ಗಾಂಧಿ ತಾತನಿಗೆ

ಗಾಂಧಿ ತಾತನಿಗೆ

ಭಾರತದ ಇತಿಹಾಸದಲ್ಲಿ ಅನೇಕ ದಾಳಿಗಳು ನಡೆದಿವೆ. ಹಾಗೆ ಇತಿಹಾಸದಿಂದ ಭಾರತಿಯರು ಇನ್ನು ಪಾಠ ಕಲೆತಿಲ್ಲವೆ?
ಇಂದು ಮತ್ತೆ ಭಾರತದಲ್ಲಿ ಭಯೋತ್ಪದಕರ ಭೀತಿಯಿದೆ. ಆದರೆ ರಾಜ್ಯ ರಾಜ್ಯಗಳು ಗಡಿ ಹೆಸರಲ್ಲಿ ,ಭಾಷೆ ಹೆಸರಲ್ಲಿ ರಾಜಕೀಯಕ್ಕೆ ಇಳಿದಿವೆ.
ಭಾರತದ ಈ ಅಂತರೀಕ ಜಗಳಗಳು ಹೊರಗಿನವರು ಬರಲು ದಾರಿ ಮಾಡಿಕೊಡುವುದಿಲ್ಲವೆ?
ಜನವರಿ ೩೦ ಕ್ಕೆ ನಾನು ಒಂದು ಚಲನಚಿತ್ರಗೀತೆ ಕೇಳಿದೆ ಇದನ್ನು ಸಂಪದ ಸ್ನೇಹಿತರಿಗೆ ಕೇಳಿಸಲು ತಿಳಿದಿಲ್ಲ ಅದಕ್ಕೆ ಬರೆಯುತ್ತಿರುವೆ.
ಚಿತ್ರ - ಒಂದೇ ಕುಲ ಒಂದೇ ದೈವ
ರಚನೆ - ಹುಣಸೂರು ಕೃಷ್ಣಮೂರ್ತಿ
ಸ.ನಿರ್ದಶನ - ರಾಜನ್ ನಾಗೇಂದ್ರ
ಗಾಯಕಿ - ಬಿ.ಕೆ.ಸುಮಿತ್ರ

ಗಾಂಧಿ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ
ವಂದಿಸಿ ಮೊದಲು ನಿನ್ನಡಿಗಿಂದು ತಿಳಿಸುವೆನಿಲ್ಲಿಯ ರೀತಿ,

ಉತ್ತರ ದಕ್ಷಣ ಪೂರ್ವ ಪಶ್ಛಿಮ ಬೇರೆ ಅನ್ನುವ ಲಟಾಪಟಿ
ತುಂಬಿದೆ ತಾತ ಬಂದು ನೋಡು ನಿನ್ನ ಮಕ್ಕಳ ಪೈಪೋಟಿ
ತಾಯಿ ಒಬ್ಬಳೆ ಎಂಬುದ ಮರೆತು
ಪ್ರಾಂತ್ಯ ಪ್ರಾಂತ್ಯಕೂ ಜಗಳವಿಲ್ಲಿ
ಭಾಷೆ ಭಾಷೆಗೂ ತಕರಾರಿಲ್ಲಿ
ಸರಹದ್ದೆನ್ನುವ ಹೆಸರಲ್ಲಿ,

ಲಾಟಿ ಏಟು ಗುಂಡಿನ ಏಟು ಬಿದ್ದರು ನೀನು ಜಗ್ಗಲಿಲ್ಲ
ವಂದೇ ಮಾತರಂ,
ವಂದೇ ಮಾತರಂ ಅನ್ನೊ ಘೋಷ ಬದುಕಿರೊ ತನಕ ಬಿಡಲಿಲ್ಲ
ಅಂದು ನೀನು ಮಾಡಿದ ತಾಗ್ಯ
ಇಂದಿನ ಪ್ರಜೆಗಳು ತಿಳಿದಿಲ್ಲ
ಹೊಂದಿಗೆ ಬಾಳುವ ಬುದ್ಧಿ ಅಂತೂ ಇನ್ನು ಇವರಿಗೆ ಹುಟ್ಟಿಲ್ಲ,

ಭಾರತದೇಶದ ವಾಸಿಗಳೆಲ್ಲ, ಒಂದೆ ಕುಲವೆಂದೇಳಿದೆ
ಹೇಳಿದಂತೆ ಆಚರಿಸಿ ಸ್ವಾತಂತ್ರ್ಯ ತಂದು ನೀಡಿದೆ
ನೀನು ಮತ್ತು ಚಾಚ ನೆಹರು ಕಟ್ಟಿದ ಈ ರಾಮರಾಜ್ಯ
ಗಾಳಿಗೆ ಎದುರೂ ಕಾಲ ಬಂತು
ಬುದ್ಧಿ ಹೇಳೂ ಬಾರೋ ತಾತ...

Rating
Average: 5 (1 vote)

Comments