ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು. [ಮಂಗ್ಳೂರ್ ಪಬ್ ಗಲಾಟೆ ಮತ್ತೆ ನಮ್ ಮೀಡಿಯಾ]
/*ಸ್ವಲ್ಪ ದೊಡ್ಡ ಬ್ಲಾಗೆಂಟ್ರಿ. ಈಗ್ಲೇ warn ಮಾಡ್ತಿದೀನಿ. */
ಪಬ್ನಲ್ಲಿ ಹೆಣ್ಮಣಿಗಳಿದ್ರು. ಅವ್ರಿಗ್ ಕಲ್ಚರ್-contract ತಗೊಂಡಿರೋ ಕೆಲ್ವ್ ಜನ ಹೋಗಿ ಬಡ್ದ್ರು. ಬಾರ್ಗ್ ಹೋಗಿದ್ದಕ್ ಬಾರ್ಸ್ದ್ರು ಅಂತ ನಮ್ (ಕು)ಖ್ಯಾತ ಮೀಡಿಯ ಗಂಟ್ಲ್ಹರ್ಕೊಳ್ತು.ಯಾವ್ ನ್ಯೂಸ್ ಚಾನಲ್ ಹಾಕ್ದ್ರೂ ಅದೇ.
ಆದ್ರೆ ಬರೀತಿರೋದು ಇದ್ರ ಬಗ್ಗೆ ಅಲ್ಲ. ನಮ್ ಮೀಡಿಯಾ ಬಡ್ಕೋತಲ್ಲ, 'ಯುವ ಸ್ವಾತಂತ್ರ್ಯ, ಅಯ್ಯೋ , ಯುವ ಜನಾಂಗದ ಸ್ವಾತಂತ್ರ್ಯ ಹರಣ, ಹಕ್ಕಿನ ಕಗ್ಗೊಲೆ' ಅಂತ. ಇದಕ್ಕೆ ಸಂಬಂಧಿಸಿದಂತೆ ಕೆಲ್ವು ಪ್ರಶ್ನೆಗಳು ತಲೆಗ್ ಬಂದ್ವು. ಇದನ್ ನೋಡಿ ಬರ್ಯೋಣ ಅನ್ಸಿತ್ತು, ಟೈಮ್ ಸಿಕ್ಕಿರ್ಲಿಲ್ಲ; ಈಗ್ಸಿಕ್ತು. ಅದ್ರ ಪರಿಣಾಮ ಈ ಬ್ಲಾಗೆಂಟ್ರಿ. /* ಲೇಖನ ಅಂತ consider ಮಾಡೋಕ್ಕೆ ರಗಳೆ. ನಾನು 'ಕೈಲಾಸಂ ಕನ್ನಡ' ಸ್ಟೈಲಲ್ಲಿ ಗೀಚೋದು,ಅದ್ಕೆ. */
ಪೀಠ್ಕೆ ಸಾಕು. ವಿಷ್ಯಕ್ ಬರ್ತೀನಿ.
ಇನ್ಸಿಡೆಂಟ್ ಬಗ್ಗೆ ನನ್ ಅಭಿಪ್ರಾಯ: ಹೆಣ್ಮಕ್ಳನ್ ಹೊಡ್ದಿದ್ ತಪ್ಪು. ಡೆಮಾcrazyಲಿ cultural boundary ಅಂತ ಹೇಳಿ ನಾನೇನ್ ಮಾಡ್ಬೋದು/ಬಾರ್ದು ಅಂತ ಬೇರೆ ಯಾರೋ ಹೇಳ್ಬಾರ್ದು.
ಇಲ್ಲಿ ಎಲ್ಲೆಡೆ ಕಂಡ tagline 'ಯುವ ಜನತೆ' / 'freedom of Indian youth'.
ಮೊದ್ಲು ಪ್ರಶ್ನೆ. Indian youth ಯಾರು? ಲೇವೈ ಸ್ಟ್ರಾಸ್ ಸಿಗ್ನೇಚರ್ tee , flying machine ಜೀನ್ಸ್ ಹಾಕ್ಕೊಂಡು 'party all night' ಮೆಂಟಾಲಿಟಿ ಇರೋರು ಮಾತ್ರನೇ Indian youthನ representativeಗಳಾ? /*ಇದ್ರ ಬಗ್ಗೆ ನನ್ corp ಬ್ಲಾಗ್ ನಲ್ಲಿ ಬೇಸತ್ತು ಬರ್ದಿದ್ದೆ. ಬರೀ ಪ್ರಶ್ನೆಗಳು. ಅವೇ ಇಲ್ಲಿವೆ. */ ಮೀಡಿಯಾ project ಮಾಡ್ತಿರೋದು ಬರೀ ಒಂದ್ section of indian youth, ಅಷ್ಟೆ, ಅಲ್ಲ್ವಾ?
ಇನ್ನೊಂದ್ ಪ್ರಶ್ನೆ: ಹೀಗಿದ್ಮೇಲೆ , ಇದು Indian youthನ ಒಂದು selective section ಮಾತ್ರವೇ ಕಂಡ ಸಮಸ್ಯೆ. ಇದನ್ನ collective ಸಮಸ್ಯೆ ಅಂತ ಮೀಡಿಯಾ ಯಾಕ್ ತೋರ್ಸ್ತಾ ಇದೆ?
ನಾನ್ ನೋಡಿರೋ ಹಾಗೆ / ನನ್ಗೆ ಕಂಡಿರೋ ಕೆಲ್ವು stereotypeಗಳು.
೧)MTV ರೋಡೀಸ್ / splitsvilla ಥರ. /* ಮಾತ್ಗೊಂದ್ಸಾರಿ F*** ಅಂದ್ರೆ ತಮ್ ಸೀಕ್ಯೂ [cool quotient] ಏರತ್ತೆ ಅಂತ ನಂಬಿ ನಡ್ಯೋರು */
೨) ಸಮಾ ದುಡ್ಯೋದು, party all night, ದುಡ್ಡಿದ್ದ್ರೆ ಸಾಕು ಇನ್ನೆಂತಾ ಬೇಕು ಆಂದ್ಕೊಳೋರು. /*ನಮ್ ದುಡ್ಡು , ನಮ್ ಟೈಮು, ನಮ್ಮಿಷ್ಟ. ಕಟ್ಕೊಂಡ್ ನಿಂಗೇನ್? */
೩) ಅಪ್ಪ/ಅಮ್ಮನಿಗೆ ಲೆಕ್ಕ ಹಾಕಿದ್ರೆ ಅವ್ರ 3/5 ಪಟ್ಟು ಸಂಬ್ಳ ತಗೊಂಡು ಎಗ್ಗಿಲ್ಲದೆ ಖರ್ಚು ಮಾಡೋರು. /* ಅಯ್! ನಾವ್ ಸ್ಮಾರ್ಟು, intelligentಉ. ಸೊ, ಕೊಡ್ತಾರೆ ಅಷ್ಟ್ ಸಂಬ್ಳ */
/* ಇದು ತಪ್ಪು /ಸರಿ , ಹೀಗಿರ್ಬೇಕು/ಬಾರ್ದು ಅಂತ ತೀರ್ಮಾನ ಮಾಡೊಕ್ ನಾನೇನು ಜಡ್ಜಲ್ಲ.*/
ಮತ್ತೊಂದ್ ಪ್ರಶ್ನೆ: ಇವ್ರಷ್ಟೇನಾ ಭಾರತೀಯ ಯುವ ಜನಾಂಗ? ನಮ್ದೇಶದಲ್ಲಿರೋ 18-35 ವಯಸ್ಸಿನೋರೆಲ್ಲ ಯುವಕರು ಅಂದ್ರೆ, ಈ ಮೇಲೆ ಕೊಟ್ಟಿರೋ categoryಗಳಿಗೆ ಎಷ್ಟ್ ಜನ ಸೇರ್ತಾರೆ? ಪಬ್ cultureನ ಕಂಡೇ ಇರದ ಯುವಕರ ಸಂಖ್ಯೆ ಹೆಚ್ಚಲ್ವೇ? tier 2 ಸಿಟಿಗಳಲ್ಲಿ , ಹಳ್ಳಿಗಳಲ್ಲಿ ಇರುವ ಯುವಕರು ಮೀಡಿಯದ 'indian youth'ನ ಡೆಫಿನಿಶನ್ಗೆ ಒಗ್ಗೊಲ್ವಲ್ಲಾ?ಹಾಗಿದ್ರೆ ಈ ಪಬ್ culture ವಿರೋಧದ ಬಗೆಗಿನ ಸಮಸ್ಯೆ ಇಡೀ ಭಾರತೀಯ ಯುವ ಜನಾಂಗದ ಸ್ವಾತಂತ್ರ್ಯ ದ ಸಮಸ್ಯೆ ಆಗೋಯ್ತಾ?
ನಾನು ಒಬ್ಬ ಇಂಡಿಯನ್ ಯೂತ್. ನೀವೆಲ್ಲಾ ಕೂಡ. ಬಳ್ಳಾರಿ ಹತ್ರದ್ ಕ್ವಾರಿಗಳಲ್ಲಿ ಕಲ್ಲೊಡ್ಯೋರು ಕೂಡ ಯುವಕರೇ. NDA ಇಂದ ಈಗ್ತಾನೆ ಪಾಸಾಗಿರೋ cadetಗಳೂ ಯುವಕರೇ. ತಾಲೂಕೊಂದ್ರಲ್ಲಿ ಹೈಸ್ಕೂಲ್ ಟೀಚರಾಗಿ ಈಗ್ತಾನೆ ಸೇರ್ದೋರು ಕೂಡ ಯುವಕರೇ. ಮನೇಲಿ ಕಷ್ಟ ಅಂತ ಓದು ಅಲ್ಲಿಗೇ ನಿಲ್ಲ್ಸಿ ಹೊಲ/ಗದ್ದೇಲಿ ದುಡ್ದು ಮನೆ ನಡ್ಸಿ ತಂಗಿ/ಅಕ್ಕಂದಿರ ಮದುವೆ, ಅಪ್ಪನ ಸಾಲ ಅಂತ ಯೋಚ್ನೆ ಮಾಡೋರು ಕೂಡ ಯುವಕರೇ ಅಲ್ಲ್ವೆ?
ಇವ್ರ ಸ್ವಾತಂತ್ರ್ಯ ಬೇಕಾದಷ್ಟು ತರದಲ್ಲಿ ಕೊಲೆಯಾಗತ್ತಲ್ಲ, ಅದ್ಕ್ಕೂ ನಮ್ ಸಮಾಜವೇ ಕಾರಣ ಆಗತ್ತಲ್ಲ, ಆಗೆಲ್ಲಾ ಮೀಡಿಯ ಎಲ್ಮಗಿತ್ತು?
classic example; ಸ್ಕೂಲು/ಕಾಲೇಜುಗಳಲ್ಲಿ ನಮ್ ಯೋಚನಾ ಲಹರಿ mould ಮಾಡ್ತಾರಲ್ಲ, ಅಲ್ಲಿ ಹಾಳಾಗೋ ಸ್ವಾತಂತ್ರ್ಯ ಕಡಿಮೆ ಮೌಲ್ಯದ್ದಾ? ಸುಲಭ್ವಾದ್ ಕೆಲ್ಸಕ್ ಧಾರಾಳ್ವಾಗ್ ಸಂಬ್ಳ ಸಿಗತ್ತೆ ಅಂತ ನಮ್ ಕೆಲ್ವ್ ಹುಡುಗ್ರು ಸಾಫ್ಟ್ ವೇರ್ ಕೆಲ್ಸಾನೇ ಬೇಕು ಅಂತ ಆಸೆ ಪಡ್ತಾರಲ್ಲ [ಅವ್ರು ಅದಕ್ಕೆ ಲಾಯಕ್ಕಿಲ್ಲಾಂದ್ರೂ] /* ಇದು ಇನ್ನೊಂದು series of ಚರ್ಚೆಗೆ reserve ಮಾಡಿರೋ ವಿಷಯ */
ಬೇಕಾದಷ್ಟು social factors ಇಂದಾಗಿ ಯುವಕರ ಆಯ್ಕೆ ಸ್ವಾತಂತ್ರ್ಯಕ್ಕೆ ಬೀಳ್ತಿರೋ ಹೊಡೆತ ಯಾಕ್ ಯಾರೂ ನೋಡಲ್ಲ? ಅಥ್ವಾ ಜಾಣ್ಕುರುಡೋ ? ದುಃಖದ ಸಂಗತಿ ಅಂದರೆ ಯುವಕರೇ ಇದನ್ನು ನೋಡದೇ ಇರೋದು ಅನ್ನುವುದು ನನ್ನ humble opinion.
ಮುಂದೆ ಓದ್ಬೇಕು/ಹೊರಗೆ ಕೆಲ್ಸಾ ಮಾಡ್ಬೇಕು ಅಂತ ಆಸೆ ಇದ್ದ್ರೂ ಮದ್ವೆ ಮುಂದೆ ಓದ್ಬಾರ್ದು ಅಂತ ಪತಿ ಮಹಾಶಯ order ಮಾಡಿದ್ದಕ್ಕೆ ಓದು ನಿಲ್ಲಿಸೋ ಹುಡುಗೀರು ಸ್ವಾತಂತ್ರ್ಯ ಕಳ್ಕೋತಿಲ್ವಾ?
ಇನ್ನು ನಂಗ್ ತೀರ ಹತ್ರ ಇರೋದು. ದುಬಾರಿ ಆದ್ರೂ ಕಳಪೆ ಆಗಿರೋ ಅಂಥ ಸಾಫ್ಟ್ ವೇರ್ ಕೊಳ್ಳದಲೇ ಇರೋ ಸ್ವಾತಂತ್ರ್ಯ. ಹೊಸಾ ಲ್ಯಾಪ್ಟಾಪ್/ಕಂಪ್ಯೂಟ್ರು ಕೊಂಡಾಗ ನಮ್ಗಿಷ್ಟ ಇರ್ದಿದ್ರೂ ರೆಡ್ಮಂಡಿನ್ ಕಂಪ್ನಿ ಒಂದ್ಬರ್ದಿರೋ ಆಪ್ರೇಟಿಂಗ್ ಸಿಸ್ಟಮ್ಗೆ ಜನ ಕಾಸ್ಕೊಡ್ಲೇ ಬೇಕಾಗತ್ತಲ್ಲ? ಅದ್ಕೇನು?
ಯೂನಿವರ್ಸಿಟಿ ಒಂದು (ದುರಾಸೆಗೆ/monopolistic trade practicesಗೆ) ಹೆಸ್ರುವಾಸಿಯಾಗಿರೋ ಕಂಪನಿ ಜೊತೆ ಒಪ್ಪಂದ ಮಾಡ್ಕೊಂಡು ಅದ್ರ ರೀತಿ ಇಡೀ university ಜನತೆಯ ಮೇಲೆ ಹಾಕಿರುವ ಹೇರಿಕೆಯ ನಿಲುವು, ಯುವ ಸ್ವಾತಂತ್ರ್ಯ ಕ್ಕೆ ಅಡ್ದಿಯಾಗ್ಲಿಲ್ವಾ?
ಪತ್ರಿಕಾ ಸ್ವಾತಂತ್ರ್ಯ ಅಂತ ಹೊಡ್ಕೊಳೋ ಮಹಾತಾಯಿ ಒಬ್ಬ್ಳು ಅವ್ಳು,ಅವ್ಳ್ ಚಾನಲ್ (ಮುಂಬೈ ಅವಘಡದ ಸಮಯದಲ್ಲಿ ) ಮಾಡಿದ್ ಅಧ್ವಾನದ್ ಕೆಲ್ಸದ್ ಬಗ್ಗೆ ಯುವಕರು ಬ್ಲಾಗ್ ಬರ್ದಿದ್ದಕ್ಕೆ ಕೇಸ್ ಹಾಕಿ ರಗಳೆ ಮಾಡಿದಾಗ ನಮ್ಮ free speechನ ಸ್ವಾತಂತ್ರ್ಯ ಏನಾಯ್ತು? /* ಹೆಚ್ಚಿನ ಮಾಹಿತಿಗೆ ಗೂಗಲ್ನಲ್ಲಿ 'barkha ckunte' ಅಂತ ಸರ್ಚ್ ಕೊಡಿ. */
ನನ್ನ ಕಳಕಳಿ ಇಷ್ಟೆ. ಪಬ್ culture ಬಗ್ಗೆ ಹಾಹಾಹೂಹೂ ಅಂತ ದಿನಕ್ಮೂರ್ ಗಂಟೆ discussion ಪ್ರಸಾರ ಮಾಡೋ ಮೀಡಿಯ, ಬರೀ sensational ಸುದ್ದಿ ನೋಡೋ /ಮಾಡೋ ಬಗ್ಗೆ ಬಿಟ್ಟು ಸ್ವಲ್ಪ sensible ಸುದ್ದಿಗಳನ್ನೂ ಕೊಡ್ಲಿ.
ಇನ್ನು, ನಮ್ ಯೂತ್. ಬಹಳಷ್ಟು ಮಂದಿಗೆ ಏನ್ ಮಾಡ್ಬೇಕು /ಮಾಡ್ತಿದೀವಿ ಗೊತ್ತಿಲ್ಲ, ನಡ್ಕೊಂಢೋಗತ್ತೆ ಅಂತ ಏನೋ ಮಾಡ್ತಿವೆ. ನಮ್ ಗುರುಗಳು ,"ಕಷ್ಟ ಪಟ್ಟ್ರೂಗುರಿ ತಲುಪ್ದಲೇ ಇರೋದು ದುರಂತ ಅಲ್ಲ, ಗುರಿನೇ ಕಂಡ್ಕೊಳ್ದೇ ಇರೋದು ಮಹಾದುರಂತ" ಅಂತ ಹೇಳಿದ್ರು. ನೆನ್ಪಿಗ್ ಬಂತು.
ಕೇವಲ ತಮ್ಮ ಬಗೆಗಿನ obsession (ಹಾಗೂ ತಮ್ಮ ಶ್ರೀಮಂತಿಕೆ/ಸುಖ/ಸ್ವೇಛ್ಛಾಚಾರ) ಮಾತ್ರವೇ ಜೀವನ, ಅದರಂತೆ, ಅದಕ್ಕೋಸ್ಕರವೇ ಏನ್ಮಾಡಿದ್ರೂ ಸರಿ ಅಂತ ನಂಬಿ ನಡೀತಿರೋ ನಮ್ಮ upper middle and elite ವರ್ಗದ ಜನ, ಆ obsessionನಿಂದ ಹೊರಗ್ಬರ್ಬೇಕು. ಬೇಗ ತಿಳಿದು ಎಚ್ಚರವಾದರೆ ಒಳಿತು; ನನ್ ದೋಸ್ತೊಬ್ನು ಹೇಳಿದ ಹಾಗೆ. ನನ್ನ್ದೂ ಇದೇ ಅಭಿಪ್ರಾಯ.
ತಪ್ಪಿದ್ದಲ್ಲಿ ತಿದ್ದಿ! ನಿಮ್ಮ ಅನಿಸಿಕೆಗಳನ್ನೂ ಹಂಚಿಕೊಳ್ಳಿ..
_ರಾಘವ_
Comments
ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು
In reply to ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು by Aravinda
ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು
In reply to ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು by raghava
ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು
In reply to ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು by omshivaprakash
ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು
In reply to ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು by raghava
ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು
In reply to ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು by Aravinda
ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು
In reply to ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು by ಹೇಮ ಪವಾರ್
ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು
ಸರಿಯಾದ ವಿಚಾರ
ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು.
ಉ: ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು.