ಚಾರಿತ್ರ್ಯ-ವಧೆ ನಿಲ್ಲಲಿ.

ಚಾರಿತ್ರ್ಯ-ವಧೆ ನಿಲ್ಲಲಿ.

ಸಂಪದ ದಂತ "ಸಾರ್ವಜನಿಕ ವೇದಿಕೆ " ಅಂತ ಕರೆಯಬಹುದಾದ ?! ತಾಣದಲ್ಲಿ ನಮ್ಮ ನಾಡಿನ ಹಿರಿಯ, ಸಹೃದಯ, ನಿಜವಾದ ಅರ್ಥದಲ್ಲಿ ಜಾತ್ಯಾತೀತ, ದಲಿತ (ಮತ್ತು ಇಡೀ ಸಮಾಜದ ) ಕಾಳಜಿಯ ವಿದ್ವಾಂಸರ ಬಗ್ಗೆ ತಪ್ಪು ತಿಳುವಳಿಕೆ ಬರುವಂತ ಲೇಖನ ಬಂತು.
ಓದುಗರೂ ಸಹಾ ಲೇಖನದ ಅಂಶಗಳ authenticity ಚೆಕ್ ಮಾಡದೆ ಲೇಖನವನ್ನೇ ಆಧಾರವಾಗಿಟ್ಟು ಕೊಂಡು ಮನಸಿಗೆ ಬಂದಂತೆ ಬಸವರಾಜು ಅವ್ರ ಬಗ್ಗೆ ಸಿಟ್ಟು ತೋಡಿ ಕೊಂಡರು.
ಬಸವರಾಜು ಅವ್ರ ಮೂಲ ಭಾಷಣವನ್ನು ಒಮ್ಮೆಯೂ ಓದದೆ, ಅವರ ಭಾಷಣವನ್ನು ನೇರವಾಗಿ ಕೇಳದೆ , ಒಂದು ಪತ್ರಿಕೆಯ "interpretation" ಅನ್ನು ಆಧಾರವಾಗಿ ಇಟ್ಟುಕೊಂಡು ಬರೆದ ಲೇಖನ ದ ಅಭಿರುಚಿ ನನಗಂತೂ ಹಿಡಿಸಲಿಲ್ಲ.
ಈ ಬಗ್ಗೆ ನನ್ನ ಎರಡು ಮಾತು.
ಲೇಖನದ ಶೀರ್ಷಿಕೆ " ಎಲ್ಲಿಯವರೆಗೆ ಈ ದ್ವೇಷ? ಯಾರ ಪಾಪಕ್ಕೆ?" .
http://sampada.net/article/16520
ಇಲ್ಲಿ ಲೇಖಕರ ಮನಸ್ತಿತಿ ಅರ್ಥ ಆಗುತ್ತೆ. ಅವರ ಬ್ರಾಹ್ಮಣ ಭಕ್ತಿ ತಿಳಿಯುತ್ತೆ. ಅಲ್ಲ ಬ್ರಾಹ್ಮಣ ವರ್ಗವನ್ನು ದ್ವೇಷಿಸುವುದು ತಪ್ಪು , ಕೀಳು ಅಂತ ಹೇಳಲಿ ನಾನು ಒಪ್ಪಿಕೋತೀನಿ. ಆದರೆ "ಪಾಪ" ಅಂತಾರಲ್ಲ.. ಅವ್ರ ವೈಚಾರಿಕತೆಗೆ ಏನು ಹೇಳಬೇಕು. (ದಲಿತರ ಬಗ್ಗೆ ಯಾರಾದರೂ ದ್ವೇಷ ಕಾರಿಕೊಂಡಿದ್ದರೆ ಇವರು ಪಾಪ ಅಂತ ಬಳಸುತ್ತಿದ್ದರೋ ಅತ್ವ ಬೇರೆ ಪದ ಬಳಸುತ್ತಿದ್ದರೋ ಅವರೇ ಹೇಳಬೇಕು.) ಇನ್ನು ಮುಂದಾದರೂ ಎಲ್ಲರೂ ಮನುಷ್ಯರೇ., ಯಾರೂ "ಮೇಲಲ್ಲ, ಕೀಳಲ್ಲ" ಅಂತ ನಮ್ಮ ಅಮೋಘ ಲೇಖಕರ sub conscious ಗೆ ಹೊಳೆದರೆ ಇನ್ನೂ ಆರೋಗ್ಯಕರವಾದ ಬರಹಗಳು ಹೊರ ಬರಲು ಸಾಧ್ಯ.

.....
ನನಗೆ ಬ್ರಾಹ್ಮಣ ಸಮಾಜದ ಮೇಲೆ ತುಂಬ ಅಭಿಮಾನ ಇದೆ. ನಮ್ಮ ಕನ್ನಡ ಲೋಕಕ್ಕೆ / ಸಮಾಜಕ್ಕೆ ಅನೇಕ ಪ್ರತಿಭಾವಂತರನ್ನು ಕೊಟ್ಟಂತಹ ಸಮಾಜ ಅದು. ನಾನಂತೂ ಅದು ತುಂಬ ಪ್ರತಿಭಾ ಶಾಲಿಯಾದ, ಬಲಿಷ್ಟ ಸಮಾಜ ಅಂತಾನೆ ಅಂದು ಕೊಂಡಿರುವುದು.
ಆದರೆ
ಬ್ರಾಹ್ಮಣ ದ್ವೇಷ ಅಂತ ಕಿವಿ ಮೇಲೆ ಬಿದ್ದಾಕ್ಷಣ , ಸಿಕ್ಕಿದ್ದೇ ಚಾನ್ಸು ಅಂತ ತಾವು ದುರ್ಬಲರು ,ನಮ್ಮ ಮೇಲೆ ಎಲ್ಲರೂ ಸವಾರಿ ಮಾಡ್ತಾರೆ ಅಂತ ಕರುಣೆ ಬರೋ ತರೋ ಬರ್ಕೋ ಳ್ಳೋದು, ಒಬ್ಬಂಟಿಯಾಗಿದ್ದಾಗ ಈ ರೀತಿ ದುರ್ಭಲ .. , ಅಮಾಯಕ ಅಂದುಕೊಳ್ಳುವುದು, ಅದಕ್ಕೆ ಅನೇಕರು ಸಂತಾಪ ನುಡಿಯೋದು.. ಗುಮ್ಪಾಗಿದ್ದಾಗ ನಾವು ಇಡೀ ಸಮಾಜಕ್ಕೆ ದಾರಿ ದೀಪಕರು ಅಂತೋ ಶಂಖ ಊದುತ್ತ , ಸರಿ ಕಾಣಲಿಲ್ಲ.
ನನಗೆ ಗೊತ್ತು ಕಟು ಟೀಕೆಗಳು ಬರುತ್ತವೆ ಅಂತ. ಆದರೆ ನನಗೆ ಅನ್ನಿಸಿದ್ದನು ಇಲ್ಲಿ ಬರೆದಿದ್ದೇನೆ. ,
ಅಷ್ಟಕ್ಕೂ ದಲಿತ ಪ್ರೇಮವನ್ನು , ಬ್ರಾಹ್ಮಣ ದ್ವೇಷವೆಂದು ಅರ್ಥೈಸಿಕೊಳ್ಳುವದು ತಪ್ಪು. ಅದು ಕಾಳಜಿ ಅಷ್ಟೆ.
ಕೆಲ್ಸಕ್ಕೆ ಬಾರದ, ಮೂಲ ಭಾಷಣದಲ್ಲಿ ಇರದ ,ಬ್ರಾಹ್ಮಣ - ದಲಿತ issue, ತಗೊಂಡು ಇಲ್ಲಿ ಸಂಪದದಲ್ಲಿ ರಾಡಿ ಮಾಡಿದ್ದಾರೆ... ಸರಿ... ಆದರೆ ಈಗ ಮತ್ತೊಮ್ಮೆ ಅವರ ಭಾಷಣವನ್ನು ಓದಿ , ಆ ಭಾಷಣದಲ್ಲಿನ ವಿದ್ವತ್ತನ್ನು / ಸಹೃದಯತೆಯನ್ನು / ಕನ್ನಡ ಕಾಳಜಿಯನ್ನು ನಮಗೆ ಉಣಿಸಬೇಕಾಗಿ ತಮ್ಮಲ್ಲಿ ಕಳಕಳಿಯ ಕೋರಿಕೆ. ಆಗಿರುವ ಪ್ರಮಾದವನ್ನು ತಿದ್ದುವುದು ಅವರ ಜವಾಬ್ಧಾರಿ ಕೂಡ ಅನ್ನುವುದು ನನ್ನ ಅನಿಸಿಕೆ . ಇಷ್ಟರ ಮೇಲೆ ಅವರಿಗೆ ಬಿಟ್ಟದ್ದು.
ಅವರ ಭಾಷಣದ ಮೂಲ ಪ್ರತಿಗೆ ಇಲ್ಲಿ ಚಿಟುಕಿಸಿ.
http://www.kendasampige.com/article.php?id=2042
ಅತ್ವ
http://thatskannada.oneindia.in/literature/sammelana/chitradurga/2009/0204-basavaraju-presidential-address-full-text.html
ಸಹೃದಯರ ಚಾರಿತ್ರ್ಯ ವಧೆ ನನ್ನ ಕೈಲ್ಲಿ ಸಹಿಸಿಕೊಳ್ಳಲು ಆಗಲಿಲ್ಲ. ಅದಕ್ಕೆ ನನ್ನ ಚಿಕ್ಕ ಪ್ರತಿಕ್ರಿಯೆ. ಬಹುಶ ಇದು ತನ್ನ ಮಿತಿಯನ್ನು ದಾಟಿಲ್ಲ ಅಂದುಕೊಂಡಿದ್ದೇನೆ.

Rating
No votes yet

Comments