ ಇಲ್ಲಿಯ ಎಲ್ಲಾ ರಾಜಕೀಯ ಪಕ್ಷಗಳನ್ನು ಕಾವೇರಿ ತೀರ್ಪಿನ ಚಳುವಳಿಯಿಂದ ಹೊರಗಿಡಬೇಕು. ಅವರು ನದೆಸುವ ಸೋಗಲಾಡಿ ಪ್ರತಿಭತನೆಗೆ ಕಪ್ಪು ಬಾವುಟ ಪ್ರದರ್ಶಿಸಿ ವಿರೋಧ ಪ್ರಕಟಿಸಬೇಕು.

ತಕ್ಷಣ ಕರ್ನಾಟಕದ ಎಲ್ಲ ಸಂಸದರೂ ಲೋಕಸಭೆಯೆದುರು ಉಪವಾಸ ಮುಷ್ಕರ ಆರಂಭಿಸದಿದ್ದರೆ (ಲೋಕಸಭೆಯೊಳಗೆ ಪ್ರತಿಭಟಿಸಿದನಂತರ) ಅವರೆಲ್ಲರ ರಾಜಕೀಯ ಜೀವನ ಇಲ್ಲೇ ಕೊನೆಗೊಳ್ಳುವಂತೆ ನೋಡಿಕೊಳ್ಳಬೇಕು.ಈ ವಿಚರವಾಗಿ ಮಾಧ್ಯಮದವರು ಹೆಚ್ಚಿನ ಲೇಖನಗಳನ್ನು ಪ್ರಕಟಿಸಿ,ಒಂದು ಕಾಯಂ ಪುಟ ಇದಕ್ಕೆ ಮೀಸಲಿಟ್ಟು ಜನರನ್ನು ಜಾಗ್ರತ ಗೊಳಿಸಬೇಕು. ಇದರಿಂದಲೂ ತಮಿಳು ನಾಡಾಗಲೀ ಕೇಂದ್ರಸರಕಾರವಾಗಲೀ ಪಾಠ ಕಲಿಯದಿದ್ದರೆ ಕರ್ನಾಟಕದಿಂದ ಕಾಂಗ್ರೆಸ್ಸ್, ಬಿ,ಜೆ.ಪಿ, ಯಂತಹ ಈಗಿರುವ ರಾಜಕೀಯ ಪಕ್ಷಗಳು ಕರ್ನಾಟಕದಿಂದ ಮಾಯವಾಗಬೇಕು. ಇದು ನಿರಂತರ ಜನರನ್ನು ಜಾಗ್ರತ ಗೊಳಿಸುವದರಿಂದ ಮಾತ್ರ ಸಾಧ್ಯ.

ಅನಂತ ಪಂಡಿತ.

Rating
No votes yet

Comments