ಬಸಳೆ
ನಮಸ್ಕಾರ,
ನಿಮಗೆ ’ಬಸಳೆ’ ಯ ಪರಿಚಯ ಇದೆಯೆ? ನೀವು ದಕ್ಷಿಣ ಕನ್ನಡದವರಾಗಿದ್ದರೆ, ನಿಮಗೆ ಗೊತ್ತಿರದಿರುವ ಸಾಧ್ಯತೆಯೇ ಇಲ್ಲ. ಬಸಳೆಯೆಂದರೆ, ದಕ್ಷಿಣ ಕನ್ನಡದ (ದ.ಕ) ಒಂದು ಪ್ರಸಿದ್ಢ ಸೊಪ್ಪು ತರಕಾರಿ. ನನ್ನ ಹಿರಿಯ ಸಹೋದ್ಯೋಗಿ ಮಿತ್ರ ರಾಘವೇಂದ್ರ ರಾವ್ ಬೆಂಗಳೂರಿನಲ್ಲಿ ದಕ್ಷಿಣ ಕನ್ನಡಿಗರನ್ನು ಗುರುತು ಹಿಡಿಯಲು ಹಿತ್ತಿಲಿನಲ್ಲಿ ಬಸಳೆಯಿದೆಯೇ ಎಂದು ನೋಡುತ್ತಾರಂತೆ!.
ಒಳ್ಳೆಯ ಜಾತಿಯ ಬಸಳೆ ತುಂಬಾ ಮಾಂಸಲವಾಗಿರುತ್ತವೆ (ಚಿತ್ರದಲ್ಲಿ ತೋರಿಸಿರುವಂತೆ). ಬಸಳೆ ತುಂಬಾ ಅಸಳೆ. ಅಸಳೆಯೆಂದರೆ ದ.ಕ ಭಾಷೆಯಲ್ಲಿ ತುಂಬಾ ಮೃದು ಎಂದರ್ಥ. ಮೇಲ್ಕಾಣಿಸಿರುವುದು ನನ್ನಮ್ಮನ ವಿಶೇಷ ಆರೈಕೆಯಲ್ಲಿ ಬೆಳೆದ ಬಸಳೆ ಬೇರೆ..
ಪತ್ರೊಡೆ (ದ.ಕ ದ ಇನ್ನೊಂದು ಪ್ರಸಿದ್ಧ ತಿಂಡಿ) ಮಾಡಲು ಕೆಸುವಿನ ಬದಲಿಗೆ ಬಸಳೆಯನ್ನೂ ಬಳಸಬಹುದೆಂದು ದ.ಕ ದಲ್ಲಿಯೇ ಕೆಲವರಿಗೆ ತಿಳಿದಿಲ್ಲ. ಒಮ್ಮೆ ಮಾಡಿ ನೋಡಿ.
XML parser ನ ಗುರುತಿಸಲಾಗದ ಕೆಟ್ಟ ಖಾಯಿಲೆಯಿಂದ office ನಲ್ಲಿ ನರಳುತ್ತಿದ್ದೇನೆ. ನಾಳೆ ಬರೆಯುತ್ತೇನೆ ಸಾಧ್ಯವಾದರೆ..
ವಸಂತ್ ಕಜೆ
Rating
Comments
Re: ಬಸಳೆ
In reply to Re: ಬಸಳೆ by rajeshks
Re: ಬಸಳೆ