ಮತ್ತೆ ಅರಳಿತು ಮನವು

ಮತ್ತೆ ಅರಳಿತು ಮನವು

ಹರಿಪ್ರಸಾದ್ ನಾಡಿಗ್‍ರವರ ಚಿತ್ರಕ್ಕೆ ನನ್ನದೊಂದು ಕವನ?
ಬದುಕಿತ್ತು ಚಿಂತೆಗಳ ನಡುವೆ
ಜನಜಂಗುಳಿಯ ಸಂತೆಗಳ ನಡುವೆ
ಬಳಲಿತ್ತು ಜಂಜಾಟಗಳ ಮಡುವಿನಲಿ
ಹೋರಾಟದ ಬದುಕನೆದುರಿಸುವಲ್ಲಿ
ಬೇಕಿತ್ತು ಚೇತನಕೆ ಅರೆಗಳಿಗೆ ವಿಶ್ರಾಂತಿ
ಪ್ರಶಾಂತತೆಯನೀವ ಏಕಾಂತದಂಗಳ
ಆಗೆನಗೆ ಆಸರೆ ನೀಡಿದ ಮರದಡಿಯಲ್ಲಿ
ತಂಪು ಗಾಳಿಯ ವಾತ್ಸಲ್ಯದಲ್ಲಿ
ಹಕ್ಕಿಗಳಿಂಚರದ ಚಿಲಿಪಿಲಿಯಲ್ಲಿ
ರವಿತೇಜನ ಹೊಂಬೆಳಕಿನಲ್ಲಿ
ಪ್ರಕೃತಿದೇವಿ ನುಡಿದಳು ಪಿಸುಮಾತಿನಲ್ಲಿ
"ಸಹನೆ ಮೀರಿದಾಗ ಮತ್ತೆ ಬಂದಿಲ್ಲಿ
ವಿಶ್ರಮಿಸಿಕೊ ಎನ್ನ ಮಡಿಲಲ್ಲಿ"
ಮಾತೆಯ ಪ್ರೀತಿಯಲಿ
ಸಾಂತ್ವನದ ಮಾತಿನಲಿ
ಮತ್ತೆ ಅರಳಿತು ಮನವು.

Rating
No votes yet

Comments