ಭಾರತದ ಇತಿಹಾಸವೆಂಬ ಅರೆಬೆಂದ ಅನ್ನ ನಮಗೆ ತಿನ್ನಿಸಿದ್ದು ಸರಿಯಾ?

ಭಾರತದ ಇತಿಹಾಸವೆಂಬ ಅರೆಬೆಂದ ಅನ್ನ ನಮಗೆ ತಿನ್ನಿಸಿದ್ದು ಸರಿಯಾ?

ಬಹುಷಃ ಈಗಲೂ ಸ್ಥಿತಿ ಹಾಗೆ ಇದೆ ಅನ್ಕೊತಿನಿ, ಅದೇ ಗಾಂಧೀಜಿ,ನೆಹರೂ,ಅದೇ ಸತ್ಯಾಗ್ರಹ,ಅದೇ ಶಾಂತಿ,ಅಸಹಕಾರ,ಕ್ವಿಟ್ ಇಂಡಿಯಾ ಚಳುವಳಿ ಇವೆಲ್ಲವೂ ಮಾತ್ರ ಇದ್ದಿದ್ದರಿಂದಲೇ 'ಭಾರತಕ್ಕೆ ಸ್ವಾತಂತ್ರ ಸಿಕ್ಕಿದ್ದು' ಅನ್ನೋ ಇತಿಹಾಸದ ಪಾಠ. ಇವಿಷ್ಟನ್ನೇ ಹೇಳುವ ಇತಿಹಾಸವನ್ನೇ ಓದಿ ನಾನು ಬೆಳೆದಿದ್ದು. ನೀವು ಇದನ್ನೇ ಓದಿದ್ದಿರಿ ಅಲ್ವಾ?

ನನ್ನ ಶಾಲಾ ಜೀವನ ಮುಗಿದು ಕಾಲೇಜ್ ಮುಗಿಸುವ ಹಂತಕ್ಕೆ ಬರುವವರೆಗೂ ನಾನು ಇವಿಷ್ಟರಿಂದಲೇ ನಮಗೆ ಸ್ವಾತಂತ್ರ ಬಂದಿದ್ದು ಅಂತ ತಿಳ್ಕೊಂಡಿದ್ದೆ.ಯಾಕೆಂದರೆ ಅಲ್ಲಿಯವರೆಗೂ ನಾನು ಈ ಮಹನಿಯರಿಬ್ಬರ ಸಾಧನೆಗಳೇ ಹೆಚ್ಚಾಗಿ ಇದ್ದಂತಹ ಇತಿಹಾಸವನ್ನು ಓದಿ ಬಂದವನಾಗಿದ್ದೆ. ಹೆಚ್ಚೆಂದರೆ ಸುಭಾಷ್,ತಿಲಕ್,ರವಿಂದ್ರನಾಥ್ ಠಾಗೋರ್,ಲಾಲ ಲಜಪತ ರಾಯ್ ಅವರ ಬಗ್ಗೆ ಒಂದೆರಡು ಲೈನ್ ಓದಿದ ನೆನಪಿತ್ತು ಅಷ್ಟೆ.
ನಮ್ಮ ಇತಿಹಾಸದಲ್ಲಿ ಒಬ್ಬ ಭಗತ್ ಸಿಂಗ್ ಇದ್ದ ಅಂತ ನನಗೆ ತಿಳಿದಿದ್ದೇ, 'The Legend of Bhagat Singh' ಅನ್ನುವ ಚಿತ್ರ ನೋಡಿದ ಮೇಲೆಯೇ. ಆಗಲೇ ಚಂದ್ರ ಶೇಖರ್ ಆಜಾದ್,ರಾಜ್ ಗುರು,ಸುಖ ದೇವ್,ಭಟುಕೆಶ್ವರ ಮುಂತಾದವರ ಬಗ್ಗೆ ತಿಳಿದಿದ್ದು. ಸುಭಾಷರ ಐ.ಎನ್.ಎ ಅಭಿಯಾನದ ಬಗ್ಗೆಯಾಗಲಿ, ರಾಸ್ ಬಿಹಾರಿ ಬೋಸ್ ಎಂಬ ಮಹಾನ್ ಕ್ರಾಂತಿಕಾರಿಯ ಬಗ್ಗೆಯಾಗಲಿ, ಇಲ್ಲ ಸ್ವಾತಂತ್ರ ಚಳುವಳಿಗೊಸ್ಕರ ಜೀವವನ್ನೇ ತೇದ ವೀರ ಸಾವರ್ಕರ್ ಬಗ್ಗೆಯೂ ನಂಗೆ ತಿಳಿದಿರಲಿಲ್ಲ.

ಕೇವಲ ಒಬ್ಬ ನಾಯಕನನ್ನು ಮೆಚ್ಚಿಸುವುದಕ್ಕೊಸ್ಕರ ಅವನ ಬಾಲಬುಡುಕರು ನಮಗೆ ಓದಿಸಿದ ಇತಿಹಾಸವೆಂಬುದು ಅರೆಬೆಂದ ಅನ್ನದಂತೆ.ಅಲ್ಲಿ ನಮಗೆ ಯಾವುದು ಪೂರ್ತಿಯಾಗಿ ಸಿಗುವುದಿಲ್ಲ. ನನಗೆ ನೆನಪಿದೆ ಎನ್.ಡಿ.ಎ ಸರ್ಕಾರದ ಸಮಯದಲ್ಲಿ 'ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ'ಯೊಂದನ್ನು ರಚಿಸಲಾಗಿತ್ತು.ಆಗ ಇದ್ದಕಿದ್ದಂತೆ ಎದ್ದು ಬಂದ ಕಮುನಿಸ್ಟರು ಹಾಗೂ ಅವರದೆ ಪಟಾಲಮ್ಮು 'ಇತಿಹಾಸದ ಕೇಸರೀಕರಣ' ಅನ್ನೋ ಪುಕಾರ್ ಹಬ್ಬಿಸಿತ್ತು.ಆಮೇಲೆ ಅದೇನಾಯ್ತೋ ಗೊತ್ತಿಲ್ಲ. ಬಹುಷಃ ಇನ್ನು ಪರಿಷ್ಕರಣೆ ಆಗಿಲ್ಲ ಅನ್ನಿಸುತ್ತೆ.

ಇಂತ ಇತಿಹಾಸವನ್ನೇ ಓದಿ ಬೆಳೆಯುವ ಮುಂದಿನ ಪೀಳಿಗೆಯವರಿಗೂ ನಮ್ಮ ಅನೇಕ ವೀರ ಜೀವನ,ತ್ಯಾಗ,ಬಲಿದಾನದ ಪರಿಚಯವಾಗುವುದು ಯಾವಾಗ? ನಮ್ಮ ನಾಳೆಗಳಿಗಾಗಿ ಅವರ ಜೀವವನ್ನೇ ತೇದವರಿಗೆ ನಮ್ಮ ಹೃದಯಗಳಲ್ಲಿ ಒಂಚೂರು ಸ್ಥಾನ ಸಿಗುವುದಾದರೂ ಯಾವಾಗ?

Rating
No votes yet

Comments