1200 ಕೋಟಿ ರೂಪಾಯಿ ಕೊಟ್ಟರೂ ಕನ್ನಡ ಸಿಗದು !

1200 ಕೋಟಿ ರೂಪಾಯಿ ಕೊಟ್ಟರೂ ಕನ್ನಡ ಸಿಗದು !

1200 ಕೋಟಿ ರೂಪಾಯಿ ಕೊಟ್ಟರೂ ಕನ್ನಡ ಸಿಗುವುದಿಲ್ಲ

ಬೆಂಗಳೂರಿನಲ್ಲಿ ಮಧ್ಯಮ-ವರ್ಗದ ಜೀವನ ನಡೆಸಲು ಪ್ರತಿ ತಿಂಗಳು ಕನಿಷ್ಟ ಎಂದರೂ 10 ಸಾವಿರ ರೂಪಾಯಿಗಳನ್ನು ವ್ಯಯ ಮಾಡಬೇಕಾಗುತ್ತದೆ. ಕನಿಷ್ಟವೆಂದರೆ 10 ಲಕ್ಷ ಜನರಾದರೂ ಮಧ್ಯಮ-ವರ್ಗದ ಪಟ್ಟಿಯಲ್ಲಿದ್ದಾರೆ.

ಅಂದರೆ ಬೆಂಗಳೂರಿನಲ್ಲಿ ಪ್ರತಿ ವರ್ಷ ಮಧ್ಯಮ-ವರ್ಗದ ಜನರು ಖರ್ಚು ಮಾಡುವ ಹಣ ಕನಿಷ್ಟವೆಂದರೆ 12 * 10ಲಕ್ಷ *10ಸಾವಿರ = 1,200 ಕೋಟಿ ರೂಪಾಯಿಗಳು (ಕನಿಷ್ಟ) !!!!!!

ಈ ನಮ್ಮ 1,200 ಕೋಟಿ ರೂ ಎಲ್ಲಿಗೆ ಹೋಗುತ್ತಿದೆ ?  ಬನ್ನಿ ಪಟ್ಟಿ ಮಾಡೋಣ:

ಅ) ದಿನಸಿಗಾಗಿ -  ದಿನಸಿ ಅಂಗಡಿ, ಸೂಪರ್ ಮಾರ್ಕಟ್, ಸಣ್ಣ ದೊಡ್ಡ ಬಜಾರುಗಳು...

ಆ) ಮನರಂಜನೆಗಾಗಿ - ಸಿನಿಮಾ ಮಾಲ್, ಶಾಪಿಂಗ್ ಮಾಲ್ ಗಳು...

ಇ) ಶಿಕ್ಷಣಕ್ಕಾಗಿ - ಶಾಲೆ, ಕಾಲೇಜು, ಖಾಸಗೀ ಶಿಕ್ಷಣ ಸಂಸ್ಥೆಗಳು..

ಈ) ಆರೋಗ್ಯಕ್ಕಾಗಿ - ಆಸ್ಪತ್ರೆ, ಕ್ಲೀನಿಕ್, ಲ್ಯಾಬ್, ಔಷಧಾಲಯಗಳು..

ಉ) ಇತರೆ ಸೌಲಭ್ಯಗಳಾದ - ಇಂಟರ್ನೆಟ್, ಮೊಬೈಲ್ ಫೋನ್ 

ಊ) ಚಿನ್ನ, ಬೆಳ್ಳಿ, ವಜ್ರ ಖರೀದಿ

ಋ) ಕಾರು, ಪಟ್ರೋಲು, ಡೀಸಲ್ಲು..

ಉದಾಹರಣೆ:

10 ಸಾವಿರ ಜನರಲ್ಲಿ ಒಬ್ಬೊಬ್ಬರೂ ಕನಿಷ್ಟವೆಂದರೆ 2 ಲಕ್ಷ ರೂ ಗಳನ್ನಾದರೂ
ಬ್ಯಾಂಕುಗಳಲ್ಲಿಟ್ಟಿರುತ್ತಾರೆ. ಅಂದರೆ ಪ್ರತಿ ವರ್ಷ ಕನಿಷ್ಟವೆಂದರೆ ನಮ್ಮಿಂದ ಬೆಂಗಳೂರಿನ
ಬ್ಯಾಂಕುಗಳಿಗೆ ಸಿಗುವ ಠೇವಣೆ 12 * 10 ಸಾವಿರ * 2 ಲಕ್ಷ =240 ಕೋಟಿ ರೂಪಾಯಿಗಳು !!!!

ಇವುಗಳಲ್ಲಿ
ಎಷ್ಟು ಬ್ಯಾಂಕುಗಳು ನಮ್ಮೊಂದಿಗೆ ಕನ್ನಡದಲ್ಲಿ ವ್ಯವಹರಿಸುತ್ತಾರೆ? - ಕನ್ನಡದಲ್ಲಿ cheque
ಸ್ವೀಕರಿಸುತ್ತಾರೆಯೆ? ಮನೆಗೆ ದೂರವಾಣಿ ಕರೆ ನೀಡಿದಾಗ ಕನ್ನಡದಲ್ಲಿ
ಮಾತನಾಡುತ್ತಾರೆಯೆ?

 

ಕನ್ನಡಿಗರೇ ಎದ್ದೇಳಿ !!!

ಹೀಗೆ ಇನ್ನೂ ಹತ್ತು ಹಲವು ವಾಣಿಜ್ಯ-ವ್ಯಾಪಾರ ಮಳಿಗೆಗಳ ಕಡೆ ಕನ್ನಡಿಗರ  1,200 ಕೋಟಿ ರೂಪಾಯಿಗಳು ಹರಿಯುತ್ತಿವೆ.

1,200 ಕೋಟಿ ರೂಪಾಯಿಯಷ್ಟೇ ಅಲ್ಲದೆ ಇಲ್ಲಿನ ಮಾನವ ನೆಲ ಜಲ ಇತರೆ ಸಂಪನ್ಮೂಲಗಳನ್ನು ಬಳಸಿಕೊಂಡೂ ಮೇಲ್ಕಂಡ ವಾಣಿಜ್ಯ-ವ್ಯಾಪಾರದಲ್ಲಿ ತೊಡಗಿರುವ ಅನೇಕ ಸಂಸ್ಥೆಗಳು ಮತ್ತು ವ್ಯಾಪಾರಿಗಳು ಕನ್ನಡದಲ್ಲಿ ಗ್ರಾಹಕ ಸೇವೆಯನ್ನು ನೀಡದಿರುವುದು ಕನ್ನಡದ ವಿಷಯದಲ್ಲಿ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತದೆ.

1,200 ಕೋಟಿ ರೂಪಾಯಿಗಳನ್ನಷ್ಟೇ ಅಲ್ಲದೇ ಇಲ್ಲಿನ ಮಾನವ ನೆಲ ಜಲ ಇತರೆ ಸಂಪನ್ಮೂಲಗಳನ್ನೂ ಕೊಟ್ಟೂ ಕನ್ನಡದಲ್ಲಿ ನಮ್ಮೊಂದಿಗೆ ವ್ಯವಹರಿಸದ ಪರಿಸ್ಥಿತಿಯು ಕನ್ನಡಿಗರ ಜಾಗ್ರತೆಯನ್ನು, ಸ್ವಾಭಿಮಾನವನ್ನು ಪ್ರಶ್ನಿಸುತ್ತದೆ.

"ಉಂಡು ಹೋದ, ಕೊಂಡು ಹೋದ" ಎಂಬ ಪರಿಸ್ಥಿತಿ ಉಂಟಾದರೂ ನಾವೇಕೆ ಇನ್ನೂ ಎಚ್ಚರವಾಗಿಲ್ಲ? "ಸತ್ತಂತಿಹರನು ಬಡಿದೆಚ್ಚರಿಸ"ಲು ಮತ್ತೆ ಯಾರು ಬರಬೇಕು?

 

ನಾವೇನು ಮಾಡಬಲ್ಲೆವು?

ಈ ಒಂದು ಜಾಗೃತಿ ಮೂಡಿದಲ್ಲಿ ಕಾಲೇಜುಗಳಲ್ಲೋದುವ ನಮ್ಮನಿಮ್ಮೆಲ್ಲರ ಕನ್ನಡ ಬಂಧು-ಮಿತ್ರರಿಗೆ ಎಷ್ಟೋ ಸಂಸ್ಥೆಗಳಲ್ಲಿ ಕೆಲಸಗಳು ಲಭ್ಯವಾಗುತ್ತವೆ. ಇದಕ್ಕೆ ನಾವೆಲ್ಲರು ಮಾಡಬೇಕಾದ ಕೆಲಸ ಬಹಳ ಸುಲಭವಾಗಿದೆ:
ಅ) ನಮಗೆ ಬರುವ ಕರೆಗಳನ್ನು ಕನ್ನಡದಲ್ಲೇ ಉತ್ತರಿಸೋಣ
ಆ) ಬ್ಯಾಂಕಿನ ಸಾಲ ಮರುಪಾವತಿ ಮಾಡುವಾಗ ಕನ್ನಡದಲ್ಲೇ ಚೆಕ್ ಬರೆಯೋಣ
ಇ) ಮನೆಯಿಂದ ಹೊರಗೆ ಹೋದಾಗ ನಿಸ್ಸಂಕೋಚದಿಂದ, ಅಭಿಮಾನದಿಂದ ಕನ್ನಡದಲ್ಲಿ ಮಾತನಾಡೋಣ

ಈ) ಎ.ಟಿ.ಎಂ ಗಳಲ್ಲಿ ಕನ್ನಡವಿರದಿದ್ದರೆ ಸಲಹೆ ಬರೆಯೋಣ

Rating
No votes yet

Comments