ವೇದದಲ್ಲಿ ಬೆಳಕಿನ ವೇಗ ೨

ವೇದದಲ್ಲಿ ಬೆಳಕಿನ ವೇಗ ೨

ಸವಿತೃ ರವರೆ ನಿಮ್ಮ ಲೇಖನವನ್ನು ಮುಂದುವರಿಸುವ ಯತ್ನ ಮಾಡಿದ್ದೇನೆ.

ಕಾಲದ ಅಳತೆ: ನಿಮಿಷ
ಮಹಾಭಾರತದಲ್ಲಿರುವ ಶಾಂತಿಪರ್ವದ ಎರಡನೆ ಭಾಗದ ಮೋಕ್ಷಧರ್ಮ ಪರ್ವದಲ್ಲಿ ನಿಮಿಷ ಎಂದರೆ ಕೆಳಕಂಡಂತೆ ಹೇಳಿದೆ.

೧೫ ನಿಮಿಷ = ೧ ಕಸ್ಥ
೩೦ ಕಶ್ತ = ೧ ಕಾಲ
೩೦.೩ ಕಾಲ = ೧ ಮಹೂರ್ಥ
೩೦ ಮಹೂರ್ಥ = ೧ ದಿನ-ರಾತ್ರಿ
ಒಂದು ದಿನದಲ್ಲಿ ೨೪ ಘಂಟೆಗಳು
ಒಂದು ದಿನದಲ್ಲಿ = ೩೦ * ೩೦ * ೩೦.೩ * ೧೫ = ೪೦೯೦೫೦ ನಿಮಿಷ

ಇಂದಿನ ಲೆಕ್ಕ:
೧ ದಿನ = ೬೦ ಸೆ * ೬೦ ನಿ * ೨೪ ಘಂಟೆ
೧ ದಿನ = ೮೬೪೦೦ ಸೆಕೆಂಡುಗಳು

ಲೆಕ್ಕ ೧:

೪೦೯೦೫೦ ನಿಮಿಷ = ೮೬೪೦೦ ಸೆಕೆಂಡುಗಳು
೧ ನಿಮಿಷ = ೦.೨೧೧೨ ಸೆಕೆಂಡುಗಳು

ದೂರದ ಅಳತೆ: ಯೋಜನ

ವಿಷ್ಣು ಪುರಾಣದ ಮೊದಲ ಪುಸ್ತಕದಲ್ಲಿ ಆಧ್ಯಾಯ ೬ರಲ್ಲಿ ಹೇಳಿರುವಂತೆ ಯೋಜನವೆಂದರೆ ಕೆಳಕಂಡಂತಿದೆ:

೧೦ ಪರಮಾಣು = ೧ ಪರಸೂಕ್ಶ್ಮ
೧೦ ಪರಸೂಕ್ಶ್ಮ = ೧ ತ್ರಸರೆನು
೧೦ ತ್ರಸರೆನು = ೧ ಮಹ್ರಜ
೧೦ ಮಹ್ರಜಸ = ೧ ಬಾಲಾಗ್ರ
೧೦ ಬಾಲಾಗ್ರ = ೧ ಲಿಖ್ಯಾ
೧೦ ಲಿಖ್ಯಾ= ೧ ಯೂಕ
೧೦ ಯೂಕ = ೧ ಯವೊದರ
೧೦ ಯವೊದರ = ೧ ಯವ
೧೦ ಯವ = ೧ ಅಂಗುಲ
೬ ಅಂಗುಲ = ೧ ಪಾದ
೨ ಪಾದ = ೧ ವಿತಸ್ತಿ
೨ ವಿತಸ್ತಿ = ೧ ಹಸ್ತ
೪ ಹಸ್ತ = ೧ ಧನು, ೧ ದಂಡ, ಪೌರುಶ , ೨ ನಾರಿಕಾ = ೬ ಅಡಿ
೨೦೦೦ ಧನು = ೧ ಗವೂತಿ = ೧೨೦೦೦ ಅಡಿ
೪ ಗವೂತಿ = ೧ ಯೊಜನ = ೯.೦೯ ಮೈಲು

ಲೆಕ್ಕ ೨:

ಶ್ಲೋಕ ಹೇಳುವುದು ಅರ್ಧನಿಮಿಷದಲ್ಲಿ ೨೨೦೨ ಯೋಜನಗಳು..... ಆದರೆ ಒಂದು ನಿಮಿಷಕ್ಕೆ ಎಷ್ಟು?

ಲೆಕ್ಕ ೧:
೧ ನಿಮಿಷ = ೦.೨೧೧೨ ಸೆಕೆಂಡುಗಳು

ಒಟ್ಟು ಮೈಲುಗಳು = ೨೨೦೨ * ೯.೦೯ (ಮೈಲು)
ಒಟ್ಟು ಮೈಲುಗಳು = ೨೦೦೧೬.೧೮ ಮೈಲುಗಳನ್ನು ೦.೧೦೫೬ ಸೆಕೆಂಡುಗಳು ಆದರೆ ಒಂದು ಸೆಕೆಂಡಿಗೆ ಎಷ್ಟು?
ಬೆಳಕಿನ ವೇಗ= ೨೦೦೧೬.೧೮ / ೦.೧೦೫೬
ಬೆಳಕಿನ ವೇಗ= ೧೮೯,೫೪೭.೧೬ ಮೈ / ಸೆ

ಇಂದಿನ ಆಧುನಿಕ ವೈಙ್ಞಾನಿಕ ಲೆಕ್ಕಾಚಾರ = ೧೮೬೦೦೦ ಮೈ /ಸೆ

ಮೇಲಿನ ಲೆಕ್ಕಾಚಾರ ನೋಡಿದರೆ ಸರ್ವಙ್ಞ ನ ಕೆಳಕಂಡ ವಚನ ನೆನಪಿಗೆ ಬರುತ್ತದೆ....

ಬೇಡ ಕಾಯದೆ ಕೆಟ್ಟ ಜೇಡ ನೇಯದೆ ಕೆಟ್ಟ
ನೊಡದಲೆ ಕೆಟ್ಟ ಕೃಷಿಕನು, ಸತಿಯ
ಬಿಟ್ಟಾಡಿದವ ಕೆಟ್ಟ ಸರ್ವಙ್ಞ

ಕೆಲವರ ಜವಾಭ್ದಾರಿ ಮತ್ತು ಕರ್ತವ್ಯ ನಿರ್ಲಕ್ಶ್ಯದಿಂದ, ಇಂದು ನಮ್ಮ ಜನರಿಗೆ ವೇದ ಉಪನಿಷತ್ತುಗಳೆಂದರೆ ಕೇವಲ ಕಥೆಗಳಾಗಿಬಿಟ್ಟಿವೆ ಮತ್ತೂ ಕೆಲವರಿಗೆ ಅದು ಏನು ಎಂದು ಕೂಡ ತಿಳಿದಿಲ್ಲ. ಇದರ ಪರಿಣಾಮದಿಂದ ನಾವು ಬೆಳಕಿನ ವೇಗ ಕಂಡುಹಿದಿದವನು ಯಾರೋ ಬೇರೆ ಎಂದೆ ತಿಳಿದಿದ್ದೇವೆ!!!!
ನಮ್ಮವನೇ ಅದ ಸಾಯನನನ್ನು ಮರೆತಿದ್ದೇವೆ ......

Rating
No votes yet

Comments