ಹಾಸ್ಯ - ಹಾಡುಗಳು

ಹಾಸ್ಯ - ಹಾಡುಗಳು

ಇತ್ತೀಚೆಗೆ ಶ್ರೀನಾಥ ಅವರು "ಮನೆ ಸಾಮಾನು" ಅನ್ನೋ ತಲೆ ಬರಹದ ಅಡಿಯಲ್ಲಿ ಮನೆ ಸಾಮಾನು ಹಾಡುವ ಹಾಡುಗಳನ್ನು ಬರೆದಿದ್ದರು. ಅದಕ್ಕೆ ಬಾಲ ಇದು ಎಂದರೆ ತಪ್ಪಾಗಲಾರದು.

* ಕೊಳಲು ಟ್ರಂಪೆಟ್ ಗೆ ಹೇಳಿತಂತೆ: "ಮೆಲ್ಲುಸಿರೇ ಸವಿಗಾನ, ಎದೆ ಜಲ್ಲ್ಲನೆ ಹೂವಿನ ಬಾಣ"

* ಪೇಪರ್ ಪೆನ್ ಗೆ ಹೇಳಿತಂತೆ: "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ"

* ಹಸು ಎಮ್ಮೆಗೆ ಹೇಳಿದ್ದು: "ಎಮ್ಮೇ ನಿನಗೆ ಸಾಟಿ ಇಲ್ಲ, ಬಿಸಿಲು ಮಳೆ ಬಿರುಗಾಳಿ ಎನ್ನದೆ ಮುಂದೇ ಸಾಗುವೆ"

* ಜೇಡರ ಬಲೆ ಮನೆಗೆ ಬಂದ ಅತಿಥಿ ಗಳನ್ನು ಕೇಳಿತಂತೆ: "ದೂರದಿಂದ ಬಂದವರೇ , ಬಾಗಿಲಲಿ ನಿಂದವರೆ, ಮಂದಿರವು ಚೆನ್ನಿದೆಯೇ? ಆರಾಮವಾಗಿದೆಯೇ?"

*ಅಡಿಗೆ ಮನೆ ಪಾತ್ರೆಗಳೆಲ್ಲ ಅವರ ಒಡತಿಯನ್ನು (ಅವಳು ಹೊರಗೆ ಹೋದಾಗ) ನೆನೆದು ಹೇಳಿದ ಹಾಡು: "ಗೃಹಿಣಿಯ ಜೀವನ ಮಹಾತ್ಯಾಗ ಬಂಧ ಅನಂತ ಸೇವಾ ಸಾಧನೆಯಾ ರಂಗ"

ನಿಮಗೂ ಹೀಗೆ ನೆನಪಿಗೆ ಬಂದರೆ, ತಿಳಿಸಿ.

Rating
No votes yet

Comments