ಓದಿದ್ದು ಕೇಳಿದ್ದು ನೋಡಿದ್ದು-166 ನಿಟ್ಟೆ ಗ್ನು/ಲಿನಕ್ಸ್ ಹಬ್ಬ

ಓದಿದ್ದು ಕೇಳಿದ್ದು ನೋಡಿದ್ದು-166 ನಿಟ್ಟೆ ಗ್ನು/ಲಿನಕ್ಸ್ ಹಬ್ಬ

ಗ್ನು/ಲಿನಕ್ಸ್ ಹಬ್ಬದ ಮೂರನೇಯ ಆವೃತ್ತಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಿತು.ಲಿನಕ್ಸ್ ಹಬ್ಬ ನಡೆದ ಸಭಾಂಗಣದ ಹೆಸರೇ ಸಂಭ್ರಮ! ನೂರೆಪ್ಪತ್ತೈದರಷ್ಟು ಜನ(ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳು) ನೋಂದಾಯಿಸಿಕೊಂಡರು.

ವೇದಿಕೆಯಲ್ಲಿ ಯಾರೂ ಆಸೀನರಾಗದ ಸರಳ ಶೈಲಿಯಲ್ಲಿ ಹಬ್ಬದ ಆರಂಭ.ಕಾಲೇಜಿನ ಪ್ರಾಂಶುಪಾಲರಾದ ಡಾ ಎಸ್ ವೈ ಕುಲಕರ್ಣಿಯವರು, "ಹಬ್ಬ" ಎನ್ನುವ ಪದ ಬಳಕೆ ತನಗೆ ಇಷ್ಟವಾಯಿತು.ಕಲಿಕೆಯು ಸಂಭ್ರಮದ ವಾತಾವರಣದಲ್ಲೆ ನಡೆದರೆ ಸಫಲವಾಗುತ್ತದೆಂದರು. ಉಪಪ್ರಾಂಶುಪಾಲರಾದ ಡಾ ನಿರಂಜನ್ ಚಿಪ್ಳೂಣ್‌ಕರ್ ಅವರು ಹಬ್ಬದಲ್ಲಿ ಲಿನಕ್ಸ್ ಔತಣವನ್ನುಣ್ಣಿ ಎಂದು ಆಶಿಸಿದರೆ,ಕಾರ್ಯಕ್ರಮ ಆಯೋಜಿಸಿದ ಐ ಎಸ್ ವಿಭಾಗದ ಮುಖ್ಯಸ್ಥ ಪ್ರೊ.ಯುವರಾಜು ಬಿ ಎನ್ ಅವರು ಸ್ವಾಗತಿಸಿದರು.ನಿಹಾ ನೂರ್ ಶೇಖ್ ಕಾರ್ಯಕ್ರಮವನ್ನು ನಿರೂಪಿಸಿದರು

ಹಿಂದಿನ ದಿನವೇ ನಿಟ್ಟೆಗೆ ಬಂದು ಸ್ವಯಂಸೇವಕರ ತಂಡಕ್ಕೆ ತರಬೇತಿ ನೀಡಿ ಅಣಿಗೊಳಿಸಿದ ಹರಿಪ್ರಸಾದ್ ನಾಡಿಗ್ ಮತ್ತು ಓಂ ಶಿವಪ್ರಕಾಶ್ ಅವರ ಜತೆ ರವಿಶಂಕರ್,ವಿಜಯ ರಾಘವನ್,ಶ್ರೀನಿಧಿ,ಮಂಜುನಾಥ್,ಸುಧೀಂದ್ರ,ಅರವಿಂದ ವಿ ಕೆ(ತಡವಾಗಿ ಬಂದರು) ಏರಿಕೊಂಡು ಲಿನಕ್ಸ್ ಹಬ್ಬದಡುಗೆ ಬಡಿಸಿದರು.

ಇಪ್ಪತ್ತೈದು ಜನ ಲ್ಯಾಪ್‌ಟಾಪ್ ತಂದಿದ್ದರು. ಲಿನಕ್ಸ್ ಸಿಡಿಯನ್ನು ಲೈವ್ ಸಿಡಿ ಆಗಿ ಬಳಸಿಕೊಂಡು ಅದನ್ನು ಅನುಸ್ಥಾಪಿಸದೆ ಬಳಸುವ ಬಗೆ ತೋರಿಸುವುದರ ಜತೆ ಕಾರ್ಯಕ್ರಮದ ಆರಂಭ.ನಂತರ ಲಿನಕ್ಸ್ ಅನುಸ್ಥಾಪಿಸಿ ತೋರಿಸಿ,ಲ್ಯಾಪ್‌ಟಾಪ್ ಇದ್ದವರಲ್ಲಿ ಅನುಸ್ಥಾಪಿಸಲು ನೆರವಾದವರು ಸ್ವಯಂಸೇವಕರ ತಂಡ.ವಾಸುದೇವ್,ಮಂಗೇಶ್,ಪವನ್,ದೀಪಕ್ ರಾಜ್, ಸುಶ್ರುತ್ ತೆಂಡೂಲ್ಕರ್,ಪ್ರಶಾಂತ್,ರತನ್,ಪ್ರಭವ್ ಇವರನ್ನೊಳಗೊಂಡಿತ್ತು.

ಕಾರ್ಯಕ್ರಮದ ಹೈಲೈಟುಗಳು:

*ಸಂಜೆ ಆರು  ಗಂಟೆಯ ವರೆಗೂ ಕಾರ್ಯಕ್ರಮ ನಡೆಯಿತು.

*ಆಗಲೂ ನೂರರ ಸಮೀಪ ಜನರು ಉತ್ಸಾಹದಿಂದ ಭಾಗವಹಿಸಿದರು.

*ಹೆಸರು ನೋಂದಾಯಿಸದವರೂ ಹಬ್ಬಕ್ಕೆ ಆಗಮಿಸಿ ಮಾಹಿತಿ ಪಡೆದರು.

*ಕಾಲೇಜಿನ ಸರ್ವರಿನಲ್ಲಿ ಇಪ್ಪತ್ತಾರು ಜಿಬಿಯಷ್ಟು ಡೆಬಿಯನ್  ಲೆನ್ನಿ ಓಎಸ್ ಮತ್ತು ಪ್ಯಾಕೇಜುಗಳ ಭಂಡಾರವನ್ನು ದಾಸ್ತಾನು ಮಾಡಲಾಯಿತು.

*ಸಿಡಿಗೆ "ಚಿಗುರು" ಎಂಬ ಹೆಸರು ಇತ್ತು.

*ತಾನಿದುವರೆಗೂಭಾಗವಹಿಸಿದಕಾರ್ಯಕ್ರಮಗಳ ಪೈಕಿ ಅತಿ ಹೆಚ್ಚು ಉಪಯುಕ್ತ ಕಾರ್ಯಕ್ರಮವಿದು ಎನ್ನುವ ಪ್ರತಿಕ್ರಿಯೆ ವಿದ್ಯಾರ್ಥಿಗಳಿಂದ ಕೇಳಿ ಬಂತು.

*ಲಿನಕ್ಸ್ ಅನುಸ್ಥಾಪಿಸುವುದನ್ನು ತೋರಿಸುವ ಮೊದಲ ಭಾಗದ ಕಾರ್ಯಕ್ರಮ ಮುಗಿಯುವ ವೇಳೆಗೇ ಸುಸ್ತಾದ ಸಭಿಕರೂ ಇದ್ದರು-ಅವರ ಸಂಖ್ಯೆ ಅತ್ಯಲ್ಪ.

*ಹಬ್ಬದಲ್ಲಿ ಭಾಗವಹಿಸಿದವರೇ ಮುಂದಿನ ಹಬ್ಬವನ್ನು ನಡೆಸಿಕೊಡಬೇಕು ಎನ್ನುವುದು ಹರಿಪ್ರಸಾದ್ ನಾಡಿಗ್ ಅವರ ಕಳಕಳಿಯಾಗಿತ್ತು

*ಸಂಪನ್ಮೂಲ ವ್ಯಕ್ತಿಗಳು ವಿಷಯದ ತಿಳುವಳಿಕೆಯಲ್ಲಿ,ಪ್ರಸ್ತುತ ಪಡಿಸುವ ರೀತಿಯಲ್ಲಿ ತಮ್ಮೊಳಗೆ ಪೈಪೋಟಿ ನಡೆಸುವಂತೆ ವ್ಯಕ್ತವಾಯಿತು.

*ಕಾಲೇಜಿನ ಸುಂದರ ಪರಿಸರ,ಅಚ್ಚುಕಟ್ಟಾದ ವ್ಯವಸ್ಥೆಗಳ ಬಗ್ಗೆ ಪ್ರಶಂಸೆ ಕೇಳಿಬಂತು.

---------------------------------------------------------------------------------------

ನಕ್ಷೆ ತಯಾರಿಸಲು ನೆರವಾಗಿ

ಹಿಂದು

(ಹಿಂದು)

-----------------------------------------------------

ಉಳಿತಾಯ ಪ್ರವೃತ್ತಿ ಹೆಚ್ಚಿದರೆ ಆಪತ್ತು!

---------------------------------------------------

toi

(Asian Age)

--------------------------------------------------------------------

ಒಪ್ಪಿಕೋ ಚಳುವಳಿಯ ಸುಂದರಲಾಲ್ ಬಹುಗುಣ

-----------------------------------------------------------------------

ಪ್ರಜಾವಾಣಿ

ಒಂದು ರುಪಾಯಿಗೂ ಕೆಳಗಿಳಿದ ಶೇರುಗಳಿವೆ

----------------------------------------------------------------

ವ್ಯಂಗ್ಯ ನುಡಿ

"ಕನ್ನಡಕ್ಕಾಗಿ ಹೋರಾಡುವ ಬದಲು, ಊಟ-ಕಿಟ್‌ಗಾಗಿ ಹೋರಾಡಬೇಕಾಯಿತು!"(ದುರ್ಗ ಸಾಹಿತ್ಯ ಸಮ್ಮೇಳನದಲ್ಲಿ)

--------------------------------------------------------------------------

ಸಾಹಿತ್ಯ-ಸಂವಾದ

--------------------------------------------------------------------------

ಸಂಧ್ಯಾ ಪೈ ಪುಸ್ತಕ ಬಿಡುಗಡೆ

ಉದಯವಾಣಿ

ಪುಸ್ತಕ ಬಿಡುಗಡೆ

---------------------------------------

ಪದಸಂಪದ

-------------------------------------

 

ಪಬ್ಬಬಾರುಗಳ ಮೇಲೆ ಪೊಲೀಸರ ಕಣ್ಣು

-----------------------------------------------

ಹುಬ್ಳೀಕರ್

---------------------------------------------------

 

Rating
No votes yet

Comments