ಅಂಜುತ್ತಾ ಬಾಳಿದರೆ ಬಾಳಲ್ಲೇನುಂಟು ಬರೇ ಮಣ್ಣಾಂಗಟ್ಟಿ!!!

ಅಂಜುತ್ತಾ ಬಾಳಿದರೆ ಬಾಳಲ್ಲೇನುಂಟು ಬರೇ ಮಣ್ಣಾಂಗಟ್ಟಿ!!!

ಮನಸಿನ ಆಸೆಗಳ ವ್ಯಕ್ತಪಡಿಸಲಾಗದ ಚಡಪಡಿಕೆಯೇ?
ನನಸಲ್ಲಿ ಆಗದ್ದನ್ನು ಕನಸಲ್ಲಿ ಪೂರೈಸಿಕೊಂಬಾಸೆಯೇ?

ಕನಸುಗಳ ನನಸಾಗಿಸುವ ಛಲವಿರಲಿ ಸದಾ ಮನದಲ್ಲಿ
ಆಸೆಗಳ ಕೊಲ್ಲುವ ಅಸಹಾಯಕತೆ ಇರದಿರಲಿ ಬಾಳಿನಲ್ಲಿ

ಅಂಜುತ್ತಾ ಬಾಳಿದರೆ ಬಾಳಲ್ಲೇನುಂಟು ಬರೇ ಮಣ್ಣಾಂಗಟ್ಟಿ
ಮುನ್ನುಗ್ಗೋ ಜೀವನಕೆ ನಮ್ಮೆದೆಯ ಮಾಡಿಕೊಳ್ಳಬೇಕು ಗಟ್ಟಿ

ಪ್ರಶ್ನೆಗಳ ಕೇಳಿ ಉತ್ತರಗಳಿಗೆ ಕಾಯದಂತಹ ಹಿಂಜರಿಕೆಯೇಕೆ
ಮನವೊಪ್ಪುವುತ್ತರಗಳು ದೊರಯದೆನ್ನುವ ಅಪನಂಬಿಕೆಯೇಕೆ

ತನ್ನ ಮೇಲಿರುವ ನಂಬಿಕೆ ತನ್ನವರೆನಿಸಿಕೊಂಡವರ ಮೇಲಿರಲಿ
ಮುಂದಿಟ್ಟ ಅಡಿಯನೆಂದಿಗೂ ಹಿಂದಕ್ಕೆಳೆಯುವಂತಾಗದಿರಲಿ

ನಂಬಿಕೆಯೇ ಜೀವನ ಅಪನಂಬಿಕೆ ನಮ್ಮನ್ನಾವರಿಸುವ ಸಾವು
ನಂಬಿಕೆಯಿಲ್ಲದಿರೆ ಜೀವನವನು ಹೇಗೆ ಸಾಗಿಸಬಹುದು ನಾವು
*********************************
ಮಂಡ್ಯ ಭವಾನಿಯವರ ಇದಕ್ಕೆ (http://sampada.net/blog/bhavanilokesh-mandya/28/01/2009/16131) ನನ್ನ ಉತ್ತರ

Rating
No votes yet

Comments