ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ

ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ

ಮೊನ್ನೆ ಅಂದರೆ 24ನೇ ತಾರೀಖು ಸಾಗರಕ್ಕೆ ಬೇಟಿ ನೀಡಿದ್ದೆ. ಬೆಂಗಳೂರಿನಿಂದ ರೈಲಿನಲ್ಲಿ ಶಿವಮೊಗ್ಗ ಎಕ್ಸ್ ಪ್ರೆಸ್ ನಲ್ಲಿ ಹೊರಟೆ ರೈಲು ಬೆಳಿಗ್ಗೆ 5:30ಗೆ ಹೋಗಬೇಕಾದದ್ದು 2 ಗಂಟೆ ತಡವಾಗಿ ಹೋಯಿತು, ಶಿವಮೊಗ್ಗ ಹತ್ತಿರ ಹೋಗುತ್ತಿದ್ದಾಗೆ ಜಿಟೆ ಜಿಟೆ ಮಳೆ ಬೀಳುತ್ತಿತ್ತು ಆ ಮಳೆಯಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರೆ ಅದರ ಮಜಾನೆ ಬೇರೆ. ಶಿವಮೊಗ್ಗ 7:30 ಗಂಟೆಗೆ ತಲುಪಿದೆ ಅಲ್ಲಿಂದ ಸಾಗರದ ಕಡೆ ಪ್ರಯಾಣ ಬೆಳೆಸಿದೆ. ಸಾಗರ ಶಿವಮೊಗ್ಗ ಜಿಲ್ಲೆಯ ಒಂದು ಪಟ್ಟಣ ಮತ್ತು ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ 360 ಕಿ.ಮೀ ದೂರದಲ್ಲಿರುವ ಸಾಗರ ಪಟ್ಟಣವು ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ತವರಾಗಿದೆ. ಪ್ರಕೃತಿಪ್ರಿಯರಿಗೆ ಮತ್ತು ಚಾರಣಪ್ರಿಯರಿಗೆ ಸಾಗರ ಸ್ವರ್ಗ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ. ಸಾಗರದಲ್ಲಿ ಬೆಳಗಿನ ತಿಂಡಿ ಮುಗಿಸಿ ಸಾಗರ‌ದಿಂದ ಹೆಗ್ಗೋಡುಗೆ ಹೊರಟೆ ಸಾಗರ ತಾಲೂಕಿನ ಜನ ಕಲಾರಸಿಕರು ಮತ್ತು ಸಾಹಿತ್ಯಾರಾಧಕರು. ಬಹಳ ಜನ ಕಲಾವಿದರನ್ನ, ಸಾಹಿತಿಗಳನ್ನ ರಾಜ್ಯಕ್ಕೆ ಸಾಗರ ತಾಲೂಕು ನೀಡಿದೆ. ಸಾಗರದ 7 ಕಿ.ಮೀ ದೂರದಲ್ಲಿ ಕೆ.ವಿ.ಸುಬ್ಬಣ್ಣ ಕಟ್ಟಿ ಬೆಳೆಸಿದ ನೀನಾಸಂ (ನೀಲಕಂಠೇಶ್ವರ ನಾಟ್ಯ ಸಂಘ) ತನ್ನ ತಿರುಗಾಟಗಳಿಂದಾಗಿ ಬಹು ಪ್ರಸಿದ್ದಿಯನ್ನು ಪಡೆದಿದೆ ನಾನು ಇದೇ ನೀನಾಸಂ ನಲ್ಲಿ ಉಳಿದುಕೊಂಡೆ ಅಲ್ಲಿ 20 ಜನ ಇದ್ಯಾರ್ಥಿಗಳು ಓದುತ್ತಿದ್ದರು ಅಂದರೆ ರಂಗಭೂಮಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಿನಾಸಂನಿಂದ ತರಬೇತಿ ಪಡೆದ ಎಷ್ಟೋ ಜನರು ಈಗ ಚಲನ ಚಿತ್ರಗಳಲ್ಲಿ ಮತ್ತು ದಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲಿ ಹೋಗುತ್ತಿದ್ದಾಗೆ ಜಿಟಿ ಜಿಟಿ ಮಳೆ ಬೀಳುತ್ತಿದ್ದರಿಂದ ಹಾಗೂ ಮಳೆಯಲ್ಲಿ ನೆಂದಿದ್ದರಿಂದ ಒಂದು ಕಪ್ ಕಶಾಯ ಕುಡಿದು ವಿಶ್ರಾಂತಿಗೆ ಹೊರಟೆ. ರಾತ್ರಿ ವಿದ್ಯಾರ್ಥಿಗಳು ಯಕ್ಷಗಾನ ಕಳೆಯುತ್ತಿದ್ದರು. ಯಕ್ಷಗಾನ ಸಾಗರ ತಾಲೂಕಿನಲ್ಲಿ ಬಹಳ ಪ್ರಸಿದ್ಧವಾದ ಕಲಾಪ್ರಕಾರ. ಬೇಸಿಗೆಯ ಕಾಲದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಯಕ್ಷಗಾನ ಮೇಳದ ಪ್ರದರ್ಶನ ಏರ್ಪಾಡಾಗಿರುವುದನ್ನು ಕಾಣಬಹುದು.ಅದನ್ನು ನೋಡುತ್ತಾ ಕಾಲ ಕಳೆದು ಮತ್ತೆ ಊಟ ಮುಗಿಸಿ ಕೊಠಡಿಗೆ ಹೋಗಿ ಮಲಗಿದೆ. ಬೆಳಿಗ್ಗೆ ಎದ್ದು ನೀನಾಸಂ ಬಗ್ಗೆ ತಿಳಿದುಕೊಂಡು ನಂತರ ಒಮ್ಮೆ ಸುತ್ತಿ ಅಲ್ಲಿಂದ ಸುತ್ತಲು ಹೊರಟೆ.
ಅಲ್ಲಿಂದ ಜೋಗ್ ನೋಡಲು ಹೋದೆ ಭಾರತದಲ್ಲೇ ಅತ್ಯಂತ ಎತ್ತರವಾದ ಮತ್ತು ಜಗತ್ತಿನಲ್ಲಿ 27ನೆಯ ಸ್ಥಾನದಲ್ಲಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತವು ಸಾಗರದಿಂದ 29 ಕಿ.ಮೀ ಅಂತರದಲ್ಲಿದೆ. ಶರಾವತಿ ನದಿಯು ರಾಜ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಕವಲುಗಳಾಗಿ 273ಮೀ ಎತ್ತರದಿಂದ ದುಮುಕುವ ಜೋಗ ಜಲಪಾತಕ್ಕೆ ಸಾಗರದಿಂದ ಪ್ರತೀ 5 ನಿಮಿಷಕ್ಕೆ ಒಂದರಂತೆ ಬಸ್ಸಿನ ವ್ಯವಸ್ಥೆ ಇದೆ.
ಅಲ್ಲಿಂದ ಇಕ್ಕೇರಿ ಹೋರಟೆ, ಇಕ್ಕೇರಿ ಹೊಯ್ಸಳ ಶೈಲಿಯ ಸುಂದರವಾದ ಕೆತ್ತನೆಗಳಿರುವ ಕೆಳದಿ ಸಂಸ್ಥಾನಕ್ಕೆ ಸೇರಿದ ದೇವಸ್ಥಾನವಿರುವ ಇಕ್ಕೇರಿ ಪಟ್ಟಣ ಸಾಗರದಿಂದ 5 ಕಿ.ಮೀ. ದೂರದಲ್ಲಿದೆ. ಬಸ್ಸು, ಟ್ಯಾಕ್ಸಿ ಅಥವ ಆಟೋಗಳಿಂದ ಸುಲಭವಾಗಿ ಇಕ್ಕೇರಿಯನ್ನು ತಲುಪಬಹುದು.
ಮಾರನೆದಿನ ಕೆಳದಿ ಕಡೆ ಹೋದೆ ಕೆಳದಿ ರಾಜವಂಶದಿಂದ ಪ್ರಸಿದ್ಧವಾದ ಕೆಳದಿ ಪಟ್ಟಣವು ಸಾಗರದಿಂದ 7 ಕಿ.ಮೀ ದೂರದಲ್ಲಿದೆ. ಕೆಳದಿ ಸಂಸ್ಥಾನದ ಅರಮನೆ, ಸುಂದರ ಕೆತ್ತನೆಗಳಿರುವ ದೇವಸ್ಥಾನ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯ ಈ ಊರಿನ ಆಕರ್ಷಣೆಗಳು.
ಸಾಗರದ ಜನ ಸಾಮಾನ್ಯವಾಗಿ ಶಾಂತಿಪ್ರಿಯರು ಮತ್ತು ಸ್ನೇಹಪ್ರಿಯರು. ಹೆಚ್ಚಿನ ಜನರು ಜೀವನಕ್ಕೆ ವ್ಯವಸಾಯವನ್ನ ಅವಲಂಬಿಸಿದ್ದಾರೆ. ಅಡಿಕೆ ಸಾಗರದ ಪ್ರಮುಖ ಬೆಳೆ. ಭತ್ತ, ಕಬ್ಬು, ವೆನಿಲ್ಲಾ ಮತ್ತಿತರ ಬೆಳೆಗಳು ಕೂಡ ಪ್ರಚಲಿತದಲ್ಲಿವೆ. ಬಹುಪಾಲು ಜನರು ಹವ್ಯಕರಾದ್ದರಿಂದ ಸಹಜವಾಗಿ ಸಾಗರದಲ್ಲಿ ಹವ್ಯಕ ಕನ್ನಡ ಚಾಲ್ತಿಯಲ್ಲಿದೆ. ನಂತರ ಅಲ್ಲಿಂದ ಚರಕ ಕಾರ್ಖಾನೆಗೆ ಹೋದೆ ಅಲ್ಲಿ ನಾರಿ ಮಣಿಯರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಅಂದಹಾಗೆ ಈ ಚರಕ ಕಾರ್ಖಾನೆಯಿಂದ ಉಣ್ಣೆಯಿಂದ ಹಲವಾರು ವಿದದ ಬಟ್ಟೆಗಳನ್ನು ತಯಾರಿಸುತ್ತಿದ್ದಾರೆ. ಅದನ್ನು ನಡೆಸುವವರು ಮಹಿಳೆಯರೇ, ಇಲ್ಲಿ ತಯಾರಾದ ಎಷ್ಟೋ ಬಟ್ಟೆಗಳು ನಮ್ಮ ಬೆಂಗಳೂರು ಸೇರಿದಂತೆ ಹಲವಾರು ಪಟ್ಟಣ ಹಾಗು ಬೇರೆ ಬೇರೆ ರಾಜ್ಯಗಳಿಗೂ ಸಹ ರಫ್ತಾಗುತ್ತಿದೆ. ನಾನು ಸಹ ಕೆಲವು ಉಣ್ಣೆಯ ಬಟ್ಟೆಗಳನ್ನು ತೆಗೆದುಕೊಂಡೆ. ನೀವು ಸಹ ಒಮ್ಮೆ ಹೋಗಿ ಬನ್ನಿ ಅಲ್ಲಿನ ಪ್ರಕೃತಿ ತುಂಬಾ ಸುಂದರ ಎಲ್ಲಿ ನೋಡಿದರೂ ಹಚ್ಚ ಹಸಿರು.....

Rating
No votes yet

Comments