ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!

ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!

ಅಂತೂ ಇಂತೂ ಫೈರ್‌ಫಾಕ್ಸ್ /ಮೊಝಿಲ್ಲ ಅನುವಾದ ಮುಗಿದು ಫ್ರೀ ಆದೆ.
ಇದರಿಂದ ಆದ ಉಪಲಾಭ ಎಂದರೆ ಫೈರ್‌ಫಾಕ್ಸ್ ನ ಒಳಹೊರಗು ಗೊತ್ತಾಗಿ ,ಅದಕ್ಕೇ ಶಿಫ್ಟ್ ಆಗುತ್ತಿದ್ದೇನೆ. ಅಲ್ಲಿ ಟ್ಯಾಬ್‌ಯುತ ಜಾಲವೀಕ್ಷಣೆ ಇದೆ. ( ಈ ಬಗ್ಗೆ ನೀವೂ ತಿಳಿದುಕೊಳ್ಳಬಹುದು - ಕನ್ನಡದ ಮೂಲಕವೇ . ಅನುವಾದಗಳು ಪರೀಕ್ಷೆಗೊಳಪಟ್ಟು , ಫೈರ್‌ಫಾಕ್ಸ್ ಆವೃತ್ತಿ ಬಿಡುಗಡೆಯಾದಾಗ)
ಸಕಾಲಕ್ಕೆ ಡಿಜಿಟಲ್ ಲೈಬ್ರರಿ ಸಿಕ್ಕು ಅಲ್ಲಿನ ಪುಸ್ತಕ ನೋಡುತ್ತಿರುವೆ . ಅಷ್ಟಾವಧಾನಿಯಂತೆ ಅನೇಕ ಟ್ಯಾಬ್‌ಗಳಲ್ಲಿ ಬೇರೆ ಬೇರೆ ಪುಸ್ತಕ ತೆರೆದು ಓದುತ್ತಿರುವೆ .

ಒಂದರಲ್ಲಿ ಚಾರ್ಲ್ಸ್ ಡಿಕನ್ಸನ - ಆಲಿವರ್ ಟ್ವಿಸ್ಟ್ ' - ಮಾಸ್ತಿಯವರ ಅನುವಾದ ,
ಮತ್ತೊಂದರಲ್ಲಿ ಅಷ್ಟೋಪನಿಶತ್
ಮಗದೊಂದರಲ್ಲಿ ಬಿ.ಎಂ.ಶ್ರೀ ಯವರ ಅಶ್ವತ್ಥಾಮನ್ ನಾಟಕ
ಮತ್ತೂ ಒಂದರಲ್ಲಿ ಅಕ್ರೂರಚರಿತವನ್ನೂ
ಇನ್ನೂ ಒಂದರಲ್ಲಿ ಅಮರುಶತಕ ಎಂಬ ಶೃಂಗಾರಕಾವ್ಯವನ್ನೂ

ಹೀಗೆ ಇಂಗ್ಲೀಷ್ , ಹಳೆಗನ್ನಡ , ಸಂಸ್ಕೃತ , ಆಧ್ಯಾತ್ಮ , ಶೃಂಗಾರವನ್ನೂ ಹೆಚ್ಚು ಕಡಿಮೆ ಏಕಕಾಲಕ್ಕೆ ಓದುತ್ತಿದ್ದೇನೆ! .

Rating
No votes yet

Comments