ಅಮ್ಡಾಲ್ಸ್ ನಿಯಮ - ಏನಿದು?

ಅಮ್ಡಾಲ್ಸ್ ನಿಯಮ - ಏನಿದು?

Comments

ಬರಹ

ಈಗ ಎಲ್ಲೆಲ್ಲೂ ಡುಯಲ್ ಕೋರ್ ಮತ್ತು ಮಲ್ಟಿ ಕೋರ್ ಪ್ರಾಸೆಸರ್ ಗಳ ಭರಾಟೆ ಶುರುವಾಗಿದೆ.
ಫ್ರೀಕ್ವೆನ್ಸಿ ಸಮರ ಹೂಡಿದ್ದ ಕಂಪನಿಗಳು ಈಗ ಹೆಚ್ಚು ಹೆಚ್ಚು ಕೋರ್ ಗಳನ್ನು ಚಿಪ್ಪಿನ ಒಳಗೆ ತುರುಕುತ್ತಿವೆ.

ಇದರ ವಿಚಾರವಾಗಿ ಗೂಗಲಿಸಿದಾಗ ಅಮ್ಡಾಲ್ಸ್ ನ ನಿಯಮ ಕಣ್ಣಿಗೆ ಬಿತ್ತು. ತುಂಬ ಸ್ವಾರಸ್ಯಕರವಾಗಿದೆ ಅನ್ನಿಸಿತು.

ಯಾವುದೇ ಮಲ್ಟಿ ಕೋರ್ ಪ್ರಾಸೆಸರ್ ನಿಂದ ವ್ಯವಸ್ಥೆಗೆ(system) ದೊರಕುವ ವೇಗ(speedup) ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಲ್ಗಾರಿತಮ್ ಮೇಲೆ ಜಾಸ್ತಿ ಅವಲಂಬಿತವಾಗಿದೆಯೆ ಹೊರತು ಎಷ್ಟು ಪ್ರಾಸೆಸರ್ ಕೋರ್ ಗಳಿವೆಂಬುದರ ಮೇಲಲ್ಲ.

ಅಂದರೆ ವ್ಯವಸ್ಥೆಯಲ್ಲಿ ಪ್ರಾಸೆಸರ್ ಗಳ ಸಂಖ್ಯೆ ಹೆಚ್ಚಾದ ಮಾತ್ರಕ್ಕೆ ಅದರ ವೇಗ(ಅಥವ ಕಾರ್ಯಕ್ಷಮತೆ) ಅದಕ್ಕೆ ತಕ್ಕಂತೆ ಹೆಚ್ಚಾಗುವುದಿಲ್ಲ.

-ಜೈ ಕರ್ನಾಟಕ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet