ಭಗವದ್ಗೀತೆಯಲ್ಲೇನಿದೆ !!!!

ಭಗವದ್ಗೀತೆಯಲ್ಲೇನಿದೆ !!!!

ಒಬ್ಬ ವಯಸ್ಸಾದ ರೈತ ಬೆಟ್ಟದ ತಪ್ಪಲಿನಲ್ಲಿ ಜಮೀನು ನೋಡಿಕೊಂಡು ತನ್ನ ಮೊಮ್ಮಗನ ಜೊತೆ ವಾಸವಾಗಿದ್ದನು. ದಿನ ಬೆಳಗ್ಗೆ ಮುದುಕ ಬೇಗ ಎದ್ದು ಅಡಿಗೆ ಕೋಣೆಯಲ್ಲಿ ಭಗವದ್ಗೀತೆ ಓದುತ್ತಿದ್ದನು. ಒಂದು ದಿನ ಮೊಮ್ಮಗ ಮುದುಕನನ್ನು ಕುರಿತು ಈ ರೀತಿ ಕೇಳಿದನು. "ಅಜ್ಜ ನಾನು ನಿನ್ನ ಹಾಗೆ ಭಗವದ್ಗೀತೆಯನ್ನು ಓದಲು ಪ್ರಯತ್ನಿಸುತ್ತೇನೆ ಆದರೆ ನನಗೆ ಅದು ಅರ್ಥ ಆಗುವುದಿಲ್ಲ, ಸ್ವಲ್ಪ ಅರ್ಥ ಆಗಿರುವುದು ಸಹ ಪುಸ್ತಕ ಮುಚ್ಚಿದೊಡನೆಯೆ ಮರೆತು ಹೋಗುವುದು. ಭಗವದ್ಗೀತೆಯನ್ನು ಓದುವುದರಿಂದ ಆಗುವ ಪ್ರಯೋಜನವಾದರು ಏನು?
ಮುದುಕ ಕೆಂಡವನ್ನು ಒಲೆಗೆ ಹಾಕುತ್ತಿದ್ದವನು ಹಿಂತಿರುಗಿ ಮೊಮ್ಮಗನಿಗೆ ಹೀಗೆ ಹೇಳಿದನು "ಈ ಇದ್ದಿಲನ್ನು ತೊಡುವ ಬೆತ್ತದ ಬುಟ್ಟಿಯತ್ತ ಕೈ ತೋರಿಸಿ ಮಗೂ ನದಿಗೆ ಹೋಗು, ಬರುವಾಗ ಬುಟ್ಟಿಯ ತುಂಬಾ ನೀರು ತುಂಬಿಸಿಕೊಂಡು ಬಾ, ನೀನು ಬಂದನಂತರ ಹೇಳುವೆ" ಎಂದನು.
ಹುಡುಗನು ಅಜ್ಜ ಹೇಳಿದ ಹಾಗೆ ಮಾಡಿದನು ಆದರೆ ಅವನು ಮನೆಗೆ ಬರುವುದರಲ್ಲಿ ನೀರು ಎಲ್ಲಾ ಬುಟ್ಟಿಯಿಂದ ಸೋರಿಹೋಗಿತ್ತು. ಮುದುಕನು ನಕ್ಕು "ನೀನು ಮುಂದಿನ ಸಲ ಇನ್ನೂ ವೇಗವಾಗಿ ಬರಬೇಕು" ಅಂತ ಹೇಳಿ ಮತ್ತೆ ಹುಡುಗನನ್ನು ನದಿಗೆ ಬುಟ್ಟಿಯೊಂದಿಗೆ ಕಳಿಸಿಕೊಟ್ಟನು. ಈ ಬಾರಿ ಹುಡುಗ ವೇಗವಾಗಿ ಮನೆಗೆ ಓಡಿ ಬಂದನು, ಅದರೆ ಪುನಃ ಬುಟ್ಟಿ ಕಾಲಿಯಾಗಿತ್ತು.

ಏದುಸಿರು ಬಿಡುತ್ತ, ಅವನು ಅಜ್ಜನಿಗೆ ಬುಟ್ಟಿಯಲ್ಲಿ ನೀರು ತರಲು ಸಾಧ್ಯವೇ ಇಲ್ಲ ಅಂತ ಹೇಳಿ ಕೊಡ ತರಲು ಹೋದನು.
ಅಜ್ಜ "ನನಗೆ ಕೊಡದಲ್ಲಿ ನೀರು ಬೇಡ , ನನಗೆ ಬುಟ್ಟಿಯಲ್ಲಿಯೆ ನೀರು ಬೇಕು , ನೀನು ಸರಿಯಾಗಿ ಪ್ರಯತ್ನ ಪಡುತ್ತಾ ಇಲ್ಲ" ಎಂದು ಹೇಳಿ ಹುಡುಗ ಏನು ಮಾಡುತ್ತಾನೆ ಅಂತ ನೋಡಲು ಬಾಗಿಲಿನ ಬಳಿ ನಿಂತನು.
ಆ ಸಮಯಕ್ಕೆ ಹುಡುಗನಿಗೆ ಇದು ಸಾದ್ಯವೇ ಇಲ್ಲ ಎಂದು ತಿಳಿದರು ತನ್ನ ಅಜ್ಜನಿಗೆ ತೋರಿಸುವ ಸಲುವಾಗಿ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಬುಟ್ಟಿಯಲ್ಲಿ ನೀರು ತುಂಬಿಸಿಕೊಂಡು ಓಡಿ ಬಂದನು, ಆದರೆ ಈ ಬಾರಿಯು ಮನೆಗೆ ಹಿಂತಿರುಗುವ ಮುನ್ನವೇ ನೀರೆಲ್ಲ ಬುಟ್ಟಿಯಿಂದ ಸೋರಿ ಹೋಗಿತ್ತು.
ಎದುಸಿರು ಬಿಡುತ್ತ "ತಾತಾ ಇನ್ನು ನನ್ನಿಂದ ಆಗುವುದಿಲ್ಲ, ನಾನು ನದಿಗೆ ಹೊಗುವುದಿಲ್ಲ" ಅಂತ ಹೇಳಿದನು.
ಮುದುಕ ಹೇಳಿದನು "ನೀನು ಈವರೆಗೆ ಮಾಡಿದ್ದು ಉಪಯೊಗವಿಲ್ಲದ್ದು ಎಂದು ಯೋಚಿಸುತ್ತಿದ್ದೀಯ, ಈ ಬುಟ್ಟಿಯನ್ನು ನೋಡು". ಹುಡುಗ ಬುಟ್ಟಿಯನ್ನು ನೋಡಿದನು, ಮೊದಲ ಬಾರಿಗೆ ಅವನಿಗೆ ಬುಟ್ಟಿಯಲ್ಲಾದ ಬದಲಾವಣೆಯು ಕಂಡಿತು. ಇದ್ದಿಲಿನಿಂದ ಕಪ್ಪಾಗಿದ್ದ ಬುಟ್ಟಿಯು ಈಗ ಒಳಗು ಹೊರಗು ಸ್ವಚ್ಚವಾಗಿರುವುದು ಕಂಡಿತು.
"ಮಗೂ ಭಗವದ್ಗೀತೆ ಓದುವುದರಿಂದ ಹೀಗೆಯೇ ಆಗುವುದು. ನಿನಗೆ ಎಲ್ಲವೂ ಅರ್ಥ ಆಗದೆ ಇರಬಹುದು ಅಥವ ಮರೆತು ಹೋಗಬಹುದು, ಆದರೆ ಓದುವುದರಿಂದ ನೀನು ಒಳಗು ಹೊರಗು ಬದಲಾವಣೆ ಹೊಂದುತ್ತೀಯ" ಎಂದು ಹೇಳಿದನು.

ಮೂಲ: ಇ-ಮೇಯ್ಲ್

Rating
No votes yet

Comments